• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಲ್ವಾಮಾ ದಾಳಿ: ಬಿಜೆಪಿಗೆ ರಾಹುಲ್ ಗಾಂಧಿ ಕೇಳಿದ 3 ಪ್ರಶ್ನೆಗಳು

|

ನವದೆಹಲಿ, ಫೆಬ್ರವರಿ 14: ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು ವರ್ಷ ಕಳೆದಿದೆ. ರಾಹುಲ್ ಗಾಂಧಿ ಬಿಜೆಪಿಯ ಮುಂದೆ ಮೂರು ಪ್ರಶ್ನೆಗಳನ್ನಿಟ್ಟಿದ್ದಾರೆ.

ಭಯೋತ್ಪಾದಕರು ಸೇನಾ ವಾಹನಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಭಯೋತ್ಪಾದಕನೊಬ್ಬ ಕಾರ್​ನಲ್ಲಿ ಬಾಂಬ್ ತುಂಬಿಸಿ ಒಂದು ಸೇನಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಆ ಘಟನೆಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು.

ಪುಲ್ವಮಾ ದಾಳಿಗೆ ಪ್ರತೀಕಾರ; ಬಾಲಕೋಟ್‌ ದಾಳಿ ಯೋಜನೆ ಹೇಗಿತ್ತು?

ದೇಶದ ಭದ್ರತೆ ಅಪಾಯದಲ್ಲಿದೆ. ಉಗ್ರಗಾಮಿಗಳ ಅಟ್ಟಹಾಸ ಮುಂದುವರೆದಿದೆ. ಅವರನ್ನು ಮಟ್ಟ ಹಾಕುತ್ತೇವೆ ಎಂದು ಮೋದಿ ಪಣತೊಟ್ಟಿದ್ದರು.

ಸ್ವಲ್ಪ ದಿನಗಳ ನಂತರ ಪಾಕಿಸ್ತಾನದ ಬಾಲಾಕೋಟ್ ಮೇಲೆ ವಾಯು ದಾಳಿ ನಡೆಸಲಾಯಿತು. ಮರುದಿನ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಎರಡೂ ದೇಶದ ನಡುವೆ ವೈಮಾನಿಕ ಚಕಮಕಿ ನಡೆದವು. ಬಳಿಕ ಪಾಕಿಸ್ತಾನದಿಂದ ಹಲವು ವಿಮಾನಗಳ ಸೇವೆ ವ್ಯತ್ಯಯಗೊಂಡಿತ್ತು. ರಾಷ್ಟ್ರಪತಿ ಸೇರಿದಂತೆ ಯಾರಿಗೂ ಕೂಡ ಪಾಕಿಸ್ತಾನದ ಮೂಲಕ ವಿಮಾನ ಹಾರಾಟಕ್ಕೆ ಅವಕಾಶ ನೀಡಿರಲಿಲ್ಲ.

 ಬಿಜೆಪಿ ಕಾಂಗ್ರೆಸ್ ಪರಸ್ಪರ ದಾಳಿಗೆ ಇದೊಂದು ಅಸ್ತ್ರ

ಬಿಜೆಪಿ ಕಾಂಗ್ರೆಸ್ ಪರಸ್ಪರ ದಾಳಿಗೆ ಇದೊಂದು ಅಸ್ತ್ರ

ಈ ಘಟನೆಯು ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಪರಸ್ಪರ ದಾಳಿಗೆ ಅಸ್ತ್ರವಾಯಿತು. ಇವತ್ತು ಈ ಘಟನೆಯಾಗಿ ಇವತ್ತು ಒಂದು ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಇದನ್ನ ಪ್ರಸ್ತಾಪಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಗೆ 3 ಪ್ರಶ್ನೆಗಳನ್ನ ಹಾಕಿದ್ದಾರೆ.

ರಾಹುಲ್ ಗಾಂಧಿ ಬಿಜೆಪಿಗೆ ಕೇಳಿದ ಮೂರು ಪ್ರಶ್ನೆಗಳು

1) ಪುಲ್ವಾಮಾ ದಾಳಿಯಿಂದ ಹೆಚ್ಚು ಲಾಭ ಮಾಡಿಕೊಂಡಿದ್ದು ಯಾರು?

2) ದಾಳಿ ಘಟನೆಯ ತನಿಖೆಯ ವರದಿ ಏನಾಯಿತು?

3) ದಾಳಿಗೆ ಕಾರಣವಾದ ಭದ್ರತಾ ಲೋಪಗಳಿಗೆ ಯಾರು ಹೊಣೆ?

 ಘಟನೆ ತನಿಖೆಗೆ ಒಳಪಟ್ಟಿತ್ತು

ಘಟನೆ ತನಿಖೆಗೆ ಒಳಪಟ್ಟಿತ್ತು

ಪುಲ್ವಾಮಾ ಉಗ್ರ ದಾಳಿ ಘಟನೆಯಿಂದ ಹೆಚ್ಚು ಲಾಭ ಪಡೆದವರು ಯಾರು? ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಘಟನೆಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಆ ತನಿಖೆಯ ಕಥೆ ಏನಾಯಿತು ಎಂದು ಮತ್ತೊಂದು ಪ್ರಶ್ನೆ ಕೇಳಿದ್ಧಾರೆ. ದಾಳಿಗೆ ಕಾರಣವಾದ ಭದ್ರತಾ ಲೋಪವಾಗಲು ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆ ಎಂದು ಮಗದೊಂದು ಪ್ರಶ್ನೆ ಕೇಳಿದ್ದಾರೆ.

 ಚುನಾವಣೆ ಹೊಸ್ತಿಲಲ್ಲೇ ಪುಲ್ವಾಮಾ ಘಟನೆ ಬಳಕೆ

ಚುನಾವಣೆ ಹೊಸ್ತಿಲಲ್ಲೇ ಪುಲ್ವಾಮಾ ಘಟನೆ ಬಳಕೆ

ರಾಹುಲ್ ಗಾಂಧಿ ಈ ಪ್ರಶ್ನೆ ಕೇಳಲು ಅವರದ್ದೇ ಕಾರಣವಿದೆ. ಚುನಾವಣೆಯ ಹೊಸ್ತಿಲಲ್ಲೇ ನಡೆದಿದ್ದ ಪುಲ್ವಾಮ ದಾಳಿ ಘಟನೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಆರ್ಥಿಕ ಪರಿಸ್ಥಿತಿಯು ಚುನಾವಣೆಯ ಮುಖ್ಯ ವಿಷಯ ಆಗುವ ಬದಲು ದೇಶದ ಭದ್ರತೆಯ ವಿಚಾರ ಪ್ರಮುಖವಾಗಿ ವಿಷಯವಾಗಿತ್ತು.

English summary
Rahul Gandhi Asks 3 Question To BJP, Who benefitted the most from the attack?, What is the outcome of the inquiry into the attack?, Who in the BJP Govt has yet been held accountable for the security lapses that allowed the attack?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X