ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ; ಎಫ್ ಎಟಿಎಫ್ ಗೆ ದಾಖಲೆ, ಮುಂದೇನು?

|
Google Oneindia Kannada News

ನವದೆಹಲಿ, ಫೆಬ್ರವರಿ 16: ಪುಲ್ವಾಮಾದಲ್ಲಿ ಉಗ್ರಗಾಮಿ ದಾಳಿ ನಡೆದು, ನಲವತ್ತಕ್ಕೂ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪಾತ್ರ ಇರುವ ಸಾಕ್ಷ್ಯಗಳನ್ನು ಅಂತರರಾಷ್ಟೀಯ ಭಯೋತ್ಪಾದನಾ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್)ಗೆ ಭಾರತ ನೀಡಲಿದೆ.

ಭಯೋತ್ಪಾದನಾ ಕೃತ್ಯಗಳಲ್ಲಿ ಪಾಕಿಸ್ತಾನದ ನಂಟು ಬಯಲು ಮಾಡುವುದು ಹಾಗೂ ಅದನ್ನು ಕಪ್ಪು ಪಟ್ಟಿಗೆ ಸೇರಿಸುವುದು ಈ ಸಾಕ್ಷ್ಯಾಧಾರಗಳನ್ನು ಒದಗಿಸುವ ಹಿಂದಿನ ಉದ್ದೇಶವಾಗಿ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಸ್ಥಳ, ಸಮಯ, ವಿಧಾನವನ್ನು ನಿರ್ಧರಿಸಲಿದೆ ಸೇನೆ: ಮೋದಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಸ್ಥಳ, ಸಮಯ, ವಿಧಾನವನ್ನು ನಿರ್ಧರಿಸಲಿದೆ ಸೇನೆ: ಮೋದಿ

ಪಾಕಿಸ್ತಾನ ಮೂಲದ ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆ ಈ ಕೃತ್ಯ ಎಸಗಿದೆ ಎಂಬುದಕ್ಕೆ ತನಿಖಾ ಸಂಸ್ಥೆಗಳು ಸಾಕ್ಷ್ಯ ಹಾಗೂ ಕಡತಗಳನ್ನು ಸಿದ್ಧಪಡಿಸಿದೆ. ಇದರ ಜತೆಗೆ ಪಾಕಿಸ್ತಾನದ ತನಿಖಾ ಸಂಸ್ಥೆಗಳ ಜತೆ ಜೈಶ್-ಇ-ಮೊಹ್ಮದ್ ಸಂಘಟನೆ ನಂಟು ಇರುವುದನ್ನು ಕೂಡ ಬಯಲಿಗೆ ಇಡಲಿದೆ. ಹೇಗೆ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ದೊರೆಯಿತು ಎಂಬ ಮಾಹಿತಿ ಕೂಡ ಇದೆ ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

Pulwama Terror attack

ಈ ಹಿಂದೆ ಜೈಶ್ ಇ ಮೊಹ್ಮದ್ ನಡೆಸಿದ ದಾಳಿಗಳ ಮಾಹಿತಿ ಕೂಡ ದಾಖಲೆಯಲ್ಲಿ ಇರಲಿದೆ. ಪ್ಯಾರಿಸ್ ನಲ್ಲಿ ಇರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಗೆ ಈ ದಾಖಲೆಗಳ ಮೂಲಕ, ಹೇಗೆ ಪಾಕಿಸ್ತಾನಿ ಸಂಸ್ಥೆಗಳು ಜೈಶ್ ಇ ಮೊಹ್ಮದ್ ಗೆ ಹಣಕಾಸಿನ ನೆರವು ಒದಗಿಸುತ್ತಿವೆ ಎಂಬುದನ್ನು ತಿಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಫ್ ಎಟಿಎಫ್ ನ ಮುಂದಿನ ಸಭೆಯಲ್ಲಿ, ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ಹಾಕಲಾಗುವುದು. ಆಗ ಆ ದೇಶದ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ಕೂಡ ಹೇಳಲಾಗುತ್ತಿದೆ. ಮುಂದಿನ ವಾರ ಪ್ಯಾರಿಸ್ ನಲ್ಲಿ ಎಫ್ ಎಟಿಎಫ್ ಸಭೆ ನಡೆಸಲಾಗುವುದು.

ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೂ ದೊಡ್ಡ ಬೆಲೆ ತೆರುತ್ತೀರಿ: ಪಾಕ್‌ಗೆ ಮೋದಿ ಎಚ್ಚರಿಕೆದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೂ ದೊಡ್ಡ ಬೆಲೆ ತೆರುತ್ತೀರಿ: ಪಾಕ್‌ಗೆ ಮೋದಿ ಎಚ್ಚರಿಕೆ

ಈ ಸಂಸ್ಥೆಯಿಂದ ಯಾವುದೇ ದೇಶವನ್ನು ಕಪ್ಪು ಪುಟ್ಟಿಗೆ ಸೇರಿಸುವುದು ಅಂದರೆ, ಅಕ್ರಮ ಹಣ ವರ್ಗಾವಣೆ ವಿರುದ್ಧದ ಹೋರಾಟಕ್ಕೆ ಸಹಕರಿಸುತ್ತಿಲ್ಲ ಹಾಗೂ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದೆ ಎಂದರ್ಥ. ಹಾಗೆ ಆದ ಪಕ್ಷದಲ್ಲಿ ಐಎಂಎಫ್, ವರ್ಲ್ಡ್ ಬ್ಯಾಂಕ್, ಎಡಿಬಿ, ಇಯುಗಳು ಆ ದೇಶವನ್ನು ಶ್ರೇಯಾಂಕದಿಂದ ಕೆಳಗಿಳಿಸುತ್ತವೆ. ಜತೆಗೆ ಮೂಡಿ, ಎಸ್ ಅಂಡ್ ಪಿ ಹಾಗೂ ಫಿಚ್ ನಿಂದ ಶ್ರೇಯಾಂಕ ಇಳಿಕೆ ಆಗುತ್ತದೆ.

ಭಯೋತ್ಪಾದನಾ ವಿರೋಧಿ ಚಟುವಟಿಕೆಗೆ ನೀಡುವ ಅನುದಾನದಿಂದ ಕಳೆದ ವರ್ಷ ಜುಲೈನಿಂದ ಈಚೆಗೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಯಲ್ಲಿ ಇಡಲಾಗಿದೆ. ಸದ್ಯಕ್ಕೆ ಎಫ್ ಎಟಿಎಫ್ ನಲ್ಲಿ ಮೂವತ್ತೈದು ಸದಸ್ಯರು, ಎರಡು ಪ್ರಾದೇಶಿಕ ಸಂಸ್ಥೆಗಳು- ಯುರೋಪಿಯನ್ ಕಮಿಷನ್ ಮತ್ತು ಗಲ್ಪ್ ಕೋ ಆಪರೇಷನ್ ಕೌನ್ಸಿಲ್ ಇದೆ. ಉತ್ತರ ಕೊರಿಯಾ ಹಾಗೂ ಇರಾನ್ ಈಗಾಗಲೇ ಕಪ್ಪು ಪಟ್ಟಿಯಲ್ಲಿವೆ.

English summary
India will give a dossier with evidence of Pakistan's involvement in Pulwama terrorist attack which left over 40 jawans dead to international terror financing watchdog, Financial Action Task Force (FATF), said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X