ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಲಿ ಚಿತ್ರ ನೋಡಿದ ಶಿಕ್ಷಕರು ಸೀದಾ ಮನೆಗೆ

By Srinath
|
Google Oneindia Kannada News

Kerala Puducherry school teachers watching blue film websites suspended,
ಪುದುಚೇರಿ, ನ. 29: ಅವರು ಪದವೀಧರ ಶಿಕ್ಷಕರು. ಸರಕಾರಿ ಶಾಲೆಯೊಂದರಲ್ಲಿ ಮುಗ್ಧ ಮಕ್ಕಳಿಗೆ ಪಾಠ ಹೇಳಿಕೊಡುವ ಗುರುತರ ಜವಾಬ್ದಾರಿ ಅವರ ಮೇಲಿತ್ತು. ಆದರೆ ಅವರಲ್ಲಿ ಸ್ವಲ್ಪ ವಕ್ರಬುದ್ಧಿ ಕಾಣಿಸಿಕೊಂಡಿದೆ. ಜಿಲ್ಲೆಯ ಅರುಂಪಥಪುರಂ ತಿರು ವಿ ಕ ಸರಕಾರಿ ಹೈಸ್ಕೂಲಿನಲ್ಲಿ ಈ ಪ್ರಕರಣ ನಡೆದಿದೆ.

ನಾಲ್ವರು ಶಿಕ್ಷಕರು ಕಂಪ್ಯೂಟರ್ ತರಗತಿ ನಡೆಯುತ್ತಿದ್ದಾಗ ಕದ್ದುಮುಚ್ಚಿ ನೀತಿ ಚಿತ್ರ ಹಾಕಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ನಮ್ಮ ಹೆಣ್ಣುಮಕ್ಕಳನ್ನೂ ಆ ಗಲೀಜು ಚಿತ್ರಗಳನ್ನು ನೋಡುವಂತೆ ಪೀಡಿಸಿದ್ದಾರೆ ಎಂದು ಶಾಲೆಯ ಹೆಣ್ಣುಮಕ್ಕಳ ಪೋಷಕರು ಇದೀಗ ಅಲವತ್ತುಕೊಂಡಿದ್ದಾರೆ. ತತ್ಪರಿಣಾಮ ಪದವೀಧರ ಶಿಕ್ಷಕರಿಗೆ ಗೇಟ್ ಪಾಸ್ ನೀಡಲಾಗಿದೆ. ವಜಾಗೊಂಡ ಪಾಪಿ ಶಿಕ್ಷಕರು ಮನೆ ಸೇರಿಕೊಂಡಿದ್ದಾರೆ.

ಪದವೀಧರ ಶಿಕ್ಷಕರಾದ ಜುದೆ ಅನ್ಬಳಗನ್, ಸಿವಾ ಕುಮಾರ್ ಮತ್ತು ಅಬ್ದುಲ್ ಮಲಿಕ್ ಹಾಗೂ ದೈಹಿಕ ಶಿಕ್ಷಣ ತರಬೇತುದಾರ ಅಬ್ದುಲ್ ರಶೀದ್ ಈ ಕುಕೃತ್ಯವೆಸಗಿರುವ ಆರೋಪಿಗಳು.

ವಾಸ್ತವವಾಗಿ ಒಂದು ತಿಂಗಳ ಹಿಂದೆಯೇ ಈ ರಾದ್ಧಾಂತ ನಡೆದಿದ್ದು, ಪೋಷಕರು ವಿಷಯವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಆದರೆ ಮಂಡಳಿ ವಿಳಂಬ ಧೋರಣೆ ತಳೆದಿತ್ತು. ತದನಂತರ ಒತ್ತಡ ಹೆಚ್ಚಾದಾಗ ಅವರನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿದೆಯಷ್ಟೇ. ಹೆಚ್ಚಿನ ತನಿಖೆ ನಡೆಸಿಲ್ಲ. ಅವರ ವಿರುದ್ಧ ಶಿಸ್ತು ಕ್ರಮವನ್ನೂ ಜರುಗಿಸಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ತಕ್ಷಣ ಹೆಚ್ಚಿನ ಕ್ರಮ ಕೈಗೊಳ್ಳದಿದ್ದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಪೋಷಕರು ಎಚ್ಚರಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಇದೀಗ ಎಚ್ಚೆತ್ತುಕೊಂಡಿದ್ದು ಇಲಾಖಾ ತನಿಖೆ ನಡೆಸಲು ನಿರ್ಧರಿಸಿದೆ. ವರದಿಯನ್ನು ಸರಕಾರಕ್ಕೆ ಕಳುಹಿಸುತ್ತೇವೆ. ಮುಂದಿನ ಕ್ರಮ ಕೈಗೊಳ್ಳುವುದು ಸರಕಾರಕ್ಕೆ ಬಿಟ್ಟ ವಿಷಯ ಎಂದು ಶಾಲಾ ಆಡಳಿತಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

English summary
Four teachers of a government high school were suspended on Thursday for allegedly watching pornographic content in the school computer in Puducherry. Parents alleged that the teachers also forced girl students to watch pornographic content and sexually molested them. Three trained graduate teachers -- Jude Anbalagan, Siva Kumar and Abdul Malik -- and a physical education teacher - Abdul Rasheed - are the suspended staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X