ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಅಜ್ಜಿಯ ಮಸ್ತ್ ಮಸ್ತ್ ಡ್ಯಾನ್ಸ್, 1,500 ಮಹಿಳೆಯರಿಗೆ ಹಬ್ಬದ ಉಡುಗೊರೆ

|
Google Oneindia Kannada News

ಪುದುಚೇರಿ, ಜನವರಿ.15: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುವ ಅಜ್ಜಿ ಕುಣಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಪುದುಚೇರಿಯಲ್ಲಿ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪಿಡಬ್ಲ್ಯೂಡಿ ಹಾಗೂ ಮಹಾನಗರ ಪಾಲಿಕೆಯ ಮಹಿಳಾ ಸಿಬ್ಬಂದಿಯನ್ನೆಲ್ಲ ಒಂದೆಡೆ ಸೇರಿಸಿ ಹಬ್ಬವನ್ನು ಆಚರಣೆ ಮಾಡಲಾಯಿತು. ಇದೇ ವೇಳೆ ರೌಡಿ ಬೇಬಿ ಸಾಂಗ್ ಗೆ ಅಜ್ಜಿಯೊಬ್ಬರು ಸಖತ್ ಆಗಿ ಸ್ಟೆಪ್ ಹಾಕಿದರು.

Puducherry’s Lieutenant Governor Kiran Bedi Shared A Video Of A Woman Dance

ತಮಿಳಿನ ಮಾರಿ-2 ಸಿನಿಮಾದ ರೌಡಿ ಬೇಬಿ ಹಾಡಿಗೆ ಇಳಿವಯಸ್ಸಿನಲ್ಲೂ ಮಸ್ತ್ ಮಸ್ತ್ ಆಗಿ ಕುಣಿದ ಅಜ್ಜಿಯ ವಿಡಿಯೋವನ್ನು ಸ್ವತಃ ಪುದುಚೇರಿ ಗರ್ವನರ್ ಕಿರಣ್ ಬೇಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದಾರೆ.

Puducherry’s Lieutenant Governor Kiran Bedi Shared A Video Of A Woman Dance

1,500 ಮಹಿಳಾ ಸಿಬ್ಬಂದಿಗೆ ಉಚಿತ ಸೀರೆ:

ಪುದುಚೇರಿ ನಗರವನ್ನು ನಿತ್ಯ ಸ್ವಚ್ಛವಾಗಿಡಲು ಶ್ರಮಿಸುವ ಮಹಾನಗರ ಪಾಲಿಕೆ ಮಹಿಳಾ ಸಿಬ್ಬಂದಿಯನ್ನು ಒಂದೆಡೆ ಸೇರಿಸಲಾಗಿತ್ತು. ಈ ವೇಳೆ ಸುಮಾರು 1,500 ಮಹಿಳೆಯರಿಗೆ ಪೊಂಗಲ್ ಹಬ್ಬದ ಉಡುಗೊರೆಯಾಗಿ ಸೀರೆಯನ್ನು ವಿತರಣೆ ಮಾಡಲಾಯಿತು. ಮಹಿಳಾ ಸಿಬ್ಬಂದಿಗೆ ಪೊಂಗಲ್ ಹಬ್ಬದ ಉಡುಗೊರೆ ನೀಡಿದ್ದಕ್ಕೆ ಸಂತೋಷವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ.

 ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ! ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!

English summary
Video Viral: Puducherry’s Lieutenant Governor Kiran Bedi Shared A Video Of A Woman Danceing In Pongal Celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X