ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಜಯಂತಿ ವೇದಿಕೆಯಲ್ಲೇ ಕಿತ್ತಾಡಿದ ಕಿರಣ್ ಬೇಡಿ-ಎಐಎಡಿಎಂಕೆ ಶಾಸಕ

|
Google Oneindia Kannada News

ಉಪ್ಪಾಳಂ, ಅಕ್ಟೋಬರ್ 2: ಪುದುಚೆರಿಯ ಉಪ್ಪಾಳಂನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಎಐಎಡಿಎಂಕೆ ಶಾಸಕ ಎ. ಅಣ್ಬಾಲಗನ್ ಅವರ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು.

ಕಿರಣ್ ಬೇಡಿ ವೇದಿಕೆಯಲ್ಲಿ ಇರುವಾಗಲೇ ಅಣ್ಬಾಲಗನ್, ಬೇಡಿ ಅವರ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು. ಅಲ್ಲದೆ, ಕಿರಣ್ ಬೇಡಿ ಅವರ ಅಧಿಕಾರಾವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದು ಆರೋಪಿಸಿದರು.

'ಬೇಡಿಯವರೇ, ಇದೆಲ್ಲ ಬೇಕಿತ್ತಾ?' ಕಿರಣ್ ವಿರುದ್ಧ ಟ್ರೋಲಾಸ್ತ್ರ!'ಬೇಡಿಯವರೇ, ಇದೆಲ್ಲ ಬೇಕಿತ್ತಾ?' ಕಿರಣ್ ವಿರುದ್ಧ ಟ್ರೋಲಾಸ್ತ್ರ!

ತಮ್ಮ ಕ್ಷೇತ್ರಕ್ಕೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದರೂ ಜಾರಿ ಮಾಡದ ಯೋಜನೆಗಳ ಪಟ್ಟಿಯನ್ನು ಅವರು ಓದಿದರು.

puducherry governor Kiran Bedi aiadmk mla anbalagan verbal spat on gandhi jayanti

ಅವರ ಆಕ್ಷೇಪಣೆಗಳನ್ನು ಆಲಿಸಿದ ಬೇಡಿ, ಅವರ ಬಳಿಗೆ ಹೋಗಿ ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ಎಲ್ಲ ಕೆಲಸಗಳೂ ಆರಂಭವಾಗಲಿವೆ ಎಂದು ಭರವಸೆ ನೀಡಿದರು. ಆದರೆ, ಅದಕ್ಕೆ ಕಿವಿಗೊಡದ ಅಣ್ಬಾಲಗನ್, ಅವರ ವಿರುದ್ಧ ಆರೋಪ ಮಾಡುವುದನ್ನು ಮುಂದುವರಿಸಿದರು.

ಬಾಲಕಿಯ ಪಾದಮುಟ್ಟಿ ನಮಸ್ಕರಿಸಿದ ಕಿರಣ್ ಬೇಡಿಬಾಲಕಿಯ ಪಾದಮುಟ್ಟಿ ನಮಸ್ಕರಿಸಿದ ಕಿರಣ್ ಬೇಡಿ

ಶಾಸಕ ತಮ್ಮ ಭಾಷಣವನ್ನು ಮುಗಿಸದೆ ಇದ್ದಾಗ ಸಿಟ್ಟಿಗೆದ್ದ ಕಿರಣ್ ಬೇಡಿ, ಮೈಕ್ ಆಫ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಕೋಪಗೊಂಡ ಶಾಸಕ ಬೇಡಿ ವಿರುದ್ಧ ಏರುಧ್ವನಿಯಲ್ಲಿ ಮಾತನಾಡತೊಡಗಿದರು.

ವೇದಿಕೆಯಿಂದ ಕೆಳಕ್ಕೆ ಹೋಗುವಂತೆ ಬೇಡಿ ಅವರಿಗೆ ಸೂಚಿಸಿದರು. ಆದರೆ, ಅವರೊಂದಿಗೆ ಜಗಳ ತೆಗೆದ ಶಾಸಕ ನೀವೇ ವೇದಿಕೆಯಿಂದ ಹೋಗಿ ಎಂದು ದಬಾಯಿಸಿದರು.

ಬೇಡಿ ಅವರ ವಿರುದ್ಧ ಅಣ್ಬಾಲಗನ್ ಟೀಕೆ ನಡೆಸುತ್ತಿರುವುದು ಇದು ಮೊದಲೇನಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಪುದುಚೆರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಬೇಡಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದರು.

ಲೆಫ್ಟನೆಂಟ್ ಗವರ್ನರ್ ಹುದ್ದೆ ತೊರೆಯುವೆ: ಕಿರಣ್ ಬೇಡಿ ಲೆಫ್ಟನೆಂಟ್ ಗವರ್ನರ್ ಹುದ್ದೆ ತೊರೆಯುವೆ: ಕಿರಣ್ ಬೇಡಿ

ಸಂಪುಟದ ನಿರ್ಧಾರಗಳು ತಮ್ಮ ಮುಂದೆ ಬಂದಾಗ ಅವುಗಳಿಗೆ ಅನುಮೋದನೆ ನೀಡಲು ಬೇಡಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಯೋಜನೆಗಳು ನನೆಗುದಿಗೆ ಬೀಳುತ್ತಿವೆ ಎಂದು ಆರೋಪಿಸಿದ್ದರು.

English summary
A verbal spat witnessed on stage between Puducherry Lt Governor Kiran Bedi and AIADMK MLA Anbalagan on Gandhi Jayanti celebration in Uppalam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X