ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 6 ರಂದು ಪುದುಚೇರಿ ವಿಧಾನಸಭಾ ಚುನಾವಣೆ, ಮೇ 2ಕ್ಕೆ ಮತ ಎಣಿಕೆ

|
Google Oneindia Kannada News

ನವದೆಹಲಿ,ಫೆಬ್ರವರಿ 26:ಕೇಂದ್ರ ಚುನಾವಣಾ ಆಯೋಗವು ತಮಿಳುನಾಡು,ಪುದುಚೇರಿ,ಅಸ್ಸಾಂ,ಕೇರಳ,ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ದಿನಾಂಕಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪುದುಚೆರಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.ವಿಜ್ಞಾನ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ಅಸ್ಸಾಂನಲ್ಲಿ 3 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ಕ್ಕೆ ಮೊದಲ ಹಂತದ ಚುನಾವಣೆ, ಏಪ್ರಿಲ್ 1 ರಿಂದ ಎರಡನೇ ಹಂತದ ಚುನಾವಣೆ, ಏಪ್ರಿಲ್ 6ಕ್ಕೆ ಮೂರನೇ ಹಂತದ ಚುನಾವಣೆ ಹಾಗೂ ಮೇ2ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Puducherry Election Dates 2021: Voting On 6th April, Counting Of Votes On 2nd May

30 ಸದಸ್ಯರಿರುವ ಪುದುಚೇರಿ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಏಪ್ರಿಲ್ 6 ರಂದು ನಡೆಯಲಿದೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಐದು ಸ್ಥಾನಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಪುದುಚೆರಿಯಲ್ಲಿ 1559 ಮತಗಟ್ಟೆಗಳಿವೆ.
ಅಧಿಸೂಚನೆ ಮಾರ್ಚ್ 12
ನಾಮ ಪತ್ರ ಸಲ್ಲಿಕೆಗೆ ಅಂತಿಮ ದಿನಾಂಕ ಮಾರ್ಚ್ 19
ನಾಮಪತ್ರ ಪರಿಶೀಲನೆ ಮಾರ್ಚ್ 20
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಮಾರ್ಚ್ 22
ಚುನಾವಣೆ ಏಪ್ರಿಲ್ 6
ಮತ ಎಣಿಕೆ ಮೇ 2
ಚುನಾವಣೆಗೆ ಕೋವಿಡ್ ಮಾರ್ಗಸೂಚಿಗಳೇನಿವೆ?
*ಅಭ್ಯರ್ಥಿ ಜತೆ ಇಬ್ಬರಿಗೆ ಮಾತ್ರ ತೆರಳಲು ಅವಕಾಶ
*ಮನೆ,ಮನೆ ಪ್ರಚಾರಕ್ಕೆ ಕೇವಲ ಐವರಿಗೆ ಮಾತ್ರ ಅವಕಾಶ
*ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ
*ನಾಮಪತ್ರ ಸಲ್ಲಿಸಲು ಎರಡು ವಾಹನಗಳಲ್ಲಿ ಮಾತ್ರ ಬರಬೇಕು
*ಮತದಾರರ ಭದ್ರತೆಗೆ ಆದ್ಯತೆ
*ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಎಸ್‌ಒಪಿ
*ಮತದಾನ ಅವಧಿ ಒಂದು ಗಂಟೆ ವಿಸ್ತರಣೆ
*ಶೇ.50ರಷ್ಟು ಮತಗಟ್ಟೆಗಳಲ್ಲಿ ವೋಟಿಂಗ್ ದೃಶ್ಯ ನೇರಪ್ರಸಾರ
* ಚುನಾವಣಾಧಿಕಾರಿ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಬೇಕು

English summary
Chief Election Commissioner Sunil Arora said the elections for the 30-member Puducherry Assembly will be held in a single phase on April 6 while the results will be announced on May 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X