ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುದುಚೆರಿ: ಎನ್‌ಡಿಎಗೆ ಅತ್ಯಲ್ಪ ಬಹುಮತ, ಪಕ್ಷೇತರರ ಮೇಲೆ ಕಣ್ಣು?

|
Google Oneindia Kannada News

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಹುತೇಕ ರಾಜ್ಯಗಳಲ್ಲಿ ಜನರ ಆದೇಶ ಸ್ಪಷ್ಟವಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿಯೂ ಸ್ಪಷ್ಟವಾದ ಜನಾದೇಶವೇ ಬಂದಿದೆಯಾದರೂ ಎನ್‌ಡಿಎಗೆ ಸಣ್ಣ ಮಟ್ಟಿನ ಬಹುಮತವಷ್ಟೆ ಧಕ್ಕಿದೆ.

ಪುದುಚೆರಿಯ 30 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು 16 ಕ್ಷೇತ್ರ ಪಡೆದವರು ಸರ್ಕಾರ ರಚಿಸಬಹುದಾಗಿದೆ. ಇಂದು ನಡೆದ ಮತ ಎಣಿಕೆ ಫಲಿತಾಂಶದಂತೆ ಬಿಜೆಪಿಯು 6 ಸ್ಥಾನಗಳಲ್ಲಿ ಗೆದ್ದಿದ್ದರೆ ಬಿಜೆಪಿಯ ಮಿತ್ರ ಪಕ್ಷ ಆಲ್‌ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷವು 10 ಸ್ಥಾನಗಳಲ್ಲಿ ಗೆದ್ದಿದೆ.

ಕಾಂಗ್ರೆಸ್ ಪಕ್ಷ ಎರಡು ಸ್ಥಾನದಲ್ಲಿ ಗೆದ್ದಿದ್ದರೆ ಕಾಂಗ್ರೆಸ್‌ನ ಮಿತ್ರ ಪಕ್ಷ ಡಿಎಂಕೆ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಮತ್ತು ಆಲ್‌ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷಗಳು ಒಟ್ಟಿಗೆ ಸರ್ಕಾರ ರಚಿಸಲು ಬೇಕಾದಷ್ಟು ಸಂಖ್ಯೆಯನ್ನು ಹೊಂದಿವೆಯಾದರೂ ಇದು ಬಹಳ ಅಲ್ಪ ಬಹುಮತ.

Puducherry Assembly Election 2021: NDA Got Least Majority

ಪುದುಚೆರಿಯಲ್ಲಿ ಒಟ್ಟು 6 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಬಿಜೆಪಿ ಮತ್ತು ಆಲ್‌ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷವು ಪಕ್ಷೇತರ ಅಭ್ಯರ್ಥಿಗಳನ್ನು ತಮ್ಮೆಡೆಗೆ ಸೆಳೆಯಲು ಮುಂದಾಗುವ ದಟ್ಟ ಸಾಧ್ಯತೆ ಇದೆ.

Recommended Video

ತಮಿಳುನಾಡಲ್ಲಿ ಗೆಲುವಿಗಾಗಿ ಹರಸಾಹಸ ಪಡುತ್ತಿರುವ ಕೆ ಅಣ್ಣಾಮಲೈ

ಒಂದೊಮ್ಮೆ ಕಾಂಗ್ರೆಸ್ ಅಥವಾ ಡಿಎಂಕೆ ಪಕ್ಷವು ಬಿಜೆಪಿ ಅಥವಾ ಎಐಎನ್‌ಆರ್‌ ಕಾಂಗ್ರೆಸ್ ಪಕ್ಷದಿಂದ ಒಬ್ಬ ಶಾಸಕರನ್ನು ತನ್ನತ್ತ ಸೆಳೆದುಕೊಂಡರು ಬಿಜೆಪಿ ಮತ್ತು ಎಐಎನ್‌ಆರ್‌ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವುದು ಕಷ್ಟವಾಗುವ ಸಾಧ್ಯತೆ ಇದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವ ಬದಲಿಗೆ ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯಲು ಎನ್‌ಡಿಎ ಯತ್ನಿಸಬಹುದು.

English summary
Puducherry assembly election 2021: NDA got least majority. It may attract some Independent candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X