ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಸಾರಿಗೆ ಸಂಚಾರ: ನಿತಿನ್ ಗಡ್ಕರಿ ಕೊಟ್ಟರು ಬ್ರೇಕಿಂಗ್ ನ್ಯೂಸ್

|
Google Oneindia Kannada News

ನವದೆಹಲಿ, ಮೇ 6: "ಲಾಕ್ ಡೌನ್ ನಂತರ ಸ್ಥಬ್ದಗೊಂಡಿದ್ದ ಸಾರ್ವಜನಿಕ ಸಾರಿಗೆ ಸಂಚಾರವನ್ನು ಸದ್ಯದಲ್ಲೇ ಪುನರಾರಂಭಿಸಲಾಗುವುದು"ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Recommended Video

ಲಾಕ್ ಡೌನ್ ಟೈಂನಲ್ಲಿ ರಿಯಲ್ ಸಿನಿಮಾ ಮಾಡಲು ಹೊರಟಿದ್ದಾರೆ ಉಪೇಂದ್ರ | Upendra | Oneindia Kannada

ಸರಕು ಸಾಗಣಿ ಉದ್ಯಮದ ಮುಖಂಡರ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯ ವೇಳೆ ಸಚಿವರು ಈ ಭರವಸೆಯನ್ನು ನೀಡಿದ್ದಾರೆ. "ಕೆಲವು ನಿರ್ಬಂಧಗಳನ್ನು ಹಾಕಿ, ಸಾರಿಗೆ ಸಂಚಾರ ಆರಂಭಿಸಲು ತಯಾರಿಗಳನ್ನು ನಡೆಸಲಾಗುತ್ತಿದೆ"ಎಂದು ಗಡ್ಕರಿ ಹೇಳಿದ್ದಾರೆ.

19 ದಿನಗಳ ಚಿಕಿತ್ಸೆಯಿಂದ ಕೊರೊನಾ ವೈರಸ್ ಮಂಗಮಾಯ! 19 ದಿನಗಳ ಚಿಕಿತ್ಸೆಯಿಂದ ಕೊರೊನಾ ವೈರಸ್ ಮಂಗಮಾಯ!

"ಸಂಚಾರ ಆರಂಭವಾದ ನಂತರ, ಮಾಸ್ಕ್, ಸ್ಯಾನಿಟೈಶರ್ ಬಳಸಿಕೊಳ್ಳುವುದು, ಸಾಮಾಜಿಕ ಅಂತರವನ್ನು ಕಾಯ್ಡುಕೊಳ್ಳುವುದು, ಶುಚಿತ್ವವನ್ನು ಕಾಪಾಡಿಕೊಳ್ಳಲು ಸಭೆಯಲ್ಲಿ ಸೂಚಿಸಲಾಗಿದೆ"ಎಂದು ಗಡ್ಕರಿ ಹೇಳಿದ್ದಾರೆ.

Public Transport May Open Soon With Some Guidelines, Says Nitin Gadkari

"ಸಾರಿಗೆ ಸಂಚಾರ ಸದ್ಯದಲ್ಲೇ ಆರಂಭಿಸುವುದಾಗಿ ಸಚಿವರು ಹೇಳಿದ್ದಾರೆ. ಆದರೆ, ಯಾವುದೇ ದಿನ ನಿಗದಿ ಪಡಿಸಿಲ್ಲ" ಎಂದು ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಯೊಬ್ಬರು ಹೇಳಿದ್ದಾರೆ. ಮೇ ಹದಿನೇಳರಂದು ಮೂರನೇ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ.

ಪ್ರಮುಖವಾಗಿ ಹಸಿರು ವಲಯದಲ್ಲಿ ಈಗಾಗಲೇ ಹಲವು ನಿರ್ಬಂಧಗಳನ್ನು ಸಡಿಸಲಾಗಿದೆ. ಕೈಗಾರಿಕೆ ಆರಂಭಿಸಲೂ ಷರತ್ತುಬದ್ದ ಅನುಮತಿ ನೀಡಲಾಗಿದೆ.

ಆದರೆ, ಅಂತರ್ ಜಿಲ್ಲೆ/ರಾಜ್ಯ ಸಂಚಾರಕ್ಕೆ ಕೇಂದ್ರ ಅಥವಾ ರಾಜ್ಯ ಸರಕಾರ ಇನ್ನೂ ಅನುಮತಿಯನ್ನು ನೀಡಲಿಲ್ಲ. ಸಚಿವ ಗಡ್ಕರಿ ಮಾತಿನಂತೆ, ಮೇ ಹದಿನೇಳರ ನಂತರ ಇದು ಆರಂಭವಾಗುವ ಸಾಧ್ಯತೆಯಿದೆ.

English summary
Public Transport May Open Soon With Some Guidelines, Says Nitin Gadkari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X