ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ದಿನದ ಬ್ಯಾಂಕ್ ಬಂದ್ ಮುಂದೂಡಿದ ಅಧಿಕಾರಿಗಳ ಒಕ್ಕೂಟ

|
Google Oneindia Kannada News

Recommended Video

ಎರಡು ದಿನದ ಬ್ಯಾಂಕ್ ಬಂದ್ ಮುಂದೂಡಿಕೆ | Oneindia Kannada

ನವದೆಹಲಿ, ಸೆಪ್ಟೆಂಬರ್ 24: ಸಾರ್ವಜನಿಕ ವಲಯದ ಬ್ಯಾಂಕ್ ಗಳ ವಿಲೀನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಇರುವ ಆಕ್ಷೇಪಗಳನ್ನು ಪರಾಮರ್ಶಿಸುವುದಾಗಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಖಾತ್ರಿ ನೀಡಿದ್ದರಿಂದ ಸಾರ್ವಜನಿಕ ಬ್ಯಾಂಕ್ ಗಳ ಅಧಿಕಾರಿಗಳ ಒಕ್ಕೂಟವು ಎರಡು ದಿನದ ಬಂದ್ ಅನ್ನು ಮುಂದೂಡಿದೆ.

ಸೆಪ್ಟಂಬರ್ ಮಾಸಾಂತ್ಯದಲ್ಲಿ ಬರೋಬ್ಬರಿ 4 ದಿನ ಬ್ಯಾಂಕ್ ರಜೆಸೆಪ್ಟಂಬರ್ ಮಾಸಾಂತ್ಯದಲ್ಲಿ ಬರೋಬ್ಬರಿ 4 ದಿನ ಬ್ಯಾಂಕ್ ರಜೆ

ನವದೆಹಲಿಯಲ್ಲಿ ರಾಜೀವ್ ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ನಾಲ್ಕು ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳು ಸೋಮವಾರ ಹೇಳಿಕೆ ನೀಡಿದ್ದಾರೆ. ಮೆಗಾ ಬ್ಯಾಂಕ್ ವಿಲೀನ ಘೋಷಣೆಯೂ ಸೇರಿದಂತೆ ಇತರ ಆಕ್ಷೇಪಗಳ ಬಗ್ಗೆ ತಿಳಿದುಕೊಳ್ಳಲು ಸಮಿತಿ ರಚಿಸಲು ಸರಕಾರ ಒಪ್ಪಿಕೊಂಡಿದೆ ಎಂದು ಒಕ್ಕೂಟಗಳ ನಾಯಕರು ತಿಳಿಸಿದ್ದಾರೆ.

Public Sector Bank Strike Deferred By Union

ಸಾರ್ವಜನಿಕ ಸ್ವಾಮ್ಯದ ಹತ್ತು ಬ್ಯಾಂಕ್ ಗಳನ್ನು ನಾಲ್ಕಕ್ಕೆ ಇಳಿಸುವುದರ ವಿರುದ್ಧ ಎರಡು ದಿನಗಳ ಬಂದ್ ನಡೆಸಲು ನಾಲ್ಕು ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ಎಚ್ಚರಿಕೆ ನೀಡಿತ್ತು. ಈ ಹಿಂದೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ ಅಂಡ್ ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಆಫೀಸರ್ಸ್ ನಿಂದ ಸೆಪ್ಟೆಂಬರ್ 26- 27ರಂದು ಅಖಿಲ ಭಾರತ ಮಟ್ಟದ ಬಂದ್ ಗೆ ಕರೆ ನೀಡಲಾಗಿತ್ತು.

English summary
After meeting with finance secretary Rajiv Kumar by bank association representatives, two days bank strike postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X