• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಲಂಕಾದಲ್ಲಿ ವರುಣನ ರುದ್ರ ನರ್ತನ, ಬದುಕು ಕಸಿದ ಭಗವಂತ

|

ಬೆಂಗಳೂರಿನಲ್ಲಿ ಮಳೆ ತಂದ ಅವಾಂತರಗಳ ತೂಕ ಒಂದಾದರೆ, ಶ್ರೀಲಂಕಾದಲ್ಲಿ ವರುಣನ ರುದ್ರನರ್ತನದಿಂದ ಆದ ಆನಾಹುತಗಳು ಮತ್ತೊಂದು ಬಗೆಯದಾಗಿದೆ. ಅಲ್ಲಿ ಎಷ್ಟೋ ಹಳ್ಳಿಗಳು ದ್ವೀಪದಂತಾಗಿವೆ. ನೂರೈವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಅಲ್ಲಿ ಮಳೆಯಿಂದ ಆದ ಅನಾಹುತಗಳ ಚಿತ್ರಗಳನ್ನು ವಾಯುಸೇನೆಯವರು ಸೆರೆ ಹಿಡಿದಿದ್ದಾರೆ.

ಸದ್ಯಕ್ಕಂತೂ ದ್ವೀಪರಾಷ್ಟ್ರ ಶ್ರೀಲಂಕಾ ಸುಧಾರಿಸಿಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಇನ್ನು ಜರ್ಮನಿ ಪ್ರವಾಸದಲ್ಲಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲ್ಲಿ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಅವರ ಜತೆಗೆ ಸಂವಾದ ನಡೆಸಿದ್ದಾರೆ. ಅಲ್ಲಿಗೆ ಹೋದ ಮೇಲೆ ಚಾನ್ಸೆಲರ್ ನ ಭೇಟಿ ಆಗದೆ ಇರ್ತಾರಾ ಅನ್ನೋ ಪ್ರಶ್ನೆ ಅಲ್ಲವಾ?[ಕಳೆದೆರಡು ದಿನಗಳಿಂದ ಮಳೆ, ನಂಜನಗೂಡಿನ ಹೆಡತಲೆ ಗ್ರಾಮ ಜಲಾವೃತ]

ಇಬ್ಬರ ಮಧ್ಯೆ ಮಾತುಕತೆ ವೇಳೆ ಯಾವುದೋ ಗಹನವಾದ ಆಲೋಚನೆಯಲ್ಲಿ ತೊಡಗಿದಂತೆ ಕಾಣುತ್ತಿದ್ದಾರೆ ಮೋದಿ. ಇನ್ನು ಅಲಹಾಬಾದ್ ನ ಉದ್ಯಾನವೊಂದರಲ್ಲಿ ಯೋಗದ ಅಭ್ಯಾಸದಲ್ಲಿ ತೊಡಗಿದವರು ಫೋಟೋ ಸಹ ಇಲ್ಲಿದೆ. ಇರಲಿ, ಇವೆಲ್ಲವುಗಳನ್ನು ನೋಡಿ, ನಿಮಗೆ ಅನ್ನಿಸಿದ್ದರ ಬಗ್ಗೆ ನಮಗೆ ತಿಳಿಸಿ.[ಬೆಂಗ್ಳೂರಲ್ಲಿ ಮಹಾ ಮಳೆ, ದುರ್ಗದಲ್ಲಿ ಬೇಯುತಿದೆ ಇಳೆ (ವಿಶೇಷ ವರದಿ)]

ಕ್ಯಾಮೆರಾ ಕಣ್ಣಿನಲ್ಲಿ ಯೋಗ ಭಂಗಿ

ಕ್ಯಾಮೆರಾ ಕಣ್ಣಿನಲ್ಲಿ ಯೋಗ ಭಂಗಿ

ಅಲಹಾಬಾದ್ ನ ಉದ್ಯಾನದಲ್ಲಿ ಯೋಗಾಭ್ಯಾಸದಲ್ಲಿ ತೊಡಗಿದ್ದ ಜನರು ಕ್ಯಾಮೆರಾ ಕಣ್ಣು ಮಿಟುಕಿಸಿದಾಗ ಕಂಡ ದೃಶ್ಯ ಇದು.

ಮರ್ಕೆಲ್ ಜತೆಗೆ ಮೋದಿ ಸಂವಾದ

ಮರ್ಕೆಲ್ ಜತೆಗೆ ಮೋದಿ ಸಂವಾದ

ಜರ್ಮನಿಯ ಬರ್ಲಿನ್ ಗೆ ಎಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಮೆಸ್ ಬರ್ಗ್ ಅರಮನೆಯ ಉದ್ಯಾನದಲ್ಲಿ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಜತೆಗೆ ಸಂವಾದದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ತೊಡಗಿದ್ದ ಕ್ಷಣವಿದು.

ಶ್ರೀಲಂಕಾದಲ್ಲಿ ವರುಣನ ರುದ್ರ ನರ್ತನ

ಶ್ರೀಲಂಕಾದಲ್ಲಿ ವರುಣನ ರುದ್ರ ನರ್ತನ

ಶ್ರೀಲಂಕಾದಲ್ಲಿ ವರುಣನ ರುದ್ರ ನರ್ತನಕ್ಕೆ ರಸ್ತೆಗಳು ಮುಳುಗಿಹೋಗಿವೆ. ಪ್ರವಾಹ ಸ್ಥಿತಿಯಿಂದ ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ನೂರೈವತ್ತಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂ ಕುಸಿತವಾಗಿದೆ. ಅದಾಗಿದೆ, ಇದಾಗಿದೆ ಅನ್ನೋದಕ್ಕಿಂತ ಇಲ್ಲಿರುವ ಫೋಟೋ ನೋಡಿ. ಇದು ಶ್ರೀಲಂಕಾ ವಾಯುಸೇನೆ ಬಿಡುಗಡೆ ಮಾಡಿರುವ ಫೋಟೋ.

ಮಳೆ ಸೃಷ್ಟಿಸಿದ ದ್ವೀಪ

ಮಳೆ ಸೃಷ್ಟಿಸಿದ ದ್ವೀಪ

ಈ ದೃಶ್ಯ ನೋಡಿ ಒಂದು ಕ್ಷಣ ವಾಹ್ ಅನ್ನಿಸಬಹುದೇನೋ!? ಒಮ್ಮೆ ಸೂಕ್ಷ್ಮವಾಗಿ ಗಮನಿಸಿ, ಇದು ಹಳ್ಳಿಯೊಂದರ ಮನೆಗಳ ಸುತ್ತ ಮಳೆ ನೀರು ಆವರಿಸಿದ ದೃಶ್ಯ. ಶ್ರೀಲಂಕಾದಲ್ಲಿ ಮಳೆಯಿಂದ ಸೃಷ್ಟಿಯಾಗಿರುವ ದ್ವೀಪವಿದು.

ರಫೆಲ್ ನಡಾಲ್ ಸಂಭ್ರಮ

ರಫೆಲ್ ನಡಾಲ್ ಸಂಭ್ರಮ

ಸ್ಪೇನ್ ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ನ ಬೆನಾಯಿಟ್ ಪೇರಿ ವಿರುದ್ಧ ಗೆದ್ದ ಸಂಭ್ರಮದಲ್ಲಿ ಪ್ರೇಕ್ಷಕರತ್ತ ಕೈ ಎತ್ತಿ ಸಂಭ್ರಮಿಸಿದ ಬಗೆ ಇದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India PM Narendra Modi Germany tour, Srilanka rain and other events represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more