ಅಮ್ಮ ಎನ್ನಲು ಏನೋ ಹರುಷವು ಎನ್ನುತ್ತಿದೆಯೇ ಈ ಮರಿ ಹಕ್ಕಿ!

Posted By:
Subscribe to Oneindia Kannada

ಈ ಭಾನುವಾರ ಅಂದರೆ ಮೇ 14ಕ್ಕೆ ಅಮ್ಮಂದಿರ ದಿನವಂತೆ, ನಿಮಗೆ ಗೊತ್ತಾಯ್ತಾ? ಅಮ್ಮನಿಗೆ ಏನು ಕೊಡಬೇಕು ಅಂದುಕೊಂಡಿದ್ದೀರಿ? ಇನ್ನೂ ಏನೂ ಅಂದುಕೊಂಡಿಲ್ಲ ಅನ್ನೋದಾದರೆ, ನಿಮ್ಮ ಇಡೀ ದಿನದ ಸಮಯ ಆಕೆಗೆ ಅಂತಲೇ ಮೀಸಲಿಡಿ. ಅದೊಂದು ದಿನವದರೂ ಅಡುಗೆ ಮನೆಯಿಂದ ಆಚೆಗೆ ಆಕೆ ಬರಲಿ. ನನಗೆ ಟೈಮಿಲ್ಲ ಆಮೇಲೆ ಹೇಳು ಅಂದಿದ್ದ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಿ.

ಅಸ್ಸಾಂನ ಗುವಾಹತಿಯ ಬ್ರಹ್ಮಪುತ್ರ ನದಿಯ ಬಳಿ ಮರವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ಹಕ್ಕಿ ಮತ್ತು ಅದರ ಮರಿಗಳನ್ನು ನೋಡಿ. ಅಮ್ಮಂದಿರ ದಿನಕ್ಕೆ ಮುಂಚಿತವಾಗಿಯೇ ಸೆಲಬ್ರೇಟ್ ಮಾಡುತ್ತಿರುವಂತಿದೆ. ಏಕೋ ಪದೇಪದೇ ಅಮ್ಮನೇ ನೆನಪಾಗುತ್ತಿದ್ದಾಳೆ. ತ್ರಿವಳಿ ತಲಾಖ್ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆಯಾಗಿದೆ.[ಬುದ್ಧ ಪೂರ್ಣಿಮಾ: ಆ ವಿರಾಗಿಗೆ ನಮೋ ನಮಃ]

ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಒಂದೊಳ್ಳೆ ಮಳೆಯಾಗಿದೆ. ಬುದ್ಧಪೌರ್ಣಮಿಯನ್ನು ಆಚರಿಸಿದ ಒಂದೆರಡು ಅದ್ಭುತ ಚಿತ್ರಗಳು ಇಲ್ಲಿವೆ. ಮುಂಬೈನಲ್ಲಿ ನಡೆದ ಜಸ್ಟಿನ್ ಬೀಬರ್ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಮಲೈಕಾ ಅರೋರಾ ಧರಿಸಿ ಬಂದಿದ್ದ ದಿರಿಸು ಗಮನಿಸಿ, ತುಂಬ ವಿಭಿನ್ನವಾಗಿದೆ. ಇನ್ನಷ್ಟು ಚಿತ್ರ-ಸುದ್ದಿ ನಿಮ್ಮ ಕಣ್ಣಿಗೆ ಬೀಳಲಿ ಎಂದು ಇಲ್ಲಿ ಕೊಟ್ಟಿದ್ದೇವೆ.

ಒಂದೊಳ್ಳೆ ಮಳೆ

ಒಂದೊಳ್ಳೆ ಮಳೆ

ಅಂತೂ ಚಿಕ್ಕಮಗಳೂರಿನಲ್ಲಿ ಬುಧವಾರ ಒಂದೊಳ್ಳೆ ಮಳೆಯಾಗಿದೆ. ಮಹಿಳೆಯೊಬ್ಬರು ಮಳೆಯ ಮಧ್ಯೆಯೇ ಸ್ಕೂಟರ್ ಓಡಿಸಿಕೊಂಡು ಹೋಗುವಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಬುದ್ಧ ಪೂರ್ಣಿಮೆಯಲ್ಲೊಂದು ಬೆಳಕು

ಬುದ್ಧ ಪೂರ್ಣಿಮೆಯಲ್ಲೊಂದು ಬೆಳಕು

ಬುದ್ಧಪೂರ್ಣಿಮೆ ಪ್ರಯುಕ್ತ ಬುಧವಾರ ಬೆಂಗಳೂರಿನಲ್ಲಿ ಮಹಾಬೋಧಿ ಸೊಸೈಟಿಯಲ್ಲಿ ಬೌದ್ಧ ಸನ್ಯಾಸಿಗಳು ಪ್ರಾರ್ಥನೆ ಸಲ್ಲಿಸಿದರು. ಮುಂಭಾಗದಲ್ಲಿರುವ ಚಿಕ್ಕ ವಯಸ್ಸಿನ ಹುಡುಗರ ಕಣ್ಣಿನಲ್ಲೂ ಬುದ್ಧ ಕಂಡಂತಾಗುತ್ತಿಲ್ಲವೆ?

ಸಂಗೀತವೂ ಸೌಂದರ್ಯವೂ

ಸಂಗೀತವೂ ಸೌಂದರ್ಯವೂ

ಮುಂಬೈನಲ್ಲಿ ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಜಸ್ಟಿನ್ ಬೀಬರ್ ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದು ಹೀಗೆ.

ದಾಳಿ ಮಾಡಿದವನಿಗೆ ಗೂಸಾ

ದಾಳಿ ಮಾಡಿದವನಿಗೆ ಗೂಸಾ

ಎಎಪಿಯಿಂದ ಅಮಾನತಾದ ಕಪಿಲ್ ಮಿಶ್ರಾ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಿದ ಅಂಕಿತ್ ಭಾರದ್ವಾಜ್ ಎಂಬಾತನ ಮೇಲೆ ಮಿಶ್ರಾ ಬೆಂಬಲಿಗರು ಸರಿಯಾಗಿ ಗೂಸಾ ನೀಡಿದರು.

ಅಮ್ಮಂದಿರ ದಿನಕ್ಕೆ ಮುನ್ನವೇ ವಿಶೇಷ

ಅಮ್ಮಂದಿರ ದಿನಕ್ಕೆ ಮುನ್ನವೇ ವಿಶೇಷ

ಅಮ್ಮಂದಿರ ದಿನಕ್ಕೆ ಫೋಟೋ ತೆಗೆದುಕೊಳ್ಳಿ ಎಂದು ಹೇಳುವಂತಿರುವ ಈ ಛಾಯಾಚಿತ್ರ ತೆಗೆದಿರುವುದು ಗುವಾಹತಿಯ ಬ್ರಹ್ಮಪುತ್ರ ನದಿಯ ಬಳಿ. ಕ್ಯಾಟಲ್ ಇಗ್ರೆಟ್ ಎಂಬ ಈ ಹಕ್ಕಿ ತನ್ನ ಎರಡು ಮರಿಗಳ ಜತೆಗೆ ಎಷ್ಟು ಚಂದಕ್ಕೆ ಕೂತಿದೆ ನೋಡಿ.

ಮತ್ತೊಂದು ಕ್ಯಾಟಲ್ ಇಗ್ರೆಟ್

ಮತ್ತೊಂದು ಕ್ಯಾಟಲ್ ಇಗ್ರೆಟ್

ಅಸ್ಸಾಂನ ಗುವಾಹತಿಯ ಬ್ರಹ್ಮಪುತ್ರ ನದಿಯ ಬಳಿಯೇ ಮರದ ಕೊಂಬೆ ಮೇಲಿದ್ದ ಕ್ಯಾಟಲ್ ಇಗ್ರೆಟ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು

ತ್ರಿವಳಿ ತಲಾಖ್ ವಿರುದ್ಧ ಧ್ವನಿ

ತ್ರಿವಳಿ ತಲಾಖ್ ವಿರುದ್ಧ ಧ್ವನಿ

ತ್ರಿವಳಿ ತಲಾಖ್ ವಿರುದ್ಧ ಮಹಿಳಾ ಹೋರಾಟಗಾರ್ತಿಯರು ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದರು

ಬುದ್ಧನಿಗೆ ಬೆಳಕಿನ ಅರ್ಪಣೆ

ಬುದ್ಧನಿಗೆ ಬೆಳಕಿನ ಅರ್ಪಣೆ

ಬುದ್ಧ ಅಂದಾಕ್ಷಣ ಬೆಳಕು ನೆನಪಾಗುತ್ತದೆ. ಬುದ್ಧ ಪೌರ್ಣಮಿ ಅಂಗವಾಗಿ ಬೋಧ್ ಗಯಾದ ಮಹಾಬೋಧಿ ದೇಗುಲದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದ ಬಗೆ ಇದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Various national events with the theme of Buddha poornima represent through PTI photos.
Please Wait while comments are loading...