ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಯೆಲ್ಲ ಭಸ್ಮ, ಕೈಯಲ್ಲಿ ತ್ರಿಶೂಲ, ಜನ ಸಾಮಾನ್ಯರ ದೈವ ಶಿವನ ಸ್ಮರಣೆ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಪ್ರಾಣಿಯ ಚರ್ಮವೇ ದಿರಿಸು, ಕತ್ತಿನಲ್ಲಿ ಹಾವು, ಜಟೆಯಲ್ಲಿ ಗಂಗೆ, ಹಣೆಯಲ್ಲಿ ಕಣ್ಣು, ಅದರ ಮೇಲೆ ಚಂದ್ರ, ಕೈಯಲ್ಲಿ ಕಪಾಲ, ಮೈಯೆಲ್ಲ ಭಸ್ಮ, ಕೈಯಲ್ಲಿ ತ್ರಿಶೂಲ ಧರಿಸಿದ ಈಶ್ವರ ಅಂದರೆ ಅಭಿಷೇಕಪ್ರಿಯ. ಭಕ್ತರ ಬೇಡಿಕೆಯನ್ನು ಎರಡೆಣಿಸದೆ ನೀಡುವ ದಯಾಮಯಿ. ಈಶ್ವರನೆಂದರೆ ಜನಪದ. ಶಿವನೆಂದರೆ ಸೌಂದರ್ಯ. ಅಂಥ ಶಿವನ ಆರಾಧನೆಗೆ ಮಹಾ ಶಿವರಾತ್ರಿಯಲ್ಲಿ ಹೆಚ್ಚು ಪ್ರಾಶಸ್ತ್ಯ.

ಪ್ರತಿ ಮಾಸವೂ ಶಿವರಾತ್ರಿ ಬರುವುದು ಹೌದು. ಆದರೆ ಇದು ಮಹಾ ಶಿವರಾತ್ರಿ. ಉಪವಾಸದಿಂದ ಇದ್ದು, ರಾತ್ರಿ ನಿದ್ರೆಯನ್ನು ತೊರೆದು, ನಾಲ್ಕು ಯಾಮದ ಪೂಜೆ ಮಾಡುವ ಭಕ್ತರ ಪಾಲಿನ ಮಹಾ ಪರ್ವ ಕಾಲವಿದು. ಈ ದೇಶದ ನೆಲದಲ್ಲಿ ಇಷ್ಟಿಷ್ಟು ದೂರಕ್ಕೂ ಶಿವ ದೇಗುಲವೇ. ಆದರೆ ಹೆಸರು ಬೇರೆ ಬೇರೆ. ಚಂದ್ರಮೌಳಿ, ವಿಷಕಂಠ, ಸೋಮೇಶ್ವರ... ಹೀಗೆ ನಾನಾ ನಾಮ.

ನೇಪಾಳದ ಪಶುಪತಿನಾಥನ ಸನ್ನಿಧಿಯಲ್ಲಿ ಶಿವರಾತ್ರಿ ಸಡಗರನೇಪಾಳದ ಪಶುಪತಿನಾಥನ ಸನ್ನಿಧಿಯಲ್ಲಿ ಶಿವರಾತ್ರಿ ಸಡಗರ

ನಮ್ಮ ಬದುಕಿನೊಳಗೆ ಆ ಶಿವನ ಅಸ್ತಿತ್ವ ಎಷ್ಟು ಮುಖ್ಯ ಎಂದು ಸಾರುವ ಕಾರಣಕ್ಕೋ ಏನೋ ಅದೆಷ್ಟು ಶಿವಪುರವೋ? ಇಡೀ ದೇಶದಲ್ಲಿ ಮಹಾ ಶಿವರಾತ್ರಿ ಆಚರಣೆ ನಡೆಯುತ್ತಿದೆ. ಇದು ಪಕ್ಕದ ನೇಪಾಳಕ್ಕೂ ದೂರದ ಒಮನ್ ವರೆಗೂ ವ್ಯಾಪಿಸಿದೆ. ದೇಶದ ವಿವಿಧೆಡೆ ನಡೆದಿರುವ ಶಿವನ ಆರಾಧನೆಯ ಒಂದಿಷ್ಟು ಫೋಟೋಗಳು, ಸುದ್ದಿ ಇವೆ. ಜತೆಗೆ ಹೂವು ಖರೀದಿಸುವವರ ಸಂಭ್ರಮ. ನೀರು ಹುಯ್ಯುವವರ ಭಕ್ತಿ ಎಲ್ಲವೂ ಇದೆ.

ಕೋಲ್ಕತ್ತಾ ಹೂವಿನ ಮಾರುಕಟ್ಟೆ

ಕೋಲ್ಕತ್ತಾ ಹೂವಿನ ಮಾರುಕಟ್ಟೆ

ಮಹಾ ಶಿವರಾತ್ರಿ ಪ್ರಯುಕ್ತ ಮಂಗಳವಾರ ಕೋಲ್ಕತ್ತಾದ ಹೂವಿನ ಮಾರುಕಟ್ಟೆಯಲ್ಲಿ ಜನವೋ ಜನ. ಶಿವ ಆರಾಧನೆಯ ವಿಶೇಷವಾಗಿ ಹೂವು ಖರೀದಿಗಾಗಿ ಸಗಟು ಮಾರುಕಟ್ಟೆಯಲ್ಲಿ ಕಂಡುಬಂದ ದೃಶ್ಯವಿದು.

ಮಹಾ ಶಿವನಿಗೆ ಜಲಾಭಿಷೇಕ

ಮಹಾ ಶಿವನಿಗೆ ಜಲಾಭಿಷೇಕ

ಉತ್ತರಪ್ರದೇಶದ ವಾರಣಾಸಿಯಲ್ಲಿ ಶಿವರಾತ್ರಿ ಅಂಗವಾಗಿ ಭಕ್ತರು ಆ ಮಹಾ ಶಿವನಿಗೆ ಜಲಾಭಿಷೇಕ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ಗುಪ್ತೇಶ್ವರ ದೇಗುಲ

ಗುಪ್ತೇಶ್ವರ ದೇಗುಲ

ಜಬಲ್ ಪುರದ ಗುಪ್ತೇಶ್ವರ ದೇಗುಲದಲ್ಲಿ ಈಶ್ವರನಿಗೆ ಭಕ್ತಿಯಿಂದ ಜಲಾಭಿಷೇಕ ಮಾಡಿ ಭಕ್ತಿ ಸಮರ್ಪಿಸಿದ ಮಹಿಳೆ.

ಭಕ್ತರ ಮೆರವಣಿಗೆ

ಭಕ್ತರ ಮೆರವಣಿಗೆ

ಶಿವರಾತ್ರಿಯ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಭಕ್ತರು ಪಾಲ್ಗೊಂಡಿದ್ದ ಮೆರವಣಿಗೆಯ ಸಾಲು.

ಪುಷ್ಪ ಸಮರ್ಪಣೆ

ಪುಷ್ಪ ಸಮರ್ಪಣೆ

ಮಹಾ ಶಿವರಾತ್ರಿಯ ಅಂಗವಾಗಿ ಮಂಗಳವಾರ ರಾಜಸ್ತಾನದ ಬಿಕನೇರ್ ನಲ್ಲಿ ಭಕ್ತರು ಪುಷ್ಪ ಸಮರ್ಪಿಸಿದರು.

ಕೊಪಿನೇಶ್ವರ ದೇಗುಲ

ಕೊಪಿನೇಶ್ವರ ದೇಗುಲ

ಮಹಾರಾಷ್ಟ್ರದ ಮುಂಬೈನ ಥಾಣೆಯಲ್ಲಿರುವ ಕೊಪಿನೇಶ್ವರ್ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಪರೀತ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು.

ನಂದಿ ಕಿವಿಯಲ್ಲಿ ಮೊದಲಿಗೆ ಪ್ರಾರ್ಥನೆ

ನಂದಿ ಕಿವಿಯಲ್ಲಿ ಮೊದಲಿಗೆ ಪ್ರಾರ್ಥನೆ

ಬಿಹಾರದ ಪಾಟ್ನಾದಲ್ಲಿರುವ ಶಿವ ದೇವಾಲಯದಲ್ಲಿ ನಂದಿ ಕಿವಿಯಲ್ಲಿ ತಮ್ಮ ಪ್ರಾರ್ಥನೆ ಹೇಳುತ್ತಿದ್ದ ಯುವತಿಯರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

English summary
February 13th, Tuesday Maha Shivaratri. India and other nations celebrating this day. Here are the some of the PTI photos which represents Shivaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X