ಚಿಕ್ಕಮಗಳೂರು ಕೆರೆಗಳಲ್ಲೇ ನೀರಿಲ್ಲಣ್ಣೋ.ಇದು ಬರ ಅಲ್ದೇ ಇನ್ನೇನು?

Posted By:
Subscribe to Oneindia Kannada

ಕರ್ನಾಟಕದಲ್ಲಿ ಬರಗಾಲ ಎಂಬುದನ್ನೇ ಎಷ್ಟು ಸಲ ಸುದ್ದಿಯಲ್ಲಿ ನೋಡೋದು, ಓದೋದು- ಮತ್ತೆ ಮತ್ತೆ ಅದೇ ಭೀಕರತೆಯ ಚಿತ್ರಣ ಕಣ್ಣೆದುರು ಮೂಡುತ್ತದೆ. ಚಿಕ್ಕಮಗಳೂರು ಮಳೆ ಸಮೃದ್ಧಿ ಆಗಿರುವ ಜಿಲ್ಲೆ. ಅದರೆ ಅಲ್ಲಿಯೂ ಈ ಬಾರಿ ಪರಿಸ್ಥಿತಿ ಕೈ ಮೀರಿದೆ. ರಾಸುಗಳನ್ನು ಕರೆದೊಯ್ಯುತ್ತಿರುವ ರೈತರೊಬ್ಬರ ಚಿತ್ರವಿದು.

ಗಮನಿಸಿ ನೋಡಿ, ಅವುಗಳನ್ನು ಕರೆದೊಯ್ಯುತ್ತಿರುವುದು ಒಣಗಿದ ಕೆರೆಯ ಮೇಲೆ. ಬಿರುಕು ಬಿಟ್ಟ ಮಣ್ಣು, ಕೃಶಿಸಿರುವ ಹಸು, ನಿರೀಕ್ಷೆ ಕಳೆದುಕೊಂಡಿರುವ ರೈತರ ಬದುಕನ್ನು ಬಿಂಬಿಸುತ್ತಿದೆ. ಅತ್ತ ನವದೆಹಲಿಯಲ್ಲಿ ತಮಿಳುನಾಡು ಕೃಷಿಕರು ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಮಹಿಳೆಯಂತೆ ವೇಷ ಧರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಒರಿಸ್ಸಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಬಿಜೆಪಿಯಿನ್ನೂ ಉತ್ತುಂಗಕ್ಕೇರಿಲ್ಲ]

ಅಂದಹಾಗೆ, ಜಮ್ಮು-ಕಾಶ್ಮೀರದಲ್ಲೂ ಭಾರೀ ಬಿಸಿಲು. ತಾಪಕ್ಕೆ ಅಲ್ಲಿನ ಮಕ್ಕಳು ತವಿ ನದಿಯಲ್ಲಿ ಮಿಂದೇಳುತ್ತಿದ್ದಾರೆ. ಭಾನುವಾರ ನರೇಂದ್ರ ಮೋದಿಯವರು ಸೂರತ್ ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಮುಸ್ಲಿಂ ಮಕಕ್ಳು ಗೋ ರಕ್ಷಣೆಯ ಸಂದೇಶ ಸಾರಿದ್ದಾರೆ. ಹೆಣ್ಣುಮಗಳು ಚಿನ್ನದ ಬಣ್ಣದ ಗೋವನ್ನು ಪ್ರಧಾನಿಗೆ ಕೊಡುಗೆ ನೀಡಿದ್ದರೆ, 'ನಾನು ಮುಸ್ಲಿಂ, ಗೋವನ್ನು ರಕ್ಷಿಸಿ" ಎಂಬ ಸಂದೇಶವನ್ನು ಬಾಲಕನೊಬ್ಬ ಹಿಡಿದು ನಿಂತಿದ್ದಾನೆ. ಇನ್ನೂ ಕೆಲವು ಚಿತ್ರಗಳು ಇಲ್ಲಿವೆ

ಬರದ ಹೊಡೆತಕ್ಕೆ ಸಿಕ್ಕ ಬದುಕು

ಬರದ ಹೊಡೆತಕ್ಕೆ ಸಿಕ್ಕ ಬದುಕು

ನಿಚ್ಚಳವಾಗಿ ಕಣ್ಣಿಗೆ ರಾಚುತ್ತಿದೆ ಬರಗಾಲ. ಕರ್ನಾಟಕದ ಪಾಲಿಗೆ ಇನ್ನೂ ಒಂದೂವರೆ ತಿಂಗಳು ಕಳೆಯುವುದು ಖಂಡಿತಾ ಸಲೀಸಲ್ಲ. ಚಿಕ್ಕಮಗಳೂರಿನಲ್ಲಿ ಒಣಗಿದ ಕೆರೆಯಲ್ಲಿ ರಾಸುಗಳನ್ನು ಕರೆದೊಯ್ಯುತ್ತಿದ್ದ ರೈತರೊಬ್ಬರ ಚಿತ್ರವಿದು. ಒಣಗಿದ ಕೆರೆ, ಅಸಹಾಯಕ ರೈತ, ಕೃಶಿಸಿದಂತೆ ಕಾಣುವ ರಾಸುಗಳು...ಇನ್ನೂ ಏನು ಹೇಳಬೇಕು?

ಗೋ ರಕ್ಷಣೆ ಸಂದೇಶ

ಗೋ ರಕ್ಷಣೆ ಸಂದೇಶ

ಈ ಮುಸ್ಲಿಂ ಹೆಣ್ಣುಮಗಳ ಕೈಯಲ್ಲಿ ಲೋಹದ ಹಸು. ಆ ಹುಡುಗನ ಕೈಯಲ್ಲಿ, 'ನಾನು ಮುಸ್ಲಿಂ, ಹಸು ಉಳಿಸಿ' ಎಂಬ ಸಂದೇಶ. ಈ ದೃಶ್ಯ ಕಂಡಬಂದಿದ್ದು ಭಾನುವಾರ ಸೂರತ್ ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ರೋಡ್ ಷೋ ವೇಳೆ.

ರೈತರ ಆಕ್ರೋಶ

ರೈತರ ಆಕ್ರೋಶ

ತಮಿಳುನಾಡು ರೈತರು ಬರ ಪರಿಹಾರಕ್ಕಾಗಿ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟಿಸುತ್ತಿದ್ದು, ಮಹಿಳೆಯಂತೆ ದಿರಿಸು ತೊಟ್ಟು ಪ್ರತಿಭಟಿಸಿದ ರೈತರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಜಮ್ಮು-ಕಾಶ್ಮೀರದಲ್ಲೂ ಬಿಸಿಲ ತಾಪ

ಜಮ್ಮು-ಕಾಶ್ಮೀರದಲ್ಲೂ ಬಿಸಿಲ ತಾಪ

ಜಮ್ಮು-ಕಾಶ್ಮೀರದಲ್ಲಿ ವಿಪರೀತ ಬಿಸಿಲು. ತಾಪದಿಂದ ಅಲ್ಲಿನ ಮಕ್ಕಳು ತವಿ ನದಿಯಲ್ಲಿ ಇಳಿದು, ಸ್ನಾನ ಮಾಡಿದರು.

ಈಸ್ಟರ್ ವಿಶೇಷ

ಈಸ್ಟರ್ ವಿಶೇಷ

ಇಂಗ್ಲೆಂಡ್ ನ ಬರ್ಕ್ ಶೈರ್ ನಲ್ಲಿರುವ ಸೇಂಟ್ ಜಾರ್ಜ್ ಚಾಪಲ್ ಗೆ ಈಸ್ಟರ್ ಅಂಗವಾಗಿ ಭಾನುವಾರ ಬ್ರಿಟನ್ ನ ಪ್ರಿನ್ಸ್ ವಿಲಿಯಂಸ್ ಹಾಗೂ ಕೇಟ್ ಭೇಟಿ ನೀಡಿದ ಕ್ಷಣವಿದು.

ಅರ್ಜುನ್ ತೆಂಡೂಲ್ಕರ್

ಅರ್ಜುನ್ ತೆಂಡೂಲ್ಕರ್

ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯದ ಐಪಿಎಲ್ ಪಂದ್ಯದ ವೇಳೆ ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ಸೂರ್ಯಾಸ್ತದ ವೇಳೆ ಮೀನುಗಾರರು

ಸೂರ್ಯಾಸ್ತದ ವೇಳೆ ಮೀನುಗಾರರು

ಫೋಟೋಗ್ರಫಿಯಲ್ಲಿ ಇಂಥ ಫೋಟೋಗಳಿಗೆ ಸಿಲ್ ಹೌಟ್ ಅಂತ ಕರೆಯುತ್ತಾರೆ. ಚೆನ್ನೈನಲ್ಲಿ ಸೂರ್ಯಾಸ್ತದ ವೇಳೆ ಮೀನುಗಾರರನ್ನು ಸೆರೆ ಹಿಡಿದಿರುವ ಚಿತ್ರ ಇದು, ಹಿನ್ನೆಲೆಯಲ್ಲಿ ಚಿನ್ನದ ಬಣ್ಣದಲ್ಲಿ ಕಾಣುವ ನೀರು ಈ ಛಾಯಾಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಟರ್ಬನ್ ದಿನದ ಸಂಭ್ರಮ

ಟರ್ಬನ್ ದಿನದ ಸಂಭ್ರಮ

ಅಮೆರಿಕ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವಯರ್ ನಲ್ಲಿ ಈಚೆಗೆ ಸಿಖ್ಖರು 'ಟರ್ಬನ್ ದಿನ' ಅಚರಿಸಿದ ಸಂಭ್ರಮ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National events such as PM Narendra Modi road show in Surat and other functions represent through PTI photos.
Please Wait while comments are loading...