ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ಕಾಲಿನ ಮಗುಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಆಪರೇಷನ್

|
Google Oneindia Kannada News

ತಮಿಳುನಾಡು ರಾಜಕೀಯ ದಿನಕ್ಕೊಂದು ರೀತಿ ಕುತೂಹಲ ಕೆರಳಿಸುತ್ತಿದೆ. ತಿರುವು ಪಡೆಯುತ್ತಿದೆ. ಅಮ್ಮನೆದುರು ಒಂದೇ ತಾಯಿ ಮಕ್ಕಳಂತಿದ್ದ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಟರಾಜನ್ ಏಕಾಏಕಿ ಬದ್ಧ ವೈರಿಗಳಾಗಿದ್ದಾರೆ. ಗುರುವಾರ ನಡೆದ ವಿದ್ಯಮಾನ, ಅದಕ್ಕೂ ಹಿಂದಿನ ಎರಡು ದಿನ ಆದ ಬೆಳವಣಿಗೆಗಳು, ರೆಸಾರ್ಟ್ ರಾಜಕಾರಣ...ಇವೆಲ್ಲ ಏನನ್ನೋ ಸೂಚಿಸುತ್ತಿದೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಗುರುವಾರ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ. ನಾಲ್ಕು ಕಾಲು, ಎರಡು ಜನನಾಂಗದೊಂದಿದೆ ಜನಿಸಿದ ಮಗುವಿಗೆ ಯಶಸ್ವಿ ಚಿಕಿತ್ಸೆ ಆಗಿದೆ. ಮದುರೈನಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆದು, ಅಲ್ಲಿನವರ ಖುಷಿಗೆ ಪಾರವೇ ಇಲ್ಲ. ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಮುಂಬೈನಲ್ಲಿ ಫೋಟೋ ಶೂಟ್ ಆಗಿದೆ.[ಜಂಗಲ್ ಡೈರಿ: ಬೆಂಗಳೂರಿನ 'ಆನೆಯ ಗೆಳೆಯರು' ಎಷ್ಟೊಂದು ಕೆಲ್ಸ ಮಾಡ್ತಾರೆ!]

ಮಾಘ ಪೂರ್ಣಿಮೆ ಅಂಗವಾಗಿ ಸಾಧುಗಳು ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ..ಹೀಗೆ ದೇಶ-ವಿದೇಶದ ಮಹತ್ವ ಘಟನೆಗಳ ಫೋಟೋಗಳು ಇಲ್ಲಿವೆ. ಅದರಲ್ಲಿ ತಮಿಳುನಾಡಿನ ರಾಜಕೀಯ ವಿದ್ಯಮಾನಗಳೇ ಪ್ರಮುಖವಾಗಿವೆ. ಅಂದಹಾಗೆ ಇಟಲಿಯ ಸೆಲಿನಿ ಡೊಲೊರ್ಸ್ ಶಿರಡಿ ಸಾಯಿಬಾಬಗೆ ಚಿನ್ನದ ಕಿರೀಟ ಕೊಟ್ಟ ಸುದ್ದಿ ಗೊತ್ತಾಯ್ತಾ?

ನಾಲ್ಕು ಕಾಲು, ಎರಡು ಜನನಾಂಗ

ನಾಲ್ಕು ಕಾಲು, ಎರಡು ಜನನಾಂಗ

ನಾಲ್ಕು ಕಾಲು, ಎರಡು ಜನನಾಂಗದೊಂದಿಗೆ ಜನಿಸಿದ ಮಗುವಿಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದು, ಸಮಸ್ಯೆ ಸರಿಪಡಿಸಲಾಯಿತು. ಮಗವಿನೊಂದಿಗೆ ಪೋಷಕರು ನಿರಾಳವಾದಂತಾಗಿದೆ.

ಇಟಲಿಯ ಮಹಿಳೆಯಿಂದ ಬಾಬಗೆ ಚಿನ್ನದ ಕಿರೀಟ

ಇಟಲಿಯ ಮಹಿಳೆಯಿಂದ ಬಾಬಗೆ ಚಿನ್ನದ ಕಿರೀಟ

ಆಕೆ ಇಟಲಿಯವರು. ಹೆಸರು ಸೆಲಿನಿ ಡೊಲೊರ್ಸ್. ಶಿರಡಿ ಸಾಯಿಬಾಬ ಮೂರ್ತಿಗೆ 855 ಗ್ರಾಂ ತೂಕದ ಚಿನನ್ದ ಕಿರೀಟವನ್ನು ಆಕೆ ಗುರುವಾರ ನೀಡಿದ್ದಾರೆ.

ಅಮ್ಮನೆದುರು 'ಚಿನ್ನಮ್ಮ'ನ ಕಣ್ಣೀರು

ಅಮ್ಮನೆದುರು 'ಚಿನ್ನಮ್ಮ'ನ ಕಣ್ಣೀರು

ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿ ಶಶಿಕಲಾ ನಟರಾಜನ್ ಅವರು ಗುರುವಾರ ರಾಜ್ಯಪಾಲ ವಿದ್ಯಾಸಾಗರ್ ರನ್ನು ಭೇಟಿಯಾಗುವ ಮುಂಚೆ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು.

ಬೆಂಬಲಿಗರ ಪಟ್ಟಿ

ಬೆಂಬಲಿಗರ ಪಟ್ಟಿ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ತಮ್ಮ ಬೆಂಬಲಕ್ಕಿರುವ ಶಾಸಕರ ಪಟ್ಟಿಯನ್ನು ಚೆನ್ನೈನಲ್ಲಿ ರಾಜ್ಯಪಾಲರಿಗೆ ಗುರುವಾರ ನೀಡಿದರು.

ಹಂಗಾಮಿ ವರಸೆ

ಹಂಗಾಮಿ ವರಸೆ

ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಅಧ್ಯಕ್ಷ ಮಧುಸೂದನನ್ ಗುರುವಾರ ಚೆನ್ನೈನಲ್ಲಿ ರಾಜ್ಯಪಾಲರನ್ನು ಭೇಟಿಯಾದರು.

ಬನ್ನಿ...ಬನ್ನಿ...

ಬನ್ನಿ...ಬನ್ನಿ...

ಎಐಎಡಿಎಂಕೆ ಹಿರಿಯ ನಾಯಕರನ್ನು ಒಪಿಎಸ್ ಚೆನ್ನೈನ ತಮ್ಮ ನಿವಾಸದಲ್ಲಿ ಬರಮಾಡಿಕೊಂಡ ಕ್ಷಣ.

ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ

ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ

ಅಲಹಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ವಿವಿಧ ಬೇಡಿಕೆ ಈಡೆರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಬೆಂಕಿ ಹಚ್ಚಿಕೊಂಡ.

ಮದುರೈನಲ್ಲಿ ಜಲ್ಲಿಕಟ್ಟು

ಮದುರೈನಲ್ಲಿ ಜಲ್ಲಿಕಟ್ಟು

ಮದುರೈನ ಪಲಮೇಡುವಿನಲ್ಲಿ ಗುರುವಾರ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಸ್ಪರ್ಧಿ.

ಚಳಿಯ ಬಾಹು ವ್ಯಾಪಿಸಿ

ಚಳಿಯ ಬಾಹು ವ್ಯಾಪಿಸಿ

ಫಿಲಿಡೆಲ್ಫಿಯಾದಲ್ಲಿ ಚಳಿಯ ಬಾಹು ವ್ಯಾಪಿಸಿದೆ. ಅಲ್ಲಿನ ಸೌತ್ ಬ್ರಾಡ್ ಬಡಾವಣೆಯಲ್ಲಿ ಚಳಿಯ ಮಧ್ಯೆ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಪ್ರೀತಿಯೇ ವಿಶೇಷ

ಪ್ರೀತಿಯೇ ವಿಶೇಷ

ಮುಂಬೈನಲ್ಲಿ ನಡೆದ ವ್ಯಾಲೆಂಟೈನ್ಸ್ ಡೇ ಫೋಟೋ ಶೂಟ್ ನಲ್ಲಿ ಭಾಗವಹಿಸಿದ್ದ ಟಿವಿ ನಟರಾದ ಶಮಾ ಸಿಕಂದರ್ ಹಾಗೂ ಜೇಮ್ಸ್ ಮಿಲಿಯನ್

ಅಜಿಂಕ್ಯ ರಹಾನೆ ಅರ್ಧ ಶತಕ

ಅಜಿಂಕ್ಯ ರಹಾನೆ ಅರ್ಧ ಶತಕ

ಹೈದರಾಬಾದ್ ನ ಉಪ್ಪಲ್ ಕ್ರೀಡಾಂಗಣದಲ್ಲಿ ಬಾಂಗ್ಲಾ ದೇಶದ ವಿರುದ್ಧ ಟೆಸ್ಟ್ ಕ್ರಿಕೆಟ್ ನ ಎರಡನೇ ದಿನ ಶುಕ್ರವಾರ ಅರ್ಧ ಶತಕ ಬಾರಿಸಿದ ನಂತರ ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಸಂಭ್ರಮಿಸಿದ ಪರಿ ಇದು.

ಮಾಘ ಸ್ನಾನ

ಮಾಘ ಸ್ನಾನ

ಅಲಹಾಬಾದ್ ನಲ್ಲಿ ಮಾಘ ಪೂರ್ಣಿಮೆ ಅಂಗವಾಗಿ ಶುಕ್ರವಾರ ಗಂಗಾ ನದಿಯಲ್ಲಿ ಸಾಧುಗಳು ಪವಿತ್ರ ಸ್ನಾನದ ನಂತರ ಪ್ರಾರ್ಥನೆ ಸಲ್ಲಿಸಿದರು.

English summary
National and international events with a major theme Tamil Nadu political crisis represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X