ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಕುಸಿತಕ್ಕೆ ಪಾಕಿಸ್ತಾನದಲ್ಲೂ ಹತ್ತಾರು ಪ್ರಾಣ ಹೋದವು...

|
Google Oneindia Kannada News

ಜಮ್ಮು-ಕಾಶ್ಮೀರದಲ್ಲಿ ಹಿಮ ಕುಸಿತಕ್ಕೆ ಹತ್ತಾರು ಜನ ಪ್ರಾಣ ಬಿಟ್ಟಿರುವುದರ ಬಗ್ಗೆ ವರದಿಗಳನ್ನು ಓದಿರುತ್ತೀರಿ. ಪಾಕಿಸ್ತಾನದ ಚಿತ್ರಲ್ ನಲ್ಲೂ ಹಿಮಕುಸಿತಕ್ಕೆ ಹತ್ತಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಅಲ್ಲಿನ ಸೇನೆ ಹಾಗೂ ಸ್ವಯಂಸೇವಕರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಕೃತಿ ಮುನಿಸಿಕೊಂಡಾಗ ಮನುಷ್ಯ ಮಾತ್ರನಿಂದ ಏನು ಮಾಡುವುದಕ್ಕೆ ಸಾಧ್ಯ?

ಇನ್ನು ಹಾಲಿವುಡ್ ನಟಿ ಹಾಗೂ ವಿಶ್ವಸಂಸ್ಥೆಯ ರಾಯಭಾರಿ ನಟಿ ಆಶ್ಲೆ ಜುಡ್ ಸೋಮವಾರ ಒಡಿಶಾಗೆ ಬಂದಿದ್ದಾರೆ. ಅಲ್ಲಿನ ಬುಡಕಟ್ಟು ಶಾಲೆಗಳಿಗೆ ನಾಲ್ಕು ದಿನಗಳ ಕಾಲ ಭೇಟಿ ನೀಡಲಿದ್ದಾರೆ ಆಕೆ. ಇನ್ನು ಜಾಟ್ ಸಮುದಾಯದಿಂದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡು, ಪ್ರತಿಭಟನೆಗಳು ನಡೆಯುತ್ತಿವೆ.[ಜನರ ಜೀವ ಕಸಿಯುತ್ತಿದೆ ಜಮ್ಮು-ಕಾಶ್ಮೀರದ ಹಿಮ ಕುಸಿತ!]

ಉತ್ತರ ಪ್ರದೇಶದ ಚುನಾವಣೆ ಕಾವು ಅನ್ನೋ ಹಾಗಿಲ್ಲ, ಏಕೆಂದರೆ ಬೆಂಕಿ ಹೊತ್ತುರಿಯುತ್ತಿದೆ. ಬಿಎಸ್ ಪಿ ಮುಖ್ಯಮಂತ್ರಿ ಅಭ್ಯರ್ಥಿ ಮಾಯಾವತಿ ಆಗ್ರಾದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಇನ್ನು ಅಕ್ಷಯ್ ಕುಮಾರ್ ರ ಹೊಸ ಚಿತ್ರದ ಪ್ರಚಾರ, ನವದೆಹಲಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಪ್ರತಿಭಟನೆ... ಅವೆಲ್ಲದರ ಚಿತ್ರ-ಸುದ್ದಿ ಇಲ್ಲಿವೆ.

ಹಾಲಿವುಡ್ ನಟಿ ಆಗಮನ

ಹಾಲಿವುಡ್ ನಟಿ ಆಗಮನ

ವಿಶ್ವಸಂಸ್ಥೆಯ ರಾಯಭಾರಿ ಹಾಗೂ ಹಾಲಿವುಡ್ ನಟಿ ಆಶ್ಲೆ ಜುಡ್ ಒಡಿಶಾದ ಭುವನೇಶ್ವರದ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದರು. ಆಕೆ ಒಡಿಶಾದಲ್ಲಿರುವ ವಿವಿಧ ಬುಡಕಟ್ಟು ಶಾಲೆಗಳಿಗೆ ನಾಲ್ಕು ದಿನಗಳ ಕಾಲ ಭೇಟಿ ನೀಡಲಿದ್ದಾರೆ.

ಹದಿಮೂರು ಮಂದಿ ಸಾವು

ಹದಿಮೂರು ಮಂದಿ ಸಾವು

ಪಾಕಿಸ್ತಾನದ ಚಿತ್ರಲ್ ನಲ್ಲಿ ಹಿಮಕುಸಿತದಿಂದ ಮೃತಪಟ್ಟ ಹಳ್ಳಿಗರ ಶವವನ್ನು ಸ್ವಯಂಸೇವಕರು ಹಾಗೂ ಸೇನೆಯವರು ಹೊತ್ತೊಯ್ಯುತ್ತಿದ್ದ ದೃಶ್ಯ ಕಂಡುಬಂದಿದ್ದು ಹೀಗೆ. ಅಲ್ಲಿ ರಕ್ಷಣಾ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ, ಕನಿಷ್ಠ ಹದಿಮೂರು ಮಂದಿ ಹಿಮಕುಸಿತಕ್ಕೆ ಬಲಿಯಾಗಿದ್ದಾರೆ. ಪಾಕಿಸ್ತಾನದ ಉತ್ತರ ಭಾಗದಲ್ಲಿ ತೀವ್ರ ಹಿಮಪಾತವಾಗಿದೆ.

ಉದ್ಯೋಗ ಮೀಸಲಾತಿಗಾಗಿ ಆಗ್ರಹ

ಉದ್ಯೋಗ ಮೀಸಲಾತಿಗಾಗಿ ಆಗ್ರಹ

ಜಾಟ್ ಮಹಿಳೆಯರು ಉದ್ಯೋಗದಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ರೋಹ್ಟಕ್ ನ ಜಸಿಯಾ ಹಳ್ಳಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು

ಅಕ್ಷಯ್ ಸಿನಿ ಪ್ರಚಾರ

ಅಕ್ಷಯ್ ಸಿನಿ ಪ್ರಚಾರ

ನೋಯಿಡಾದಲ್ಲಿರುವ ಅಮಿಟಿ ವಿಶ್ವವಿದ್ಯಾಲಯದಲ್ಲಿ ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ತಮ್ಮ ಸಿನಿಮಾ ಜಾಲಿ ಎಲ್ ಎಲ್ ಬಿ-2 ಪ್ರಚಾರ ಮಾಡಿದರು.

ಮಾಯಾವತಿ ಚುನಾವಣೆ ಪ್ರಚಾರ

ಮಾಯಾವತಿ ಚುನಾವಣೆ ಪ್ರಚಾರ

ಆಗ್ರಾದಲ್ಲಿ ಬಿಎಸ್ ಪಿ ಮುಖ್ಯಮಂತ್ರಿ ಅಭ್ಯರ್ಥಿ ಮಾಯಾವತಿ ಚುನಾವಣೆ ಪ್ರಚಾರದ ವೇಳೆ ಸೋಮವಾರ ಕಂಡು ಬಂದ ಜನಸ್ತೋಮ.

ಕಪ್ಪು ಬಾವುಟ ಪ್ರದರ್ಶನ

ಕಪ್ಪು ಬಾವುಟ ಪ್ರದರ್ಶನ

ನವದೆಹಲಿಯಲ್ಲಿ ಮಾನಸಿಕ ಸಮಸ್ಯೆ ಇರುವವರ ಆಶಾ ಕಿರಣ್ ವಸತಿ ಸಮುಚ್ಚಯದಲ್ಲಿನ ಅವ್ಯವಸ್ಥೆ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭೇಟಿ ನೀಡಿದ ವೇಳೆ ಮಹಿಳೆಯರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

English summary
National and international events with a major theme Pakistan avalanche represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X