ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಣಿದು ದಣಿವ ಚೆಲುವೆ ಕಣ್ಣಲ್ಲೇ ಕೊಲ್ತಾಳಲ್ಲಪ್ಪೋ...

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಫೆಬ್ರವರಿ 14ರಿಂದ 18ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಷೋ ನಡೆಯಲಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಸುವ ಅವಕಾಶ ಇದೆ. ಅಂದಹಾಗೆ ಆ ಷೋದಲ್ಲಿ ಪ್ರದರ್ಶನ ನೀಡುವ ಸಲುವಾಗಿ ಭಾರತೀಯ ವಾಯು ಸೇನೆಯಿಂದ ತಾಲೀಮು ನಡೆಯುತ್ತಿದೆ.

ಇನ್ನು ಜಗತ್ತಿನ ಅತಿ ತೂಕದ ಹೆಂಗಸು, ಐನೂರು ಕೆಜಿ ತೂಕವಿರುವ ಎಮಾನ್ ಅಹ್ಮದ್ ತಮ್ಮ ತೂಕ ಇಳಿಸಿಕೊಳ್ಳುವ ಸಲುವಾಗಿ ಮುಂಬೈಗೆ ಚಿಕಿತ್ಸೆಗಾಗಿ ಬಂದಿದ್ದಾರೆ. ಉತ್ತರಪ್ರದೇಶದಲ್ಲಿ ಶನಿವಾರ ಮೊದಲ ಹಂತದಲ್ಲಿ ವಿಧಾನಸಭೆಗೆ ಮತದಾನ ನಡೆದಿದೆ. ಅದರ ಸಲುವಾಗಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನ ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ಮಾಡಿದ್ದಾರೆ.[ಉಪ್ರ ಚುನಾವಣೆ ಮೊದಲ ಹಂತ: ಮೋದಿಗೆ ಅಗ್ನಿ ಪರೀಕ್ಷೆ ಮತ್ತು 10 ಅಂಶಗಳು]

ಮದುರೈನ ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ನಡೆದಿದೆ. ಮರಳು ಕಲಾಕೃತಿಗಳನ್ನು ರಚಿಸುವ ಕಲಾವಿದ ಸುದರ್ಶನ ಪಟ್ನಾಯಕ್ ಒಡಿಶಾದ ಪುರಿ ಸಮುದ್ರ ತೀರದಲ್ಲಿ ರಚಿಸಿದ ಕಲಾಕೃತಿ, ಜಗತ್ತಿನ ಅತಿ ಎತ್ತರದ ಮರಳು ಕಲಾಕೃತಿ ಎಂಬ ಕಾರಣಕ್ಕೆ ಗಿನಿಸ್ ದಾಖಲೆಗೆ ಪಾತ್ರವಾಗಿದೆ. ಹೀಗೆ ಹಲವು ಸುದ್ದಿಯನ್ನು ಚಿತ್ರ ರೂಪದಲ್ಲಿ ನಿಮ್ಮ ಮುಂದಿಡಲಾಗಿದೆ.

ಏರೋ ಇಂಡಿಯಾ 2017

ಏರೋ ಇಂಡಿಯಾ 2017

ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ಶುಕ್ರವಾರ ಏರೋ ಇಂಡಿಯಾ 2017ರ ಪೂರ್ವಭಾವಿಯಾಗಿ ಭಾರತೀಯ ವಾಯು ಸೇನೆಯ ಏರೋಬಿಕ್ ತಂಡ 'ಸಾರಂಗ್' ತಾಲೀಮು ನಡೆಸಿತು.

ತೂಕದ ಮಹಿಳೆ ಎಮಾನ್ ಅಹ್ಮದ್

ತೂಕದ ಮಹಿಳೆ ಎಮಾನ್ ಅಹ್ಮದ್

500 ಕಿಲೋಗ್ರಾಮ್ ನ ಜಗತ್ತಿನ ಅತ್ಯಂತ ತೂಕದ ಮಹಿಳೆ ಎಮಾನ್ ಅಹ್ಮದ್ ತನ್ನ ತೂಕ ಇಳಿಸುವ ಶಸ್ತ್ರಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ

ಕಾಂಗ್ರೆಸ್-ಎಸ್ ಪಿ ಜಂಟಿ

ಕಾಂಗ್ರೆಸ್-ಎಸ್ ಪಿ ಜಂಟಿ

ಉತ್ತರಪ್ರದೇಶದ ಲಖನೌನಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಪ್ಯಾಟ್ರಿಜ್ ಗಳ ವಾಸ

ಪ್ಯಾಟ್ರಿಜ್ ಗಳ ವಾಸ

ಬೆಲಾರಸ್ ನಲ್ಲಿ ಕೊರೆಯುವ ಚಳಿಗಾಲ. ಪ್ಯಾಟ್ರಿಜ್ ಗಳು ಕಾಳು ತಿನಿಸುತ್ತಾ, ರಾತ್ರಿಗಳನ್ನು ಕಟ್ಟಡ-ಪೊದೆಗಳ ಬಳಿ ಕಳೆಯುತ್ತವೆ.

ಕುಣಿಯೋಣು ಬಾರಾ..ದಣಿಯೋಣು ಬಾರಾ

ಕುಣಿಯೋಣು ಬಾರಾ..ದಣಿಯೋಣು ಬಾರಾ

ಉರುಗ್ವೆಯಲ್ಲಿ ಶುಕ್ರವಾರ ನಡೆದ 'ಲಾಸ್ ಲಮಾಡಾಸ್' ಸಂಭ್ರಮದಲ್ಲಿ ನೃತ್ಯಗಾತಿಯೊಬ್ಬಳು ಕಾಣಿಸಿಕೊಂಡಿದ್ದು ಹೀಗೆ.

ಮರಳು ಕಲಾಕೃತಿ ಗಿನಿಸ್ ದಾಖಲೆ

ಮರಳು ಕಲಾಕೃತಿ ಗಿನಿಸ್ ದಾಖಲೆ

ಮರಳು ಕಲಾಕೃತಿಗಳ ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಸಮುದ್ರ ತೀರದಲ್ಲಿ ಜಗತ್ತಿನ ಅತಿ ಎತ್ತರದ ಮರಳು ಕಲಾಕೃತಿ ರಚಿಸಿ, ಗಿನಿಸ್ ದಾಖಲೆಗೆ ಸೇರ್ಪಡೆಯಾದರು.

ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು

ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು

ಮದುರೈನ ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕ್ರೀಡೆಯ ರೋಚಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.

English summary
National and international events with a major theme Aero India 2017 represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X