ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಉಪಗ್ರಹಗಳನ್ನು ಉಡಾವಣೆ ಮಾಡಿದ ಇಸ್ರೋ

|
Google Oneindia Kannada News

ನವದೆಹಲಿ, ಜೂ.30: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸಂಜೆ 6.02ಕ್ಕೆ ಸಿಂಗಾಪುರದ 3 ಉಪಗ್ರಹಗಳನ್ನು ಹೊತ್ತೊಯ್ದ ಪಿಎಸ್‌ಎಲ್‌ವಿ-ಸಿ 53 ಮಿಷನ್ ಅನ್ನು ಉಡಾವಣೆ ಮಾಡಿದೆ. ಇದು ಬಾಹ್ಯಾಕಾಶ ಸಂಸ್ಥೆಯ 55ನೇ ಮಿಷನ್ ಆಗಿದೆ.

ಇದು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್‌) ನ ಎರಡನೇ ಮೀಸಲು ವಾಣಿಜ್ಯ ಮಿಷನ್ ಆಗಿದೆ. ಪಿಎಸ್‌ಎಲ್‌ವಿ- ಸಿ 53 ಅನ್ನು ಸಿಂಗಾಪುರದ ಇತರ ಎರಡು ಸಹ- ಪ್ರಯಾಣಿಕ ಉಪಗ್ರಹಗಳೊಂದಿಗೆ ಡಿಎಸ್-ಇಒ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲು ವಿನ್ಯಾಸಗೊಳಿಸಲಾಗಿದ್ದಾಗಿದೆ. ನಾಲ್ಕು ಹಂತದ 44.4-ಮೀಟರ್ ಎತ್ತರದ ರಾಕೆಟ್ 228.433 ಟನ್‌ಗಳ ಲಿಫ್ಟ್ ಆಫ್ ಇಂಧನ ರಾಶಿಯನ್ನು ಇದು ಹೊಂದಿತ್ತು.

ಇಸ್ರೋದಿಂದ ಶುಕ್ರಗ್ರಹಕ್ಕೆ ನೌಕೆ; 2024 ಡಿಸೆಂಬರ್ ದಿನ ಯಾಕೆ? ಇಸ್ರೋದಿಂದ ಶುಕ್ರಗ್ರಹಕ್ಕೆ ನೌಕೆ; 2024 ಡಿಸೆಂಬರ್ ದಿನ ಯಾಕೆ?

ಉಡಾವಣೆಯಾದ ಕೆಲವೇ ದಿನಗಳಲ್ಲಿ ಪಿಎಸ್‌ಎಲ್‌ವಿ-ಸಿ 53 ಉಪಗ್ರಹವನ್ನು 570 ಕಿಮೀ ಎತ್ತರದಲ್ಲಿ ಯಶಸ್ವಿಯಾಗಿ ಹಾರಿದೆ ಎಂದು ಇಸ್ರೋ ಘೋಷಿಸಿತು. ಉಡಾವಣಾ ವಾಹನವು ಮೂರು ಉಪಗ್ರಹಗಳನ್ನು ಹೊತ್ತೊಯ್ದಿದೆ. ಡಿಎಸ್‌-ಇಒ 365 ಕೆಜಿ ಮತ್ತು ನ್ಯೂಎಸ್ಎಆರ್ 155 ಕೆಜಿ ಉಪಗ್ರಹಗಳು ಇವೆರಡೂ ಸಿಂಗಾಪುರಕ್ಕೆ ಸೇರಿದವು. ಮೂರನೇ ಉಪಗ್ರಹವು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ (ಎನ್‌ಟಿಯು) 2.8 ಕೆಜಿ ಸ್ಕೂಬ್- 1 ಆಗಿದೆ.

PSLV-C53 Mission ISRO Launched 3 Satellites

ಡಿಎಸ್ ಇಒ ಎಲೆಕ್ಟ್ರೋ ಆಪ್ಟಿಕ್, ಮಲ್ಟಿ ಸ್ಪೆಕ್ಟ್ರಲ್ ಪೇಲೋಡ್ ಅನ್ನು ಹೊಂದಿದ್ದು, ಇದು ಭೂಮಿ ವರ್ಗೀಕರಣಕ್ಕಾಗಿ ಪೂರ್ಣ ಬಣ್ಣದ ಚಿತ್ರಗಳನ್ನು ಒದಗಿಸುತ್ತದೆ. ಇದು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ! ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ!

ನ್ಯೂಎಸ್ಎಆರ್, ಏತನ್ಮಧ್ಯೆ, ಹಗಲು ಮತ್ತು ರಾತ್ರಿ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಚಿತ್ರಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಕೂಬ್-ಐ ಉಪಗ್ರಹವು ವಿದ್ಯಾರ್ಥಿಗಳ ಉಪಗ್ರಹ ಸರಣಿಯ (ಎಸ್‌3- I) ಮೊದಲ ಉಪಗ್ರಹವಾಗಿದೆ. ಇದು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮವಾಗಿದೆ.

English summary
The Indian Space Research Organization (ISRO) on Thursday launched the PSLV-C53 mission carrying 3 Singaporean satellites from Sriharikota in Andhra Pradesh at 6.02 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X