ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂಎಸ್-01 ಉಪಗ್ರಹ ಹೊತ್ತ ಪಿಎಸ್ಎಲ್‌ವಿ-ಸಿ50 ಯಶಸ್ವಿ ಉಡಾವಣೆ

|
Google Oneindia Kannada News

ಬೆಂಗಳೂರು, ಡಿ.17: ಸಂವಹನ ಉಪಗ್ರಹ ಸಿಎಂಎಸ್-01 ಅನ್ನು ಒಳಗೊಂಡಿರುವ ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್‌ವಿ-ಸಿ50) ಡಿಸೆಂಬರ್ 17ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಇಸ್ರೋ ಶುಕ್ರವಾರ ತಿಳಿಸಿದೆ.

'ಪಿಎಸ್‌ಎಲ್‌ವಿ-ಸಿ50ಯು ಪಿಎಸ್‌ಎಲ್‌ವಿ 52ನೇ ಯೋಜನೆಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್‌ಡಿಎಸ್‌ಸಿ) ಎರಡನೆಯ ಉಡಾವಣಾ ಘಟಕದಿಂದ ಸಿಎಂಎಸ್-01ಅನ್ನು ಉಡಾವಣೆ ಮಾಡಲಾಗಿದೆ. ಬುಧವಾರ ಮಧ್ಯಾಹ್ನ 2.41 ಗಂಟೆಗೆ 25 ಗಂಟೆಗಳ ಕೌಂಟ್ ಡೌನ್ ಆರಂಭಿಸಲಾಯಿತು. ಡಿಸೆಂಬರ್ 17ರ ಮಧ್ಯಾಹ್ನ 3.41ರ ಸುಮಾರಿಗೆ ಉಡಾವಣೆಯ ಸಮಯದಂತೆ ಉಡಾವಣೆ ಮಾಡಲಾಗಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಸಿಎಂಎಸ್-01 ಒಂದು ಸಂವಹನ ಉಪಗ್ರಹವಾಗಿದ್ದು, ತರಂಗಾಂತರ ಸ್ಪೆಕ್ಟ್ರಮ್‌ನ ವಿಸ್ತೃತ ಸಿ ಬ್ಯಾಂಡ್‌ನಲ್ಲಿ ಸೇವೆಗಳನ್ನು ಒದಗಿಸಲು ಸಹಾಯ ಮಾಡಲಿದೆ. ವಿಸ್ತೃತ ಸಿ-ಬ್ಯಾಂಡ್ ಭಾರತದ ಮುಖ್ಯಭೂಮಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಸಂವಹನಕ್ಕೆ ನೆರವಾಗುತ್ತದೆ.

PSLV-C50 carrying communication satellite CMS-01 lifts off

ಸಿಎಂಎಸ್-01 ಭಾರತದ 42ನೇ ಸಂವಹನ ಉಪಗ್ರಹವಾಗಿದೆ. ಪಿಎಸ್‌ಎಲ್‌ವಿ-ಸಿ50ಯು ಪಿಎಸ್‌ಎಲ್‌ವಿಯ ಎಕ್ಸ್‌ಎಲ್‌ ಸಂರಚನೆಯ 22ನೇ ವಾಹನವಾಗಿದೆ. ಜತೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಎಸ್‌ಎಚ್‌ಎಆರ್‌ನಿಂದ ಉಡಾವಣೆಯಾಗುತ್ತಿರುವ 77ನೇ ಉಡ್ಡಯನ ವಾಹನವಾಗಲಿದೆ.

English summary
ISRO's trusted polar satellite launch vehicle carrying the space agency's latest communication satellite CMS-01 lifted off from the spaceport here on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X