ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್ ಹಣ ವಿತ್ ಡ್ರಾ: ಮೇ ತಿಂಗಳಿನಿಂದ ನೂತನ ಪದ್ದತಿಗೆ ಸಕಲ ಸಿದ್ದತೆ

ಪಿಎಫ್ ಚಂದಾದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ಭವಿಷ್ಯನಿಧಿ ಹಣವನ್ನು ಹಿಂಪಡೆಯುವ ಪದ್ದತಿಯನ್ನು ಆನ್ಲೈನ್ ಮೂಲಕ ಜಾರಿಗೆ ತರಲು ಪೂರ್ವ ಸಿದ್ದತೆ ನಡೆಸುತ್ತಿದೆ.

By Balaraj Tantry
|
Google Oneindia Kannada News

ನವದೆಹಲಿ, ಫೆ 20: ಕೆಲವೇ ವರ್ಷಗಳ ಹಿಂದಿನ ಕಥೆ, ಕೆಲಸಕ್ಕೆ ರಾಜೀನಾಮೆ ನೀಡಿದ ಮೂವತ್ತು ದಿನಗಳ ನಂತರ, ಪಿಎಫ್ ವಿತ್ ಡ್ರಾ ಅರ್ಜಿ ತುಂಬಿಸಿ ಪಿಎಫ್ ಕಚೇರಿಗೆ ಕಳುಹಿಸಿದರೆ ಅರವತ್ತು ದಿನದ ನಂತರ ಪಿಎಫ್ ಹಣ ವಾಪಾಸಾಗುತ್ತಿತ್ತು.

ಹಂತಹಂತವಾಗಿ ತನ್ನ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡ ಭವಿಷ್ಯನಿಧಿ ಕಚೇರಿ, ಕಾಲಕ್ಕೆ ತಕ್ಕಂತೆ ಡಿಜಿಟಲೀಕರಣಗೊಂಡು ಉತ್ತಮ ಸೇವೆಯನ್ನು ನೀಡುವಲ್ಲಿ ಒಂದು ಮಟ್ಟಿನ ಯಶಸ್ಸನ್ನು ಕಾಣುತ್ತಿದೆ. (ಪಿಎಫ್ ಬಡ್ಡಿ ಇಳಿಕೆಗೆ ಸಮ್ಮತಿ)

ಪಿಎಫ್ ಚಂದಾದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ಭವಿಷ್ಯನಿಧಿ ಹಣವನ್ನು ಹಿಂಪಡೆಯುವ ಪದ್ದತಿಯನ್ನು ಆನ್ಲೈನ್ ಮೂಲಕ ಜಾರಿಗೆ ತರಲು ಪೂರ್ವ ಸಿದ್ದತೆ ನಡೆಸುತ್ತಿದೆ.

Online provident fund withdrawal can be a reality from May 2017

ಪಿಎಫ್ ಸಚಿವಾಲಯದ ಈ ಮಹತ್ವಾಕಾಂಕ್ಷೆಯ ಕೆಲಸ ಎಲ್ಲಾ ಅಂದುಕೊಂಡಂತಾದರೆ ಇದೇ ಬರುವ (2017) ಮೇ ತಿಂಗಳಿನಿಂದ ನೂತನ ಪದ್ದತಿ ಜಾರಿಗೆ ಬರಲಿದೆ. ಜೊತೆಗೆ, ಭವಿಷ್ಯನಿಧಿ ಪಿಂಚಣಿ (ಇಪಿಎಸ್) ಹಣವನ್ನೂ ಆನ್ಲೈನ್ ಮೂಲಕವೇ ನಿಗದಿ ಪಡಿಸಬಹುದಾಗಿದೆ.

ಆ ಮೂಲಕ ಪ್ರಧಾನಿ ಮೋದಿಯವರ ಕನಸಿನ ಡಿಜಟಲೀಕರಣದ ಕೂಸಿಗೆ ದೇಶದ ಬಹುಸಂಖ್ಯಾತ ಕಾರ್ಮಿಕ ವರ್ಗದ ಉಳಿತಾಯದ ದಾರಿಯಾಗಿರುವ ಭವಿಷ್ಯನಿಧಿ ಹಣದ ವ್ಯವಹಾರ ಮತ್ತಷ್ಟು ಬಲ ನೀಡಲಿದೆ.

ಸರಿಸುಮಾರು ಒಂದು ಕೋಟಿಗಿಂತಲೂ ಹೆಚ್ಚು ವಿತ್ ಡ್ರಾ ಅರ್ಜಿಯನ್ನು ಭವಿಷ್ಯನಿಧಿ ಕಾರ್ಯಾಲಯ ಕೈಯಮೂಲಕ (manual) ವಿಲೇವಾರಿ ಮಾಡುತ್ತಿದೆ.

ಈ ಎಲ್ಲಾ ತೊಂದರೆ, ಲೆಕ್ಕಾಚಾರದಲ್ಲಾಗುವ ತಪ್ಪುಗಳಿಗೆ ಪೂರ್ಣ ವಿರಾಮ ನೀಡಲು ಪಿಎಫ್ ಕಾರ್ಯಾಲಯ, ಹೊಸ ತಂತ್ರಜ್ಞಾನದ ಮೂಲಕ ನಡೆಸುತ್ತಿರುವ Online settlement ಸಿದ್ದತೆ ಬಹುತೇಕ ಪೂರ್ಣಗೊಂಡಿದೆ.

English summary
EPFO is expected to launch online facility for settlement of claims, including EPF withdrawal and pension fixation, by May 2017 to put an end to tedious paper work by its member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X