ಇವಿಎಂ ಟ್ಯಾಂಪರ್ ಮಾಡಿ ತೋರಿಸಿ - ಇಸಿ ಸವಾಲ್

Subscribe to Oneindia Kannada

ನವದೆಹಲಿ, ಏಪ್ರಿಲ್ 13: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳನ್ನು ತಿರುಚಬಹುದು ಎಂಬ ಕಾಂಗ್ರೆಸ್, ಎಡಪಕ್ಷಗಳು ಮತ್ತು ಎಎಪಿಯ ಆರೋಪಕ್ಕೆ ಚುನಾವಣಾ ಆಯೋಗ ಹೊಸ ಚಾಲೆಂಜ್ ಮುಂದಿಟ್ಟಿದೆ.

ರಾಜಕೀಯ ಪಕ್ಷಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಚಾಲೆಂಜ್ ಮಾಡಿರುವ ಚುನಾವಣಾ ಆಯೋಗ ಇವಿಎಂ ತಿರುಚಬಹುದು ಎಂಬುದನ್ನು ಬಂದು ಸಾಬೀತುಪಡಿಸಿ ಎಂದು ಹೇಳಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]

Prove EVMs can be tampered, EC's new challenge

ವಿಚಿತ್ರವೆಂದರೆ 2009ರಲ್ಲೂ ಇದೇ ರೀತಿ ಇವಿಎಂಗಳ ವಿರುದ್ಧ ಹಲವು ರಾಜಕೀಯಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದವು. ಆ ಸಂದರ್ಭದಲ್ಲಿಯೂ ಚುನಾವಣಾ ಆಯೋಗ ಇದೇ ರೀತಿಯ ಚಾಲೆಂಜ್ ಮುಂದಿಟ್ಟಿತ್ತು.

ಈ ಹೊಸ ಚಾಲೆಂಜ್ ಪ್ರಕಾರ ಚುನಾವಣಾ ಆಯೋಗ ತನ್ನ ಕೇಂದ್ರ ಕಚೇರಿಯಲ್ಲಿ ಒಂದು ವಾರದಿಂದ 10 ದಿನಗಳ ಕಾಲ ಇವಿಎಂಗಳನ್ನು ಇಡಲಿದೆ. ಸಂಶಯ ಇದ್ದವರು ಬಂದು ಈ ಇವಿಎಂಗಳನ್ನು ಟ್ಯಾಂಪರ್ ಮಾಡಬಹುದು ಎಂಬುದನ್ನು ಸಾಬೀತುಮಾಡಬಹುದು. ಚುನಾವಣಾ ಆಯೋಗದ ತಂತ್ರಜ್ಞರ ತಂಡ ಸಾಬೀತು ಮಾಡಿದನ್ನು ಗಮನಿಸಲಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸುದ್ದಿ-ಗದ್ದಲ!]

ಈ ಮೂಲಕ ಮತದಾರರ ಮತಗಳು ಸುರಕ್ಷಿತವಾಗಿವೆ ಎಂಬುದನ್ನು ಚುನಾವನಾ ಆಯೋಗ ಬಿಂಬಿಸಲು ಹೊರಟಿದೆ.

ಆದರೆ ಈ ರೀತಿ ನಡೆಸುವ ಪ್ರಯೋಗಗಳನ್ನು ಲೈವ್ ಮಾಡಲು ಯಾವುದೇ ಚಾನಲ್ಲುಗಳಿಗೆ ಅವಕಾಶ ನೀಡಿಲ್ಲ. ಬದಲಿಗೆ ಪ್ರತೀ ಪ್ರದರ್ಶನಗಳನ್ನೂ ವಿಡಿಯೋ ಮಾಡಿ ಚುನಾವಣಾ ಆಯೋಗದ ವೆಬ್ಸೈಟ್ ಗೆ ಅಪ್ಲೋಡ್ ಮಾಡಲಾಗುತ್ತದೆ.

2009ರ ಆಗಸ್ಟ್ 3 ರಿಂದ 8ರ ನಡುವೆ 100 ಇವಿಎಂಗಳನ್ನು ತನ್ನ ಕೇಂದ್ರ ಕಚೇರಿಯಲ್ಲಿಟ್ಟು ಇದೇ ರೀತಿ ಚಾಲೆಂಜ್ ನೀಡಿದಾಗ ಯಾವುದೇ ತಾಂತ್ರಿಕ ತಜ್ಞರಾಗಲೀ, ರಾಜಕೀಯ ಪಕ್ಷದವರಿಗಾಗಲೀ ಇವಿಎಂ ತಿರುಚಲು ಸಾಧ್ಯವಾಗಿರಲಿಲ್ಲ. ಹೀಗಿದ್ದು ಈ ಹೊಸ ಚಾಲೆಂಜನ್ನು ಚುನಾವಣಾ ಆಯೋಗ ನೀಡಿದೆ. ಈ ಬಾರಿ ಯಾರಾದರೂ ಸಾಬೀತಿಪಡಿಸಿ ತೋರಿಸುತ್ತಾರೋ ಕಾದು ನೋಡಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Election commission on Wednesday threw a challenge to political parties, scientists and technical experts to prove that EVMs could be tampered. With Congress, Left, AAP and other political parties claiming that Electronic voting machines manipulated to favour BJP, this new challenge was made.
Please Wait while comments are loading...