ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in:ಮಣಿಪುರ ಸಂಘರ್ಷ; ಇಂಟರ್‌ನೆಟ್ ಸ್ಥಗಿತ, ಸೆಕ್ಷನ್ 144 ಜಾರಿ

|
Google Oneindia Kannada News

ಇಂಫಾಲ, ಆಗಸ್ಟ್ 08: ವಿವಾದಿತ ಮಣಿಪುರ (ಗುಡ್ಡಗಾಡು ಪ್ರದೇಶಗಳು) ಜಿಲ್ಲಾ ಕೌನ್ಸಿಲ್ 6 ಮತ್ತು 7 ನೇ ತಿದ್ದುಪಡಿ ಮಸೂದೆ ಜಾರಿ ಕುರಿತು ಮಣಿಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ರಾಜ್ಯ ಸರಕಾರ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸಿದೆ. ಜೊತೆಗೆ ಸೆಕ್ಷನ್ 144 ಜಾರಿಗೊಳಿಸಿದೆ.

ರಾಜ್ಯದಾದ್ಯಂತ ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿನ ಅಧಿಕಾರಿಗಳು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಎರಡು ತಿಂಗಳ ಕಾಲ ಒಟ್ಟುಗೂಡುವುದನ್ನು ನಿಷೇಧಿಸುವ ಆದೇಶಗಳನ್ನು ವಿಧಿಸಿದ್ದಾರೆ.

ಸಂಸತ್ತು ರೌಂಡಪ್: ಕುಟುಂಬ ನ್ಯಾಯಾಲಯಗಳ ಮಸೂದೆಗೆ ಅಂಗೀಕಾರಸಂಸತ್ತು ರೌಂಡಪ್: ಕುಟುಂಬ ನ್ಯಾಯಾಲಯಗಳ ಮಸೂದೆಗೆ ಅಂಗೀಕಾರ

ಮಣಿಪುರ (ಬೆಟ್ಟ ಪ್ರದೇಶಗಳು) ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಮಸೂದೆ, 2021 ಅನ್ನು ವಿಧಾನಸಭೆಯಲ್ಲಿ ಮಂಡಿಸಬೇಕು ಎಂದು ಮಣಿಪುರದ ಪ್ರಬಲ ಬುಡಕಟ್ಟು ವಿದ್ಯಾರ್ಥಿ ಸಂಘಟನೆ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ (ATSUM) ಒತ್ತಾಯಿಸುತ್ತಿದೆ. ಕಳೆದ ವರ್ಷ ರಚಿಸಲಾದ ಮಸೂದೆಯು ರಾಜ್ಯದ ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುತ್ತದೆ.

Protests in Manipur; govt suspended mobile Internet, Order section 144

ಬುಡಕಟ್ಟು ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೇ ಮಣಿಪುರದ ಬಿಜೆಪಿ ನೇತೃತ್ವದ ಸರಕಾರ ರಾಜ್ಯ ವಿಧಾನಸಭೆಯಲ್ಲಿ ಮಣಿಪುರ (ಗುಡ್ಡಗಾಡು ಪ್ರದೇಶಗಳು) ಜಿಲ್ಲಾ ಕೌನ್ಸಿಲ್ 6 ಮತ್ತು 7 ನೇ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದೆ. ಆದರೆ, ಅವರು ಮಂಡಿಸಿರುವ ಮಸೂದೆಯು ತಮ್ಮ ಬೇಡಿಕೆಗಳಿಗೆ ಅನುಗುಣವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗಳು, ಬಂದ್‌ಗಳು, ಹೆದ್ದಾರಿ ತಡೆಗಳನ್ನು ವಿದ್ಯಾರ್ಥಿ ಸಂಘಟನೆಯಾದ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ (ATSUM) ನಡೆಸಡುತ್ತಿದೆ. ATSUM ಶುಕ್ರವಾರ ಬೆಳಗ್ಗೆಯಿಂದ ಬೆಟ್ಟದ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಅನಿರ್ದಿಷ್ಟಾವಧಿಯ ಆರ್ಥಿಕ ದಿಗ್ಬಂಧನವನ್ನು ವಿಧಿಸಿತ್ತು. ಆಗಸ್ಟ್ 4 ರಂದು, ಪೊಲೀಸರು ಐವರು ATSUM ನಾಯಕರನ್ನು ಬಂಧಿಸಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

Protests in Manipur; govt suspended mobile Internet, Order section 144

ಪ್ರತಿಭಟನೆ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ನಂತರ ಶನಿವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದ ಕೆಲವು "ಆಕ್ಷೇಪಾರ್ಹ" ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹರಿದಾಡುತ್ತಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 30 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ಮಣಿಪುರ (ATSUM) ಮಣಿಪುರ ಸ್ವಾಯತ್ತ ಜಿಲ್ಲಾ ಕೌನ್ಸಿಲ್ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಲು 60 ಸದಸ್ಯರ ಸದನನಕ್ಕೆ ಪತ್ತಡ ಹಾಕುತ್ತಿದೆ. ಈ ಮಸೂದೆಯೂ ಬುಡಕಟ್ಟು ಜನರು ವಾಸಿಸುವ ಗುಡ್ಡಗಾಡು ಪ್ರದೇಶಗಳು ಅಭಿವೃದ್ಧಿಗಾಗಿ ಹೆಚ್ಚಿನ ಆರ್ಥಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುತ್ತದೆ.

Recommended Video

ಕಾಮಗಾರಿ ವಿಳಂಬ ಮಾಡಿದ ಅಧಿಕಾರಿಗಳ ಮೇಲೆ ಭೈರತಿ ಸಿಡಿಲು | Oneindia Kannada

English summary
tribal students Union Protests Over Contentious Bill; Manipur government suspended mobile Internet services for five days, Order section 144. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X