ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಬಂದ್‌: ಪಂಢರಪುರಕ್ಕೆ ಹೋಗಲು ಕನ್ನಡಿಗರ ಪರದಾಟ

By Nayana
|
Google Oneindia Kannada News

ಮಹಾರಾಷ್ಟ್ರ, ಜು.24: ಪಂಢರಪುರ ಧಾರ್ಮಿಕ ಕ್ಷೇತ್ರವಾಗಿದ್ದು ದಿನನಿತ್ಯ ಸಾವಿರಾರು ಭಕ್ತರು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಾರೆ, ಆದರೆ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಪ್ರಯಾಣಿಕರು ಬಸ್‌ನಲ್ಲಿಯೇ ಬಾಕಿಯಾಗಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ ಪಂಢರಪುರಕ್ಕೆ ತೆರಳುತ್ತಿದ್ದ ಬಸ್‌ ಒಂದು ರಾತ್ರಿಯಿಂದಲೂ ಲತೂರ್‌ ಬಸ್‌ ನಿಲ್ದಾಣದಲ್ಲಿಯೇ ನಿಂತಿದೆ.

ಸರ್ಕಾರಿ ಕೆಲಸದಲ್ಲಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಹಲವಾರು ಮರಾಠ ಸಂಘಟನೆಗಳು ಮಂಗಳವಾರ ಮಹಾರಾಷ್ಟ್ರ ಬಂದ್‌ಗೆ ಕರೆ ಕೊಟ್ಟಿವೆ.

ವಾರಗಟ್ಟಲೇ ವಿಠ್ಠಲ ದರ್ಶನಕ್ಕೆಂದು ವಾರಕರಿ ಸೇವೆ ಮಾಡಿಕೊಂಡು ಪಂಢರಪುರ ಸೇರಿದ ಸಹಸ್ರಾರು ಭಕ್ತರು,ಆಷಾಢ ಏಕಾದಶಿಯಂದು ತುಂಬಿ ಹರಿಯುತ್ತಿದ್ದ ಚಂದ್ರಭಾಗಾನದಿಯಲ್ಲಿ ಮಿಂದೆದ್ದರು.
ಸೋಮವಾರ ಆಷಾಢ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತದೆ ಇದಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶದಿಂದ ಮತ್ತಿತರೆ ರಾಜ್ಯಗಳಿಂದ 15 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು ಆದರೆ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿರುವ ಪರಿಣಾಮ ಭಕ್ತರು ಅಂತಂತ್ರ ಸ್ಥಿತಿಗೆ ಸಿಲುಕುವಂತಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಇದುವರೆಗೂ ಯಾವುದೇ ಆಶ್ವಾಸನೆಯನ್ನು ನೀಡಿಲ್ಲ, ಹಾಗಾಗಿ ಸರ್ಕಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಸೋಮವಾರ ಈ ಮರಾಠ ಪ್ರತಿಭಟನೆಯು ಸಾವಿನಿಂದ ಆರಂಭವಾಗಿದೆ, ಪ್ರತಿಭಟನಾಕಾರ 27 ವರ್ಷದ ಕಾಕಾಸಾಹೇಬ್‌ ಶಿಂದೆ ಗೋದಾವರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ವಿಡಿಯೋಗಳಲ್ಲಿ ನೋಡಿ ಮಹಾರಾಷ್ಟ್ರ ಬಂದ್ ಅಬ್ಬರ! ವಿಡಿಯೋಗಳಲ್ಲಿ ನೋಡಿ ಮಹಾರಾಷ್ಟ್ರ ಬಂದ್ ಅಬ್ಬರ!

ಇದರಿಂದಾಗಿ ಪ್ರತಿಭಟನೆ ಕಾವು ಇನ್ನೂ ಹೆಚ್ಚಾಗಿದೆ, ಅಹಮದಾನಗರ, ಔರಂಗಾಬಾದ್‌, ಗಂಗಾಖೇದ್‌ ಪೊಲೀಸ್‌ ವಾಹನ ಹಾಗೂ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಡರಪುರಕ್ಕೆ ತೆರಳುತ್ತಿದ್ದ ಬಸ್‌ನ್ನು ಲಾತೂರ್‌ ಬಸ್‌ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಪ್ರತಿಭಟನಾಕಾರರು ತಡೆ ಹಿಡಿದಿದ್ದಾರೆ.

Protests by Maratha groups intensify across Maharashtra

ನಮ್ಮ ಜಾಗ್ರತೆಯಲ್ಲಿ ನಾವು ಹೋಗುತ್ತೇವೆ ಎಂದರೂ ಬಸ್‌ ನಿರ್ವಾಹಕ ಹಣವನ್ನೂ ಹಿಂದಿರುಗಿಸುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

English summary
Several Maratha outfits have called for a state-wide agitation demanding reservation in government jobs and education on Tuesday. The community claims despite assurances state Chief Minister Devendra Fadnavis, no concrete steps have been taken so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X