• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರ್ಭಯಾ ರೇಪ್: ಮೊಸಳೆ ಕಣ್ಣೀರು ಹಾಕುತ್ತಿರುವವರು ಯಾರು?

|

ನವದೆಹಲಿ, ಮಾ. 4: ನಿರ್ಭಯಾ ಗ್ಯಾಂಗ್ ರೇಪ್ ಕುರಿತಂತೆ ಸಮಾಜವಾದಿ ಪಕ್ಷದ ಎಂಪಿ ಜಯಾ ಬಚ್ಚನ್ ಹೇಳಿಕೆ ಮತ್ತು ಪ್ರತಿಭಟನೆ ರಾಜ್ಯಸಭೆಯಲ್ಲಿ ಬುಧವಾರ ಕೋಲಾಹಲ ಸೃಷ್ಟಿಸಿತ್ತು. ಜಯಾ ಬಚ್ಚನ್ ಹೇಳಿಕೆಯಿಂದ ರಾಜ್ಯಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಬೇಕಾಗಿ ಬಂತು.

ಮಹಿಳಾ ಎಂಪಿಗಳು ರಾಜ್ಯಸಭೆ ಅಂಗಳಕ್ಕೆ ಇಳಿದು ಧರಣಿಯನ್ನು ನಡೆಸಿದರು. ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಯನ್ನು ಸಂದರ್ಶನ ಮಾಡಿದ್ದರ ಬಗ್ಗೆ, ಸಂದರ್ಶನಕ್ಕೆ ಅವಕಾಶ ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಯಾ ಬಚ್ಚನ್ ನೇತೃತ್ವದ ತಂಡ ಆಗ್ರಹಪಡಿಸಿತು.[ನಿರ್ಭಯಾಳ ಬರ್ಬರ ಅತ್ಯಾಚಾರಕ್ಕೆ ಒಂದು ವರ್ಷ!]

ತಿಹಾರ್ ಜೈಲಿನಲ್ಲಿರುವ ಅಪರಾಧಿಯನ್ನು ಯಾಕೆ ಸಂದರ್ಶನ ಮಾಡಲಾಗಿದೆ? ಅಲ್ಲದೇ ಆತ ನೀಡಿರುವ ಹೇಳಿಕೆಗಳಿಗೆ ಅರ್ಥವಿದೆಯೇ? ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕಲಾಯಿತು. ಮಹಿಳೆಯರ ಮಾತಿಗೆ ಮತ್ತಷ್ಟು ಜನ ಪುರುಷ ಎಂಪಿಗಳು ಧ್ವನಿಗೂಡಿಸಿದರು. ಈ ವೇಳೆ ರಾಜ್ಯಸಭೆಯಲ್ಲಿ ಕೋಲಾಹಲ ಎದ್ದಿದ್ದರಿಂದ ಉಪ ಸಭಾಪತಿ ಪಿಜೆ ಕುರಿಯನ್ ಸಭೆಯನ್ನು ಮುಂದೂಡುವ ತೀರ್ಮಾನ ತೆಗೆದುಕೊಂಡರು.

ನಂತರ ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಮುಕ್ತಾರ ಅಬ್ಬಾಸ್ ನಕ್ವಿ, ಗೃಹ ಸಚಿವಾಲಯದಿಂದ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ. ಅಪರಾಧಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.[ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]

ಮತ್ತೆ ಕೆರಳಿದ ಜಯಾ ಬಚ್ಚನ್, ಮಹಿಳೆಯರಿಗೆ 'ನಿಮ್ಮ ಮೊಸಳೆ ಕಣ್ಣೀರು ಬೇಕಾಗಿಲ್ಲ. ಶೀಘ್ರವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದರು.

ಕಾಲಕ್ಕೆ ತಕ್ಕಂತೆ ಬದಲಾಗುವ ಜಯಾ ಬಚ್ಚನ್ ಮಾತು!

ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ 2012 ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ಖಂಡಿಸಿದ್ದರು. ಆದರೆ ಆ ವೇಳೆ ಮಾತನಾಡದೇ ಮೌನವಾಗಿದ್ದ ಜಯಾ ಬಚ್ಚನ್ ಈಗೇಕೆ ಕೂಗಾಡುತ್ತಿದ್ದಾರೆ? ಅಮಿತಾಬ್ ಬಚ್ಚನ್ ಪತ್ನಿ ಅಂದು ಮೌನವಾಗಿ ಇದ್ದದ್ದು ಯಾಕೆ? ಎಂಬುದಕ್ಕೆ ಅವರ ಬಳಿಯೇ ಉತ್ತರವಿಲ್ಲ.

ರಾಜಕೀಯ ದಾಳವಾಗಿ ಬಳಕೆ!

ನಿರ್ಭಯಾ ಅತ್ಯಾಚಾರ ಪ್ರಕರಣದ ವೇಳೆ ದೆಹಲಿಯಲ್ಲಿ ಎರಡು(ಯುಪಿಎ, ಶೀಲಾ ದೀಕ್ಷಿತ್) ಕಾಂಗ್ರೆಸ್ ಸರ್ಕಾರಗಳು ಅಸ್ತಿತ್ವದಲ್ಲಿದ್ದವು. ಆಗ ಧ್ವನಿ ಎತ್ತದ ಬಚ್ಚನ್ ಈಗೇಕೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಕೂಗಾಡುತ್ತಿದ್ದಾರೆ?

ಜಯಾ ಬಚ್ಚನ್ ಅವರ ಪಕ್ಷವೇ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದೆ. ಲೆಕ್ಕವಿಲ್ಲದಷ್ಟು ಅತ್ಯಾಚಾರ ಪ್ರಕರಣಗಳು ಯುಪಿಯಲ್ಲಿ ಪ್ರತಿದಿನ ದಾಖಲಾಗುತ್ತಿವೆ. ಇತ್ತೀಚೆಗಷ್ಟೇ ಲಕ್ನೋದ ಹೊರವಲಯದಲ್ಲಿ 32 ವರ್ಷದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಆದರೆ ಆಗ ಜಯಾ ಬಚ್ಚನ್ ಬಾಯಿ ಮುಚ್ಚಿಕೊಂಡಿದ್ದರು![ಉತ್ತರ ಪ್ರದೇಶದಲ್ಲಿ ಯುವತಿ ಅಪಹರಣ, ಗ್ಯಾಂಗ್ ರೇಪ್]

ನಿಜವಾದ ಪರಿಹಾರ ಬೇಕಿದೆ, ನಟನೆಯಲ್ಲ!

ಇಲ್ಲಿ ಜೈಲು ಅಧಿಕಾರಿಗಳ ಕ್ರಮ ಅಥವಾ ಅಪರಾಧಿಯ ಸಂದರ್ಶನ ಮುಖ್ಯವಲ್ಲ. ಜನರಿಗೆ ಬೇಕಾಗಿದ್ದು ನಿಜವಾದ ಪರಿಹಾರ. ಈ ರೀತಿಯ ಮೊಸಳೆ ಕಣ್ಣೀರಿಂದ ಮಹಿಳೆಯರ ರಕ್ಷಣೆ ಸಾಧ್ಯವೇ? ಅಥವಾ ನಿಜಕ್ಕೂ ಮಹಿಳೆಯರ ರಕ್ಷಣೆಗೆ ಸರ್ಕಾರಗಳು, ರಾಜಕಾರಣಿಗಳು ಬದ್ಧರಾಗಿದದ್ದಾರೆಯೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Rajya Sabha was adjourned for 15 minutes on Wednesday after women MPs led by Samajwadi Party's Jaya Bachchan stormed the well of the house seeking action against the authorities of the Tihar Jail for allowing an interview of one of the convicts of theNirbhaya gangrape case of 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more