ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಡಿಸಿಎಂ ಮನೆ ಮೇಲೆ ಉದ್ರಿಕ್ತರ ದಾಳಿ; ಅಗ್ನಿಪಥ್ ವಿರೋಧಿಸಿ ಶುಕ್ರವಾರವೂ ಹಲವೆಡೆ ಪ್ರತಿಭಟನೆ, ಹಿಂಸಾಚಾರ

|
Google Oneindia Kannada News

ಬೆಟ್ಟಯ್ಯ ಜೂನ್ 17: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಹಲವೆಡೆ ಪ್ರತಿಭಟನಾಕಾರರ ಗುಂಪು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಹಾನಿ ಮಾಡಿದೆ. ಬಿಹಾರ ಮತ್ತು ಹರಿಯಾಣ ರಾಜ್ಯದಲ್ಲಿ ತೀವ್ರಗೊಂಡಿದೆ. ಈ ರಾಜ್ಯಗಳಲ್ಲಿ ನಿರುದ್ಯೋಗ ಇತರ ರಾಜ್ಯಗಳಿಗಿಂತ ಹೆಚ್ಚಾಗಿದೆ. ಬೆಟ್ಟಿಯಾದಲ್ಲಿರುವ ಉಪ ಮುಖ್ಯಮಂತ್ರಿ ರೇಣುದೇವಿ ನಿವಾಸದಲ್ಲೂ ಯುವಕರು ಗಲಾಟೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಡಾ.ಸಂಜಯ್ ಜೈಸ್ವಾಲ್ ಅವರ ಬೆಟ್ಟಯ್ಯನ ಮನೆ ಮೇಲೂ ದಾಳಿ ನಡೆದಿದೆ.

ಬಿಹಾರದ ಬೆಟ್ಟಿಯಾದಲ್ಲಿ ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆಯ ಹೆಸರಿನಲ್ಲಿ ಚಳವಳಿಗಾರರು ಗಲಾಟೆ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ರೇಣುದೇವಿ ಪುತ್ರ ಹೇಳಿದ್ದಾರೆ. ಉಪಮುಖ್ಯಮಂತ್ರಿ ರೇಣುದೇವಿ ಅವರ ನಿವಾಸದಲ್ಲಿ ಅವರ ಪುತ್ರ, 'ನಮ್ಮ ನಿವಾಸದ ಮೇಲೆ ದಾಳಿ ನಡೆದಿದೆ. ನಾವು ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಆದರೆ, ತಾಯಿ (ರೇಣುದೇವಿ) ಈಗ ಪಾಟ್ನಾದಲ್ಲಿ ಇರುವುದು ಒಳ್ಳೆಯದು, ನಾವು ಕರೆ ಮಾಡಿದ್ದೇವೆ. ಬೆಟ್ಟಿಯಾ ಪೋಲೀಸರು ರಕ್ಷಣೆಗಾಗಿ ದಾವಿಸಿದ್ದಾರೆ" ಎಂದು ಟ್ವಿಟ್ ಮಾಡಿದ್ದಾರೆ.

ಆಂದೋಲನಕಾರರು ಸೃಷ್ಟಿಸುತ್ತಿರುವ ಹಿಂಸಾಚಾರದ ಕೆಲವು ದೃಶ್ಯಗಳು ತೆರೆಗೆ ಬಂದಿದ್ದು, ಇದರಲ್ಲಿ ಎಷ್ಟರ ಮಟ್ಟಿಗೆ ಅಬ್ಬರ ಸೃಷ್ಟಿಯಾಗುತ್ತಿದೆ ಎಂಬುದನ್ನು ನೋಡಬಹುದು. ಕೆಲವೆಡೆ ಭಾರೀ ವಿಧ್ವಂಸಕ ಕೃತ್ಯ ನಡೆದಿದೆ.

ತಪ್ಪಿಕಸ್ಥರ ವಿರುದ್ಧ ಕ್ರಮದ ಭರವಸೆ

ತಪ್ಪಿಕಸ್ಥರ ವಿರುದ್ಧ ಕ್ರಮದ ಭರವಸೆ

'ನಾವು ವಿಡಿಯೊವನ್ನು ತನಿಖೆ ಮಾಡುತ್ತಿದ್ದೇವೆ, ಪ್ರತಿಭಟನಾಕಾರರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಬಲ್ಲಿಯಾ ಪೊಲೀಸ್ ಮುಖ್ಯಸ್ಥ ರಾಜ್ ಕರಣ್ ನಯ್ಯರ್ ಹೇಳಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಬಲ್ಲಿಯಾ ಡಿಎಂ ಸೌಮ್ಯ ಅಗರ್ವಾಲ್ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬಿಹಾರದಲ್ಲಿ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಲಖಿಸರಾಯ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿ ಹಚ್ಚಿದ್ದಾರೆ. ನಾವು ವಿಡಿಯೊ ಚಿತ್ರೀಕರಣ ಮಾಡದಂತೆ ಪ್ರತಿಭಟನಾಕಾರರು ನಮ್ಮನ್ನು ತಡೆದರು. ಈ ಜನರು ನಮ್ಮ ಫೋನ್ ಅನ್ನು ಕಸಿದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಬಲ್ಲಿಯಾದಲ್ಲಿ ರೈಲಿಗೆ ಬೆಂಕಿ

4-5 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಹೇಗೋ ರೈಲಿನಿಂದ ಹೊರಬಂದಿದ್ದಾರೆ. ಪ್ರತಿಭಟನೆಯಿಂದಾಗಿ ಬಿಹಾರದಲ್ಲಿ ದೆಹಲಿ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 2 ಅನ್ನು ಮುಚ್ಚಲಾಗಿದೆ. ಉತ್ತರಪ್ರದೇಶದ ಬಲ್ಲಿಯಾದಲ್ಲಿ ಇಂದು ಬೆಳಗ್ಗೆ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕೋಲಾಹಲ ಸೃಷ್ಟಿಸಿದರು. ವಾಷಿಂಗ್‌ಪಿಟ್‌ನಲ್ಲಿ ನಿಲ್ಲಿಸಿದ್ದ ರೈಲಿಗೆ ಯುವಕರು ಬೆಂಕಿ ಹಚ್ಚಿದ್ದಾರೆ. ಬಲ್ಲಿಯಾದಲ್ಲಿ 40-50 ಜನರನ್ನು ಬಂಧಿಸಲಾಗಿದೆ.

ಪೊಲೀಸರಿಂದ ಲಾಠಿ ಚಾರ್ಜ್

ಅಗ್ನಿಪಥ ಯೋಜನೆ ವಿರೋಧಿಸಿ ಫಿರೋಜಾಬಾದ್‌ನಲ್ಲೂ ಇಂದು ಬೆಳಗ್ಗೆಯಿಂದ ಪ್ರತಿಭಟನೆಗಳು ನಡೆಯುತ್ತಿವೆ. ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ದುಷ್ಕರ್ಮಿಗಳು 5 ಬಸ್‌ಗಳನ್ನು ಧ್ವಂಸಗೊಳಿಸಿ ರಸ್ತೆಯನ್ನು ತಡೆದಿರುವ ಘಟನೆಗಳು ವರದಿಯಾಗಿವೆ. ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದರು. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಬಲ್ಲಿಯಾದಲ್ಲಿರುವ ಲಾರಿಕ್ ಸ್ಟೇಡಿಯಂನಲ್ಲಿ ಜಮಾಯಿಸಿದ ನೂರಾರು ಜನರು, ಇಲ್ಲಿ ನಿಲ್ಲಿಸಲಾಗಿದ್ದ ಬಸ್‌ಗಳನ್ನು ಧ್ವಂಸಗೊಳಿಸಿ ರೈಲು ನಿಲ್ದಾಣದ ಕಡೆಗೆ ಹೊರಟರು.

ಬಲ್ಲಿಯಾದಿಂದ ವಾರಣಾಸಿಗೆ ಹೋಗುತ್ತಿದ್ದ MEMU ರೈಲಿಗೆ ಮತ್ತು ಜಾನ್‌ಪುರ್ ಶಾಹಗಂಜ್‌ಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಲು ಯತ್ನಿಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಯುವಕರನ್ನು ಬೆನ್ನಟ್ಟಿ 50 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

'ಪ್ರತಿಭಟನೆ ಹಿಂದೆ ವಿಪಕ್ಷ ಕೈವಾಡ'

'ಪ್ರತಿಭಟನೆ ಹಿಂದೆ ವಿಪಕ್ಷ ಕೈವಾಡ'

ಅಗ್ನಿಪಥ್ ಯೋಜನೆಯು ಜೀವನಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಇದು ನಿಮ್ಮ ಭವಿಷ್ಯವನ್ನು ಬಂಗಾರವಾಗಿಸುತ್ತದೆ, ನೀವು ಯಾರಿಂದಲೂ ತಪ್ಪುದಾರಿಗೆಳೆಯಬಾರದು, ಅಗ್ನಿವೀರರಿಗೆ ಪೊಲೀಸ್ ಮತ್ತು ಇತರ ಸೇವೆಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಗುರುವಾರ ಮೊದಲು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದರು. ಗುರುವಾರ 11 ಜಿಲ್ಲೆಗಳಲ್ಲಿ ಉಗ್ರ ಪ್ರತಿಭಟನೆಗಳು ನಡೆದಿವೆ. ಅಲಿಘರ್, ಬುಲಂದ್‌ಶಹರ್‌ನಲ್ಲಿ ಪರಿಸ್ಥಿತಿ ನಿಯಂತ್ರಿಸಲಾಗದೆ ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಅದೇ ಸಮಯದಲ್ಲಿ, ಸೀತಾಪುರ, ಡಿಯೋರಿಯಾ, ಮೀರತ್ ಮತ್ತು ಉನ್ನಾವೊದಲ್ಲಿ ಅಗ್ನಿಪಥ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹರಿಯಾಣದ ಪಲ್ವಾಲ್ ಜಿಲ್ಲೆಯಲ್ಲಿ, ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು, ನಂತರ ಇಲ್ಲಿ 24 ಗಂಟೆಗಳ ಕಾಲ SMS ಸೇವೆ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.

English summary
Youth in various states are protesting against the 'Agnipath' Scheme. In Bihar and Rajasthan, people are taking to the streets to protest against this project. It is reported that the youth have also created a ruckus at the residence of Deputy CM Renu Devi in ​​Bettiah. BJP State President Dr. Sanjay Jaiswal's house in Bettiah was also attacked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X