ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಘಾತಕಾರಿ ಸುದ್ದಿ: ಮಹಿಳೆಯರಿಗಿಂತ ಪುರುಷರಲ್ಲೇ ಕ್ಯಾನ್ಸರ್ ಹೆಚ್ಚು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಎಲ್ಲಾ ಬಗೆಯ ಕ್ಯಾನ್ಸರ್‌ಗಳು ಮಹಿಳೆಯರಿಗಿಂತಲೂ ಪುರುಷರಲ್ಲೇ ಹೆಚ್ಚು ಕಂಡುಬಂದಿದೆ.

ಕ್ಯಾನ್ಸರ್ ಶೇ.52.4 ಮಂದಿ ಪುರುಷರಲ್ಲಿ ಕಾಣಿಸಿಕೊಂಡರೆ ಸ್ತನ ಕ್ಯಾನ್ಸರ್ ಇನ್ನಿತರೆ ಕ್ಯಾನ್ಸರ್‌ ಸೇರಿ ಕೇವಲ 47.4ರಷ್ಟು ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಅಂದರೆ ಶೇಕಡಾ ನೂರರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಪುರುಷರಲ್ಲೇ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

2019 ಮತ್ತು 2020ರ ನಡುವಿನ ಪ್ರಕರಣಗಳಲ್ಲಿ ಶೇ.21ರಷ್ಟು ಏರಿಕೆಯಾಗಿದೆ. ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು 45 ರಿಂದ 64 ವರ್ಷದವರಲ್ಲಿ ಕಾಣಿಸಿಕೊಂಡಿದೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಮಾಹಿತಿ ಪ್ರಕಾರ, 2019ರಲ್ಲಿ 11.5 ಲಕ್ಷ ದಿಂದ 2020ರ ಹೊತ್ತಿಗೆ 13.9 ಲಕ್ಷಕ್ಕೆ ಏರಿಕೆಯಾಗಿದೆ.

Proportion Of All Cancer Cases Higher In Men: ICMR Report

ಥೈರಾಯ್ಡ್ ಕ್ಯಾನ್ಸರ್ (ಮಹಿಳೆಯರಲ್ಲಿ ಶೇ.2.5 ಹಾಗೂ ಪುರುಷರಲ್ಲಿ ಶೇ.1) ಹಾಗೂ ಪಿತ್ತಕೋಶದ ಕ್ಯಾನ್ಸರ್ (ಮಹಿಳೆಯರಲ್ಲಿ ಶೇ.3.7 ಹಾಗೂ ಶೇ.2.2) ಹೊರತುಪಡಿಸಿ ನಿರ್ದಿಷ್ಟ ಅಂಗಕ್ಕೆ ತಗುಲುವ ಕ್ಯಾನ್ಸರ್‌ಗಳ ಪ್ರಮಾಣವು ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚಾಗಿ ಕಂಡುಬಂದಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ದೇಶದಲ್ಲಿ ಆಸ್ಪತ್ರೆ ಆಧಾರಿತ ಕ್ಯಾನ್ಸರ್ ಪ್ರಕರಣಗಳ ಆರಂಭಿಕ ವಿಶ್ಲೇಷಣೆಯ ಪ್ರಕಾರ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಕ್ಯಾನ್ಸರ್‌ಗೆ ತುತ್ತಾಗಿರುವುದು ಗೋಚರಿಸುತ್ತದೆ.

ತಂಬಾಕು ಬಳಕೆಗೆ ಸಂಬಂಧಿಸಿದ ಕ್ಯಾನ್ಸರ್ ಪುರುಷರಲ್ಲಿ ಶೇ.48.7 ರಷ್ಟಿದ್ದರೆ, ಬಾಲ್ಯದ ಕ್ಯಾನ್ಸರ್ (0-14) ಶೇ.7.9ರಷ್ಟಿದೆ. ಐಸಿಎಂಆರ್ ವರದಿಯು ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟ್ರಿ ಪ್ರೋಗ್ರಾಂನಲ್ಲಿ ಒಟ್ಟು 96 ಆಸ್ಪತ್ರೆಗಳ ದಾಖಲೆಗಳನ್ನು ಪಡೆಯಲಾಗಿತ್ತು. ಅದರ ಆಧಾರದ ಮೇಲೆ ಈ ಮಾಹಿತಿ ಲಭ್ಯವಾಗಿದೆ. ಈ ವರದಿಯು 2012 ರಿಂದ 2019ರವರೆಗೆ ನೋಂದಾಯಿಸಲ್ಪಟ್ಟ 610084 ಕ್ಯಾನ್ಸರ್ ಪ್ರಕರಣಗಳ ದಾಖಲೆಗಳನ್ನು ಒಳಗೊಂಡಿದೆ.

ಬಹುತೇಕ ಕ್ಯಾನ್ಸರ್ ಪ್ರಕರಣಗಳಲ್ಲಿ ಕಿಮೋಥೆರಪಿ ಸಾಮಾನ್ಯವಾಗಿ ಬಳಕೆಯಾಗುವ ಚಿಕಿತ್ಸಾ ವಿಧಾನವಾಗಿದೆ ಮತ್ತು ರೋಗ ಪತ್ತೆಯಾದ 8 ರಿಂದ 30 ದಿನಗಳೊಳಗೆ ರೋಗಿಗಳಿಗೆ ಚಿಕಿತ್ಸೆ ಆರಂಭಿಸಲಾಗುತ್ತದೆ.

ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್ ವಿಧಗಳು:
ಜನನಾಂಗ ಕ್ಯಾನ್ಸರ್ ಪುರುಷರಲ್ಲಿ ಕಂಡುಬರುವ ಎರಡನೆಯ ಅತಿದೊಡ್ಡ ವಿಧ ಈ ಕ್ಯಾನ್ಸರ್ ಆಗಿದೆ. ಭಾರತದಲ್ಲಿ 2 ಮಿಲಿಯನ್ ಪುರುಷರು ಜನನಾಂಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಈ ಕ್ಯಾನ್ಸರ್ ಕಂಡುಬರುತ್ತದೆ ಎಂಬುದು ಸಾಬೀತಾಗಿದೆ. ಮುಂಚೆಯೇ ಗಮನಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡಲ್ಲಿ ಬದುಕುಳಿಯಲು ಸಾಧ್ಯ.

ಶ್ವಾಸಕೋಶದ ಕ್ಯಾನ್ಸರ್ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ಒಂದು ಕ್ಯಾನ್ಸರ್ ವಿಧ ಶ್ವಾಸಕೋಶದ ಕ್ಯಾನ್ಸರ್ ಆಗಿದೆ. ಅರ್ಧ ಮಿಲಿಯನ್ ಪುರುಷರ ಮೇಲೆ ಈ ಕ್ಯಾನ್ಸರ್ ತನ್ನ ಪ್ರಭಾವ ಬೀರಿದೆ. ಇದಕ್ಕೆ ಮುಖ್ಯ ಕಾರಣ ಧೂಮಪಾನವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಪ್ರಾಣಾಂತಿಕ ಕ್ಯಾನ್ಸರ್ ಕೂಡ ಹೌದು.

ನೀವು ನಂಬಿಕೊಂಡಂತೆ ಸ್ತನಗಳು ಜೋತು ಬೀಳುವುದು ಈ ಕಾರಣಗಳಿಗೆ ಅಲ್ಲವೇ ಅಲ್ಲ..ನೀವು ನಂಬಿಕೊಂಡಂತೆ ಸ್ತನಗಳು ಜೋತು ಬೀಳುವುದು ಈ ಕಾರಣಗಳಿಗೆ ಅಲ್ಲವೇ ಅಲ್ಲ..

ಚರ್ಮ ಕ್ಯಾನ್ಸರ್ ಪುರುಷರಲ್ಲಿ ಕಂಡುಬರುವ ಈ ಕ್ಯಾನ್ಸರ್ ವಿಧದ ಬಗೆಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮಹಿಳೆಯರಲ್ಲಿ ಈ ಬಗೆಯ ಕ್ಯಾನ್ಸರ್ ಹೆಚ್ಚು ಕಂಡುಬರುತ್ತದೆಂದೇ ಹೆಚ್ಚಿನವರು ಆಲೋಚಿಸುತ್ತಾರೆ. ಆದರೆ ವರದಿಗಳ ಪ್ರಕಾರ ಈ ಕ್ಯಾನ್ಸರ್‌ಗೆ ಹೆಚ್ಚಾಗಿ ಬಲಿಯಾಗುವವರು ಪುರುಷರು ಎಂದಾಗಿದೆ. ಚರ್ಮ ಕ್ಯಾನ್ಸರ್ ಮೊದಲೇ ಅರಿವಿಗೆ ಬಂದಲ್ಲಿ ಅದರ ಉಪಶಮನ ಸಾಧ್ಯ ಎಂಬುದು ಇದರ ಧನಾತ್ಮಕ ಅಂಶವಾಗಿದೆ.

ದೊಡ್ಡ ಕರುಳಿನ ಕ್ಯಾನ್ಸರ್: 50 ವರ್ಷದೊಳಗಿನ ಪುರುಷರಲ್ಲಿ ಈ ಕ್ಯಾನ್ಸರ್ ಕಂಡುಬರುತ್ತದೆ. ಮಲವಿಸರ್ಜನೆ ವೇಳೆ ಅತಿಯಾದ ರಕ್ತಸ್ರಾವ ಕರುಳಿನ ಕ್ಯಾನ್ಸರ್‌ನ ಮೊದಲ ಲಕ್ಷಣವಾಗಿದೆ.

ಸಣ್ಣ ಕರುಳಿನ ಕ್ಯಾನ್ಸರ್: ಜಗತ್ತಿನಾದ್ಯಂತ ಪ್ರತೀ ವರ್ಷ 1,300 ಕ್ಕಿಂತಲೂ ಅಧಿಕ ಸಣ್ಣ ಕರುಳಿನ ಕ್ಯಾನ್ಸರ್ ರೋಗಿಗಳು ಕಂಡುಬರುತ್ತಿದ್ದಾರೆ. ಅತಿಯಾದ ಮದ್ಯಪಾನ ಈ ಕ್ಯಾನ್ಸರ್‌ ಉಗಮಕ್ಕೆ ಕಾರಣವಾಗಿದೆ. ಮೂತ್ರಕೋಶದ ಕ್ಯಾನ್ಸರ್ ಪುರುಷರಲ್ಲಿ ಆಗಾಗ್ಗೆ ಮೂತ್ರವಿಸರ್ಜನೆ ಹಾಗೂ ಶ್ರೋಣಿ ಪ್ರದೇಶದಲ್ಲಿ ನಿರಂತರ ನೋವು ಮೂತ್ರಕೋಶದ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ.

ಮೆದೋಜೀರಕ ಗ್ರಂಥಿಯ ಕ್ಯಾನ್ಸರ್ ಸಕ್ಕರೆ ಕಾಯಿಲೆಯಿಂದ ಬಳಲುವ ಪುರುಷರು ಈ ಕ್ಯಾನ್ಸರ್‌ನಿಂದ ಬಳಲುತ್ತಾರೆ. ಮೊದೋಜೀರಕ ಗ್ರಂಥಿಯನ್ನೇ ತೆಗೆದುಹಾಕುವಂತಹ ಸ್ಥಿತಿಯ ಕೊನೆಯ ಹಂತದಲ್ಲಿ ಈ ಕ್ಯಾನ್ಸರ್ ತನ್ನ ಇರುವಿಕೆಯನ್ನು ತೋರಿಸಿಕೊಡುತ್ತದೆ ಎಂಬುದು ಈ ಕ್ಯಾನ್ಸರ್‌ನ ಋಣಾತ್ಮಕ ಅಂಶವಾಗಿದೆ.

ಶಿಶ್ನ ಕ್ಯಾನ್ಸರ್: ಪುರುಷರಲ್ಲಿ ಅಪರೂಪವಾಗಿ ಕಂಡುಬರುವ ಕ್ಯಾನ್ಸರ್ ಇದಾಗಿದೆ. ಸುನ್ನತಿ, ಎಚ್‌ಪಿವಿ (ಮಾನವ ವೈರಸ್) ಹಾಗೂ ಧೂಮಪಾನದ ಕಾರಣದಿಂದ ಈ ಕ್ಯಾನ್ಸರ್ ಉಂಟಾಗುತ್ತದೆ.

English summary
Cancer is on the rise with a 21 per cent increase recorded in the number of cases between 2019 and 2020. The majority of cases affected the age group of 45-64. The cases rose from 11.5 lakh in 2019 to 13.9 lakh in 2020, according to the national cancer registry data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X