ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವನ್ನು ವಶಕ್ಕೆ ಪಡೆಯುವುದು ಪ್ರವಾದಿಗಳ ಕನಸು: ಲಷ್ಕರ್ ಇ ತೈಬಾ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 24: ಪ್ರವಾದಿ ಮಹಮದ್ ಗಾಗಿ ಪವಿತ್ರ ಯುದ್ಧ ಮಾಡಬೇಕಿದೆ ಎಂದು ಲಷ್ಕರ್ ಇ ತೈಬಾ ಭಾನುವಾರ ಹೇಳಿದೆ. ಉಗ್ರ ಸಂಘಟನೆಯ ಪ್ರಕಾರ, ಈ ಪವಿತ್ರ ಯುದ್ಧದಲ್ಲಿ ಭಾರತವನ್ನು ವಶಕ್ಕೆ ಪಡೆಯುವುದು ಪ್ರವಾದಿಗಳ ಕನಸು.

ಅಮರನಾಥ ಯಾತ್ರೆ ದಾಳಿಯ ಸಂಚು ರೂಪಿಸಿದ್ದು ಪಾಕ್ ನ ಲಷ್ಕರ್ ತೈಬಾಅಮರನಾಥ ಯಾತ್ರೆ ದಾಳಿಯ ಸಂಚು ರೂಪಿಸಿದ್ದು ಪಾಕ್ ನ ಲಷ್ಕರ್ ತೈಬಾ

ಪಶ್ಚಿಮದಿಂದ ಹೊರಟ ಸೈನ್ಯವು ಇಸ್ಲಾಮ್ ಗಾಗಿ ಭಾರತವನ್ನು ವಶಕ್ಕೆ ಪಡೆಯಬೇಕು ಎಂದು ಪ್ರವಾದಿ ಹೇಳಿದ್ದರು. -ಇವು ಭಾನುವಾರ ಇಸ್ಲಾಮಾಬಾದ್ ನಲ್ಲಿ ನಡೆದ ಲಷ್ಕರ್ ಇ ತೈಬಾ ಕಮ್ಯಾಂಡರ್ ಗಳ ಸಮಾವೇಶದಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು.

Prophet said army should seize India for Islam says Lashkar-e-Taiba

ಈ ಸಮಾವೇಶದಲ್ಲಿ ಪವಿತ್ರ ಯುದ್ಧದ ಬಗ್ಗೆ ಮಾತನಾಡುತ್ತಾ, ಮೊದಲ ಪ್ರಾಶಸ್ತ್ಯ ಕಾಶ್ಮೀರ ವಶಪಡಿಸಿಕೊಳ್ಳುವುದಕ್ಕೆ. ಇದು ಸಾಧ್ಯವಾದರೆ ಭಾರತದ ನಕ್ಷೆಯೇ ಬದಲಾಗುತ್ತದೆ ಎಂದು ಚರ್ಚೆ ನಡೆದಿದೆ.

ಪನಾಮ ಪೇಪರ್ಸ್ ಹಗರಣದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಪದಚ್ಯುತಿ ಸಾಧ್ಯತೆಯಿದ್ದು, ನವಾಜ್ ಷರೀಫ್ ಸೋದರ ಪ್ರಧಾನಿ ಆಗುವ ಸೂಚನೆ ಸಿಕ್ಕಿದೆ. ಆಗ ಸೈನ್ಯದ ಹಿಡಿತದಲ್ಲಿ ಪಾಕಿಸ್ತಾನ ಇರುತ್ತದೆ ಎಂಬುದು ಲಷ್ಕರ್ ಇ ತೈಬಾದ ನಿರೀಕ್ಷೆ.

26/11 ಮಾದರಿ ಉಗ್ರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಕಟ್ಟೆಚ್ಚರ!26/11 ಮಾದರಿ ಉಗ್ರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಕಟ್ಟೆಚ್ಚರ!

ಕಾಶ್ಮೀರದ ವಿಚಾರವಾಗಿ ನವಾಜ್ ಷರೀಫ್ ನಡೆದುಕೊಳ್ಳುತ್ತಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಲಷ್ಕರ್ ಇ ತೈಬಾ, ಈ ವಿವಾದವನ್ನು ಸೈನ್ಯವು ಚೆನ್ನಾಗಿ ನಿಭಾಯಿಸುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದೆ. ಕಾಶ್ಮೀರವನ್ನು ಉಳಿಸಿಕೊಳ್ಳಲು ಸೇನೆ ಮಧ್ಯಪ್ರವೇಶಿಸಬೇಕು ಎಂದು ಸಂಘಟನೆ ಹೇಳಿದೆ.

ತಮ್ಮ ಸಂಘಟನೆಯ ನಾಯಕ ಹಫೀಜ್ ಸಯೀದ್ ನ ಗೃಹಬಂಧನದಿಂದ ತಕ್ಷಣವೇ ಬಿಡುಗಡೆ ಮಾಡುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

ಪಾಕಿಸ್ತಾನದ ಉದಯ ಆಗುವ ಮುಂಚೆಯೇ ಕಾಶ್ಮೀರಿಗಳು ಹಿಂದೂಗಳ ವಿರುದ್ಧ ಹೋರಾಡುತ್ತಿದ್ದರು. ಇಸ್ಲಾಮ್ ಮತ್ತು ಕಾಶ್ಮೀರ ಹಾಗೂ ಇಸ್ಲಾಮ್ ಮತ್ತು ಪಾಕಿಸ್ತಾನ ಬೇರೆಬೇರೆಯಲ್ಲ ಎಂದು ಕಾಶ್ಮೀರ ವಿವಾದದ ವಿಚಾರವಾಗಿ ಸಂಘಟನೆ ಹೇಳಿದೆ.

English summary
The Lashkar-e-Taiba has attributed Ghazwa-e-Hind to the Prophet. Ghazwa-e-Hind or holy war to capture India according of the Lashkar-e-Tayiba was the dream of the prophet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X