ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪುರ್‌ಗೆ ಸಮನ್ಸ್ ಹಸ್ತಾಂತರಿಸಲು ದೆಹಲಿ ತಲುಪಿದ ಮುಂಬೈ ಪೊಲೀಸರು

|
Google Oneindia Kannada News

ಮಹಮ್ಮದ್ ಪ್ರವಾದಿ ಅವರ ವಿವಾದಾತ್ಮಕ ಹೇಳಿಕೆಗಳ ಮೇಲೆ ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರನ್ನು ಕರೆಸಲು ಮುಂಬೈನ ಪೈಡೋನಿ ಪೊಲೀಸರು ಗುರುವಾರ ದೆಹಲಿ ತಲುಪಿದ್ದಾರೆ. ನೂಪುರ್ ಶರ್ಮಾ ಅವರ ಹೇಳಿಕೆಯನ್ನು ದಾಖಲಿಸಲು ಜೂನ್ 25 ರಂದು ಬೆಳಿಗ್ಗೆ 11 ಗಂಟೆಗೆ ಪಿಡೋನಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಮೂಲಗಳ ಪ್ರಕಾರ, ಈ ಹಿಂದೆ ನೂಪುರ್ ಶರ್ಮಾ ಅವರಿಗೆ ಇಮೇಲ್‌ನಲ್ಲಿ ಸಮನ್ಸ್ ನೀಡಲಾಗಿತ್ತು. ಇದೀಗ ಆಕೆಗೆ ಅದರ ಸಮನ್ಸ ಪ್ರತಿಯನ್ನು ನೀಡಲು ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ರಾಝಾ ಅಕಾಡೆಮಿಯ ದೂರಿನ ಆಧಾರದ ಮೇಲೆ ಇದೀಗ ಅಮಾನತುಗೊಂಡಿರುವ ಮಾಜಿ ಬಿಜೆಪಿ ವಕ್ತಾರರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮೇ ಅಂತ್ಯದ ವೇಳೆಗೆ ಆಗ ಆಡಳಿತಾರೂಢ ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮಹಮ್ಮದ್ ಕುರಿತು ಕಾಮೆಂಟ್ ಮಾಡಿದ್ದರು. ಇದು ಜಾಗತಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಚರ್ಚೆಯ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಕತಾರ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಕನಿಷ್ಠ 14 ರಾಷ್ಟ್ರಗಳು ಕಾಮೆಂಟ್‌ಗಳ ಕುರಿತು ಭಾರತವನ್ನು ದೂಷಿಸಿದವು.

ನೂಪುರ್ ಅಮಾನತು

ನೂಪುರ್ ಅಮಾನತು

ಹಾನಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಬಿಜೆಪಿಯು ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತು. ಜಿಂದಾಲ್ ಅವರು ಇದೇ ರೀತಿಯ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಇವರನ್ನೂ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ಬಳಿಕ ಅವರು ಇದು ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಇದಾದ ಬಳಿಕ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವ ತನ್ನ ಪ್ರತಿನಿಧಿಗಳಿಗೆ ಬಿಜೆಪಿ ಹೊಸ ಮಾರ್ಗಸೂಚಿಗಳನ್ನು ರೂಪಿಸಿತು. ಅಧಿಕೃತ ವಕ್ತಾರರಿಗೆ ಮಾತ್ರ ಈಗ ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದಲ್ಲದೆ, ವಕ್ತಾರರು ಧಾರ್ಮಿಕ ಚಿಹ್ನೆಗಳ ಬಗ್ಗೆ ಮಾತನಾಡದಂತೆ ಕೇಳಿಕೊಂಡಿದ್ದಾರೆ.

ಹೋರಾಟದಲ್ಲಿ ಹಿಂಸಾಚಾರ

ಹೋರಾಟದಲ್ಲಿ ಹಿಂಸಾಚಾರ

ಈ ಹಿನ್ನೆಲೆಯಲ್ಲಿ ಕಳೆದ ವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ನೂಪುರ್ ಶರ್ಮಾ ಹೇಳಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗಲಭೆ ನಡೆದಿತ್ತು. ಅವರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರನ್ನು ಬಂಧಿಸಲಾಗಿದೆ. ಸಾವಿರಾರು ಮಂದಿಯನ್ನು ವಿಚಾರಣೆಗೊಳಪಡಿಸಲಾಯಿತು. ಗಲಭೆಕೋರರ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.

ಪ್ರವಾದಿಯನ್ನು ನಿಂದಿಸಿರುವ ನೂಪುರ್ ಶರ್ಮಾ ಅವರ ಬಂಧನಕ್ಕೆ ಒತ್ತಾಯಿಸಿ ದೇಶಾದ್ಯಂತ ಇಸ್ಲಾಂ ಧರ್ಮೀಯರು ಹೋರಾಟಕ್ಕೆ ಇಳಿದಿದ್ದಾರೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಕೆಲವೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು 13 ಪ್ರಕರಣಗಳನ್ನು ದಾಖಲಿಸಿದ್ದು, ಉತ್ತರ ಪ್ರದೇಶವೊಂದರಲ್ಲೇ 8 ಜಿಲ್ಲೆಗಳಲ್ಲಿ 333 ಜನರನ್ನು ಬಂಧಿಸಿದ್ದಾರೆ.

ನ್ಯಾಯಾಧೀಶ ಗೋವಿಂದ ಮಾಥೂರ್

ನ್ಯಾಯಾಧೀಶ ಗೋವಿಂದ ಮಾಥೂರ್

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ರಿತಿಯುಂಗ್ಜಯ್ ಕುಮಾರ್ ಅವರು ಬುಲ್ಡೋಜರ್‌ಗಳಿಂದ ಮನೆಗಳನ್ನು ಕೆಡವುತ್ತಿರುವ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರತಿ ಶುಕ್ರವಾರ ಮುಂದಿನ ಶನಿವಾರ ಬರಲಿದೆ ಎಂದು ಎಚ್ಚರಿಸಿದ್ದಾರೆ. ಶುಕ್ರವಾರ ಅಲಹಾಬಾದ್‌ನಲ್ಲಿ ಪ್ರತಿಭಟನಾಕಾರರನ್ನು ಟ್ರಕ್ ಮೂಲಕ ಪೊಲೀಸರು ಬಂಧಿಸಿದರು.

ಅಲಹಾಬಾದ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್, "ಸಾಮಾಜಿಕ ಕಾರ್ಯಕರ್ತ ಜಾವೇದ್ ಅಹ್ಮದ್ ಅವರ ಮನೆ ಧ್ವಂಸವನ್ನು ಸಮರ್ಥಿಸಲು ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ಏನೇ ಹೇಳಿದರೂ ಅದು ಕಾನೂನುಬಾಹಿರವಾಗಿದೆ, ಮನೆಗಳನ್ನು ಕೆಡವುವುದು ಶಿಕ್ಷೆಯ ಪ್ರಕ್ರಿಯೆ ಎಂದು ಭಾರತದ ಕಾನೂನು ಹೇಳುವುದಿಲ್ಲ'' ಎಂದಿದ್ದಾರೆ.

ದೇಶದ ಆತ್ಮಸಾಕ್ಷಿ

ದೇಶದ ಆತ್ಮಸಾಕ್ಷಿ

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಕೆ.ಗಂಗೂಲಿ, ಸುದರ್ಶನ್ ರೆಡ್ಡಿ, ಗೋಪಾಲಗೌಡ, ಚೆನ್ನೈ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ.ಚಂದ್ರು ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ 12 ಹಿರಿಯ ನ್ಯಾಯಮೂರ್ತಿಗಳು ಉತ್ತರ ಪ್ರದೇಶ ಸರ್ಕಾರದ ಕ್ರಮದ ವಿರುದ್ಧ ತಕ್ಷಣವೇ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು.

ಅದರಲ್ಲಿ ಉತ್ತರ ಪ್ರದೇಶ ಸರ್ಕಾರದ ಈ ಕ್ರಮ ಪ್ರಜಾಪ್ರಭುತ್ವವನ್ನು ಅಣಕಿಸುವ ಕ್ರಮ ಎಂದು ಟೀಕಿಸಿದ್ದಾರೆ. ಇಸ್ಲಾಮಿಸ್ಟ್‌ಗಳನ್ನು ಬಂಧಿಸಿ ಕ್ರೂರವಾಗಿ ದಾಳಿ ಮಾಡುತ್ತಿರುವುದು ರಾಷ್ಟ್ರದ ಆತ್ಮಸಾಕ್ಷಿಯನ್ನು ಅಲ್ಲಾಡಿಸುತ್ತದೆ. ಸುಪ್ರೀಂಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

Recommended Video

Bhagwanth Khuba: ಸಚಿವ ಭಗವಂತ ಖೂಬಾ ಸಂಭಾಷಣೆಯ ಆಡಿಯೋ ವೈರಲ್! | *Politics | OneIndia Kannada

English summary
Mumbai's Pydhonie police on Thursday reached Delhi to summon now-suspended BJP leader Nupur Sharma over her controversial remarks on Prophet Muhammad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X