ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿಯಿಂದ 415 ಕೋಟಿ ಮೌಲ್ಯದ 2 ಬಿಲ್ಡರ್‌ಗಳ ಆಸ್ತಿ ಜಪ್ತಿ!

|
Google Oneindia Kannada News

ನವದೆಹಲಿ, ಆಗಸ್ಟ್‌.3: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತದ ಅತಿದೊಡ್ಡ ಯೆಸ್‌ ಬ್ಯಾಂಕ್ ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಬಿಲ್ಡರ್‌ಗಳಿಂದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ಯೆಸ್ ಬ್ಯಾಂಕ್- ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಒಟ್ಟು 415 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿದೆ. ಅದರಲ್ಲಿ ಒಟ್ಟು 251 ಕೋಟಿ ಆಸ್ತಿ ಸಂಜಯ್ ಛಾಬ್ರಿಯಾ ಮತ್ತು 164 ಕೋಟಿ ಅವಿನಾಶ್ ಭೋಸಲೆ ಅವರದ್ದಾಗಿದೆ.

ಬಿಬಿಎಂಪಿ ಮಾಜಿ ಮಹಿಳಾ ಕಾರ್ಪೋರೇಟರ್‌ಗೆ ಸೇರಿದ 3.35 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಬಿಬಿಎಂಪಿ ಮಾಜಿ ಮಹಿಳಾ ಕಾರ್ಪೋರೇಟರ್‌ಗೆ ಸೇರಿದ 3.35 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ಬರೋಬ್ಬರಿ 34,000 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದ ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ (ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ಪ್ರಕರಣದಲ್ಲಿ ರೇಡಿಯಸ್ ಡೆವಲಪರ್ಸ್‌ನ ಸಂಜಯ್ ಛಾಬ್ರಿಯಾ ಮತ್ತು ಎಬಿಐಎಲ್ ಇನ್‌ಫ್ರಾಸ್ಟ್ರಕ್ಚರ್‌ನ ಅವಿನಾಶ್ ಭೋಸಲೆ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

ಬುಧವಾರ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ 116.5 ಕೋಟಿ ಮೌಲ್ಯದ ಜಮೀನು, ಬೆಂಗಳೂರಿನಲ್ಲಿರುವ 115 ಕೋಟಿ ಮೌಲ್ಯದ ಜಮೀನು, ಪಾರ್ಸೆಲ್‌ನಲ್ಲಿರುವ ಛಾಬ್ರಿಯಾ ಕಂಪನಿಯ 25% ಈಕ್ವಿಟಿ ಷೇರುಗಳು, ₹ 3 ಕೋಟಿ ಮೌಲ್ಯದ ಸಾಂತಾಕ್ರೂಜ್‌ನಲ್ಲಿರುವ ಮತ್ತೊಂದು ಫ್ಲಾಟ್, ಛಾಬ್ರಿಯಾ ಅವರಿಗೆ ಸೇರಿದ ಹೋಟೆಲ್‌ನ ಲಾಭದ ಹಣ, ದೆಹಲಿ ವಿಮಾನ ನಿಲ್ದಾಣದಲ್ಲಿ 13.67 ಕೋಟಿ ಮೌಲ್ಯದ ಛಾಬ್ರಿಯಾ ಮತ್ತು 3.10 ಕೋಟಿ ಮೌಲ್ಯದ ಸಂಜಯ್ ಛಾಬ್ರಿಯಾ ಅವರ ಮೂರು ಅತ್ಯಾಧುನಿಕ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದಲ್ಲದೆ, ಅವಿನಾಶ್ ಭೋಸಲೆ ಅವರ 102.8 ಕೋಟಿ ಮೌಲ್ಯದ ಮುಂಬೈನ ಡ್ಯೂಪ್ಲೆಕ್ಸ್ ಫ್ಲಾಟ್ ರೂಪದ ಆಸ್ತಿ, ಪುಣೆಯಲ್ಲಿ 14.65 ಕೋಟಿ ಮೌಲ್ಯದ ಜಮೀನು, ಪುಣೆಯಲ್ಲಿ 29.24 ಕೋಟಿ ಮೌಲ್ಯದ ಮತ್ತೊಂದು ಜಮೀನು, 15.52 ಕೋಟಿ ಮೌಲ್ಯದ ನಾಗ್ಪುರದ ಜಮೀನು ಮತ್ತು ನಾಗ್ಪುರದಲ್ಲಿರುವ 1.45 ಕೋಟಿ ಮೌಲ್ಯದ ಮತ್ತೊಂದು ಭಾಗವನ್ನು ಲಗತ್ತಿಸಲಾಗಿದೆ ಎಂದು ಇಡಿ ಹೇಳಿಕೊಂಡಿದೆ.

ಇವರಿಬ್ಬರ ವಿರುದ್ಧ 2002ರ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಇಡಿ ಎರಡು ತಾತ್ಕಾಲಿಕ ಲಗತ್ತು ಆದೇಶಗಳನ್ನು ಹೊರಡಿಸಿದೆ. ಈ ಇತ್ತೀಚಿನ ಜಪ್ತಿ ಮಾಡಲಾದ ಆಸ್ತಿಯಿಂದ ಒಟ್ಟು 1,827 ಕೋಟಿ ವಶಪಡಿಸಿಕೊಂಡ ಆಸ್ತಿ ಏರಿಕೆಯಾಗಿದೆ ಎಂದು ಜಾರಿ ಸಂಸ್ಥೆ ತಿಳಿಸಿದೆ.

1988 ರಲ್ಲಿ ಎಫ್‌ಐಆರ್ ಸಲ್ಲಿಕೆ

1988 ರಲ್ಲಿ ಎಫ್‌ಐಆರ್ ಸಲ್ಲಿಕೆ

ಡಿಎಚ್‌ಎಫ್‌ಎಲ್‌ಗೆ ಹಣಕಾಸಿನ ನೆರವು ನೀಡಲು ರಾಣಾ ಕಪೂರ್, ಕಪಿಲ್ ವಾಧವನ್ ಮತ್ತು ಇತರರೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 1988 ರಲ್ಲಿ ಎಫ್‌ಐಆರ್ ಸಲ್ಲಿಸಲಾಗಿತ್ತು. ಈ ಎಫ್‌ಐಆರ್‌ ಆಧರಿಸಿ ಯೆಸ್ ಬ್ಯಾಂಕ್ ಸಹ-ಸಂಸ್ಥಾಪಕ ರಾಣಾ ಕಪೂರ್ ಮತ್ತು ಡಿಎಚ್‌ಎಫ್‌ಎಲ್ ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ಅವರನ್ನು ಇಡಿ ವಿಚಾರಣೆ ನಡೆಸುತ್ತಿದೆ.

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

ಡಿಎಚ್‌ಎಫ್‌ಎಲ್‌ನ ಬಾಂಡ್‌ಗಳಲ್ಲಿ 283 ಕೋಟಿ ಹೂಡಿಕೆ

ಡಿಎಚ್‌ಎಫ್‌ಎಲ್‌ನ ಬಾಂಡ್‌ಗಳಲ್ಲಿ 283 ಕೋಟಿ ಹೂಡಿಕೆ

ಡಿಎಚ್‌ಎಫ್‌ಎಲ್‌ನ ಅಲ್ಪಾವಧಿಯ ಪರಿವರ್ತಿಸಲಾಗದ ಡಿಬೆಂಚರ್‌ಗಳಲ್ಲಿ 3,700 ಕೋಟಿ ಮತ್ತು ಡಿಎಚ್‌ಎಫ್‌ಎಲ್‌ನ ಬಾಂಡ್‌ಗಳಲ್ಲಿ 283 ಕೋಟಿ ಹೂಡಿಕೆ ಮಾಡಲು ಎಸ್‌ ಬ್ಯಾಂಕ್‌ ಮಾಜಿ ಸಹ ಸಂಸ್ಥಾಪಕ ರಾಣಾ ಕಪೂರ್ ಯೆಸ್ ಬ್ಯಾಂಕ್‌ನಿಂದ ಹಣ ಪಡೆದಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಅದೇ ಸಮಯದಲ್ಲಿ ಕಪಿಲ್ ವಾಧವನ್ ಡಿಎಚ್‌ಎಫ್‌ಎಲ್‌ ಮೂಲಕ ರಾಣಾ ಕಪೂರ್ ಅವರ ಕಂಪನಿಯೊಂದಕ್ಕೆ ಸಾಲದ ರೂಪದಲ್ಲಿ 600 ಕೋಟಿ ರೂ. ನೀಡಿದೆ ಎನ್ನಲಾಗಿದೆ.

2,317 ಕೋಟಿ ರೂಪಾಯಿಗಳ ಸಾಲ

2,317 ಕೋಟಿ ರೂಪಾಯಿಗಳ ಸಾಲ

ಯೆಸ್ ಬ್ಯಾಂಕ್ 3,983 ಕೋಟಿಯನ್ನು ಡಿಎಚ್‌ಎಫ್‌ಎಲ್‌ಗೆ ವರ್ಗಾಯಿಸಿದ ತಕ್ಷಣವೇ ಸಂಜಯ್ ಛಾಬ್ರಿಯಾ ಅವರ ಪ್ರಾಜೆಕ್ಟ್ ಅವೆನ್ಯೂ 54 ಅಭಿವೃದ್ಧಿಯ ಹೆಸರಿನಲ್ಲಿ 2,317 ಕೋಟಿ ರೂಪಾಯಿಗಳನ್ನು ಸಾಲವಾಗಿ ಮಂಜೂರು ಮಾಡಿದೆ ಎಂದು ಇಡಿ ತನ್ನ ತನಿಖೆಯಿಂದ ಬಹಿರಂಗಪಡಿಸಿದೆ. ಮುಂಬೈನಲ್ಲಿ ಸಂಜಯ್ ಛಾಬ್ರಿಯಾ ನಂತರ ಅದನ್ನು ಹೇಳಿದ್ದ ಉದ್ದೇಶಕ್ಕೆ ಬಳಸದೆ ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ಇಡಿ ಹೇಳಿದೆ.

ಡಿಎಚ್‌ಎಫ್‌ಎಲ್‌ನಿಂದ 71.82 ಕೋಟಿ ಹಣ ಪಡೆದಿದ್ದ ಸಂಜಯ್‌

ಡಿಎಚ್‌ಎಫ್‌ಎಲ್‌ನಿಂದ 71.82 ಕೋಟಿ ಹಣ ಪಡೆದಿದ್ದ ಸಂಜಯ್‌

ತನಿಖಾ ಸಂಸ್ಥೆಯು ಸಂಜಯ್ ಛಾಬ್ರಿಯಾ ಅವಿನಾಶ್ ಭೋಸ್ಲೆ ಅವರೊಂದಿಗೆ ಸಂಚು ಮಾಡಿದ್ದಾರೆ. ಅವರ ವಿವಿಧ ಕಂಪನಿಗಳಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಿದೆ. ಇದಲ್ಲದೆ, ಅವಿನಾಶ್ ಭೋಸಲೆ ಅವರು ಡಿಎಚ್‌ಎಫ್‌ಎಲ್‌ನ ಕಪಿಲ್ ವಾಧವನ್ ಅವರೊಂದಿಗೆ ಸಂವಾದ ನಡೆಸಿದ್ದರು. ಡಿಹೆಚ್‌ಎಫ್‌ಎಲ್ ಮತ್ತು ಇತರ ಸಂಸ್ಥೆಗಳಿಗೆ ಕೆಲವು ಸೇವೆಗಳನ್ನು ಒದಗಿಸುವ ನೆಪದಲ್ಲಿ ಸುಮಾರು 71.82 ಕೋಟಿ ರೂ.ಗಳನ್ನು ಡಿಎಚ್‌ಎಫ್‌ಎಲ್‌ನಿಂದ ಪಡೆದಿದ್ದರು. ಆದರೆ ಹೇಳಲಾದ ಸೇವೆಗಳನ್ನು ಎಂದಿಗೂ ಅವರು ಒದಗಿಸಲಾಗಿಲ್ಲ. ಬದಲಾಗಿ ಅವಿನಾಶ್ ಭೋಸಲೆ ಅವರು ತಮ್ಮ ಸ್ವಂತ ಬಳಕೆಗಾಗಿ ಹಣ ಬಳಸಿಕೊಂಡರು ಎಂದು ಇಡಿ ಹೇಳಿದೆ.

English summary
Enforcement Directorate officials recovered Rs 415 crore from two builders accused in India's largest Yes Bank DHFL fraud case. Valuable property confiscated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X