ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದ್ಯಾರಿದು ಬಿಜೆಪಿ ಮೈತ್ರಿಕೂಟದಲ್ಲಿ ಪಿಎಂ ಹುದ್ದೆಗೆ ಹೊಸ ಹೆಸರು ತೇಲಿಬಿಟ್ಟಿದ್ದು

|
Google Oneindia Kannada News

Recommended Video

Lok Sabha Elections 2019: ಪ್ರಧಾನಿ ಹುದ್ದೆಗೆ ಬಿಜೆಪಿ ಮೈತ್ರಿಕೂಟದಿಂದ ತೇಲಿಬಂತು ಅಚ್ಚರಿಯ ಹೆಸರುಗಳು

ಅಧಿಕಾರಕ್ಕಾಗಿ ರಾಜಕಾರಣಿಗಳು ಅದೆಷ್ಟು ಪೂರ್ವತಯಾರಿ ಮಾಡಿಕೊಳ್ಳುತ್ತಾರೆ.. ಇದೇ ಮುಂಜಾಗೃತಾ ಕ್ರಮವನ್ನು ಮಳೆಗಾಲವನ್ನು ಎದುರಿಸಲು ಮಾಡಿಕೊಂಡಿದ್ದರೆ ಸಾರ್ವಜನಿಕರಿಗೆ ಅದೆಷ್ಟೋ ಉಪಯೋಗವಾಗುತ್ತಿತ್ತು.

ಸಮೀಕ್ಷಾ ವರದಿಯನ್ನಾಧರಿಸಿ ಇಪ್ಪತ್ತೊಂದು ಪಕ್ಷಗಳು ಕೊನೆಯ ಹಂತದ ಚುನಾವಣೆ ಮುಗಿದ ಕೂಡಲೇ ರಾಷ್ಟ್ರಪತಿಯವರನ್ನು ಭೇಟಿಯಾಗಿ, ಅತಿದೊಡ್ಡ ಪಕ್ಷಕ್ಕೆ ಸರಕಾರ ರಚಿಸಲು ಆಹ್ವಾನ ನೀಡಬಾರದೆಂದು ಮನವಿ ಮಾಡಲು ಮುಂದಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುವ ಸಮೀಕ್ಷಾ ವರದಿಯೇ ಇದಕ್ಕೆ ಕಾರಣ.

ನರ್ಸರಿಯ ಇಂಗ್ಲಿಷ್ ಪದ್ಯ ಬಳಸಿ ಮೋದಿ ಸರಕಾರಕ್ಕೆ ಆರ್ ಜೆಡಿ ಟಾಂಗ್ನರ್ಸರಿಯ ಇಂಗ್ಲಿಷ್ ಪದ್ಯ ಬಳಸಿ ಮೋದಿ ಸರಕಾರಕ್ಕೆ ಆರ್ ಜೆಡಿ ಟಾಂಗ್

ವಿಪಕ್ಷಗಳ ಒಟ್ಟು 20-25 ನಾಯಕರಲ್ಲಿ ಕನಿಷ್ಠ ಐದರಿಂದ ಹತ್ತು ಮುಖಂಡರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿದೆ ಅಥವಾ ಅವರು ಆ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಎನ್ಡಿಎ ಮೈತ್ರಿಕೂಟದಲ್ಲಿ ಹಾಗಲ್ಲಾ..

ಮೈತ್ರಿ ಬಿಡಲು ಸಿದ್ಧರಾಗಿದ್ದರೇ ನಿತೀಶ್?: ಲಾಲು ಹೇಳಿದ ಸ್ಫೋಟಕ ಮಾಹಿತಿಮೈತ್ರಿ ಬಿಡಲು ಸಿದ್ಧರಾಗಿದ್ದರೇ ನಿತೀಶ್?: ಲಾಲು ಹೇಳಿದ ಸ್ಫೋಟಕ ಮಾಹಿತಿ

ಎಲ್ಲೋ ಒಮ್ಮೊಮ್ಮೆ ನಿತಿನ್ ಗಡ್ಕರಿಯವರ ಹೆಸರು ಕೇಳಿಬರುತ್ತಿದ್ದರೂ, ಅದನ್ನು ಅವರೇ ಸ್ಪಷ್ಟವಾಗಿ ನಿರಾಕರಿಸಿದ್ದರು. ಹಾಗಾಗಿ, ನರೇಂದ್ರ ಮೋದಿಯೇ ಇಲ್ಲಿ ಸರ್ವಸ್ವ ಎನ್ನುವಷ್ಟರಲ್ಲಿ, ಬಿಹಾರದಿಂದ ಹೊಸ ಕೂಗೊಂದು ಕೇಳಿ ಬಂದಿದೆ.

ನರೇಂದ್ರ ಮೋದಿಯ ಹೆಸರಿಗೆ ಇವರ ಯಾರ ತಕರಾರೂ ಇರಲಿಲ್ಲ

ನರೇಂದ್ರ ಮೋದಿಯ ಹೆಸರಿಗೆ ಇವರ ಯಾರ ತಕರಾರೂ ಇರಲಿಲ್ಲ

ಬಿಹಾರದಲ್ಲಿ ಬಿಜೆಪಿ, ನಿತೀಶ್ ಕುಮಾರ್ ಮತ್ತು ರಾಂ ವಿಲಾಸ್ ಪಾಸ್ವಾನ್ ಅವರ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಎರಡು ಪಕ್ಷಗಳು ಎಷ್ಟು ಸೀಟನ್ನು ಡಿಮಾಂಡ್ ಮಾಡಿದ್ದವೋ, ಅಷ್ಟನ್ನೂ ಅಮಿತ್ ಶಾ, ಏನೂ ಚೌಕಾಸಿ ಮಾಡದೇ ನೀಡಿದ್ದರು. ಜೊತೆಗೆ, ಪ್ರಧಾನಮಂತ್ರಿ ಹುದ್ದೆಗೆ ನರೇಂದ್ರ ಮೋದಿಯ ಹೆಸರಿಗೆ ಇವರ ಯಾರ ತಕರಾರೂ ಇರಲಿಲ್ಲ.

ಪ್ರಧಾನಮಂತ್ರಿ ಹುದ್ದೆಗೆ ಹೊಸ ಹೆಸರನ್ನು ತೇಲಿಬಿಟ್ಟಿದ್ದಾರೆ.

ಪ್ರಧಾನಮಂತ್ರಿ ಹುದ್ದೆಗೆ ಹೊಸ ಹೆಸರನ್ನು ತೇಲಿಬಿಟ್ಟಿದ್ದಾರೆ.

ಆದರೆ, ಎನ್ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಗುವ ಸಾಧ್ಯತೆ ಕಮ್ಮಿ ಎನ್ನುವ ಸಮೀಕ್ಷಾ ವರದಿಗಳ ನಂತರ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮುಖಂಡರೊಬ್ಬರು, ಪ್ರಧಾನಮಂತ್ರಿ ಹುದ್ದೆಗೆ ಹೊಸ ಹೆಸರನ್ನು ತೇಲಿಬಿಟ್ಟಿದ್ದಾರೆ. ಇವರು ಪ್ರಧಾನಿಯಾದರೆ, ಯಾರ ಅಪಸ್ವರವೂ ಇರುವುದಿಲ್ಲ ಎಂದಿದ್ದಾರೆ.

ಸಮೀಕ್ಷೆ: ಮೋದಿ- ನಿತೀಶ್ ಜೋಡಿಯ ಮೋಡಿ, ಬಿಹಾರದಲ್ಲಿ ಕೇಸರಿ ಅಲೆ ಸಮೀಕ್ಷೆ: ಮೋದಿ- ನಿತೀಶ್ ಜೋಡಿಯ ಮೋಡಿ, ಬಿಹಾರದಲ್ಲಿ ಕೇಸರಿ ಅಲೆ

ನಿತೀಶ್ ಕುಮಾರ್ ಸರ್ವಾನುಮತದ ಆಯ್ಕೆಯಾಗಲಿದೆ

ನಿತೀಶ್ ಕುಮಾರ್ ಸರ್ವಾನುಮತದ ಆಯ್ಕೆಯಾಗಲಿದೆ

ಜೆಡಿಯು ಶಾಸಕ ಗುಲಾಂ ರಸೂಲ್ ಮಾತನಾಡುತ್ತಾ, ಮೇ 23ರ ನಂತರ ಯಾರಿಗೂ ಸರಳ ಬಹುಮತ ಸಿಗುವಷ್ಟು ಸೀಟು ಬರುವುದಿಲ್ಲ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಅದು ಸರ್ವಾನುಮತದ ಆಯ್ಕೆಯಾಗಲಿದೆ ಎಂದು ಹೇಳಿರುವುದು ಈಗ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.

ಜನ ವೋಟ್ ಹಾಕುತ್ತಿರುವುದು ನಿತೀಶ್ ಕುಮಾರ ಅವರ ಅಭಿವೃದ್ದಿ ಕೆಲಸಕ್ಕೆ, ಮೋದಿಯ ಮುಖ ನೋಡಿಯಲ್ಲ

ಜನ ವೋಟ್ ಹಾಕುತ್ತಿರುವುದು ನಿತೀಶ್ ಕುಮಾರ ಅವರ ಅಭಿವೃದ್ದಿ ಕೆಲಸಕ್ಕೆ, ಮೋದಿಯ ಮುಖ ನೋಡಿಯಲ್ಲ

ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಜನ ವೋಟ್ ಹಾಕುತ್ತಿರುವುದು ನಿತೀಶ್ ಕುಮಾರ ಅವರ ಅಭಿವೃದ್ದಿ ಕೆಲಸಕ್ಕೆಯೇ ಹೊರತು ಮೋದಿಯವರ ಮುಖ ನೋಡಿಯಲ್ಲ. ಎನ್ಡಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಗದೇ ಹೋದಲ್ಲಿ, ಸಣ್ಣಪುಟ್ಟ ಪಕ್ಷಗಳ ಜೊತೆ ಹೊಂದಾಣಿಕೆ ಅಗತ್ಯ. ಇಂತಹ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರೆ ಸೂಕ್ತ ಪಿಎಂ ಅಭ್ಯರ್ಥಿಯಾಗಲಿದ್ದಾರೆಯೇ ಹೊರತು ಮೋದಿಯಲ್ಲ ಎಂದು ಗುಲಾಂ ರಸೂಲ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಬೆಟ್ಟಿಂಗ್ ಬಜಾರ್ ಭವಿಷ್ಯ: ಮ್ಯಾಜಿಕ್ ನಂಬರ್ ಎನ್ಡಿಎಗೂ ಮರೀಚಿಕೆ!ಬೆಟ್ಟಿಂಗ್ ಬಜಾರ್ ಭವಿಷ್ಯ: ಮ್ಯಾಜಿಕ್ ನಂಬರ್ ಎನ್ಡಿಎಗೂ ಮರೀಚಿಕೆ!

ರಾಜಕೀಯ ಪರಿಣತ ಮತ್ತು ಜೆಡಿಯು ಮುಖಂಡ ಪ್ರಶಾಂತ್ ಕಿಶೋರ್

ರಾಜಕೀಯ ಪರಿಣತ ಮತ್ತು ಜೆಡಿಯು ಮುಖಂಡ ಪ್ರಶಾಂತ್ ಕಿಶೋರ್

ಕೆಲವು ದಿನಗಳ ಹಿಂದೆ ರಾಜಕೀಯ ಪರಿಣತ ಮತ್ತು ಜೆಡಿಯು ಮುಖಂಡ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ಅವರ ಬೆಂಬಲದೊಂದಿಗೆ ಮೋದಿ ಮತ್ತೆ ಪ್ರಧಾನಿಯಾಗಿ ಲೋಕಸಭೆಗೆ ಪ್ರವೇಶಿಸಲಿದ್ದಾರೆಂದು ಹೇಳಿದ್ದರು. ತಮ್ಮ ಪಕ್ಷದ ಮುಖಂಡ ಗುಲಾಂ ರಸೂಲ್ ಹೇಳಿಕೆಗೆ ನಿತೀಶ್ ಕುಮಾರ್ ಸಹಮತ ವ್ಯಕ್ತ ಪಡಿಸಲಿಲ್ಲ.

English summary
No Clear Majority for NDA Post May 23, Project Bihar CM Nitish Kumar as PM Face to Form Govt, Says JD(U) Leader Gulam Rasool.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X