ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲಾಶ್ ಸತ್ಯಾರ್ಥಿ : ಮಾನವತೆಯ ಕೈಲಾಸ ಪರ್ವತ

By ರಾಘವೇಂದ್ರ ಅಡಿಗ
|
Google Oneindia Kannada News

ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ "ಬಚಪನ್ ಬಚಾವೋ" ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಭಾರತದ ಸಾಮಾನ್ಯ ಜನರಿಗಾಗಲೀ, ಭಾರತದ ಘನ ಸರ್ಕಾರಗಳಿಗಾಗಲೀ, ಸಾವಿರಾರು ಸಂಖ್ಯೆಯಲ್ಲಿರುವ ಸಂಘ ಸಂಸ್ಥೆಗಳಲ್ಲಿ ಯಾರೊಬ್ಬರಿಗೂ ಇವರ ಬಗೆಗೆ, ಇವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ಯಾವೊಂದು ವಿಚಾರವೂ ತಿಳಿದಿರಲಿಲ್ಲ!

ನಮ್ಮ ನಡುವೆಯೇ ಇದ್ದು ಸಾವಿರಾರು ಬಡ ಮಕ್ಕಳ ಉದ್ದಾರಕ್ಕಾಗಿ ಟೊಂಕಕಟ್ಟಿದ ಕೈಲಾಶ್ ರಂತಹವರನ್ನು ನಮ್ಮ ಸರ್ಕಾರಗಳು ಗುರುತಿಸದೇ ಹೋದುದು ತೀರಾ ಖೇದಕರ ಸಂಗತಿಯಲ್ಲವೆ? ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.

ಆ ಹುಡುಗನು ತಾನು ನಿತ್ಯವೂ ಶಾಲೆಗೆ ನಡೆದು ಹೋಗುತ್ತಿದ್ದಾಗ ತನ್ನದೇ ಓರಗೆಯ ಹುಡುಗನೋರ್ವನು ತನ್ನ ತಂದೆಯೊಡನೆ ಕುಳಿತು ಬೂಟು ರಿಪೇರಿ ಮಡುತ್ತಿದ್ದುದನ್ನು ಕಾಣುತ್ತಿದ್ದನು. ಅದಾಗೆಲ್ಲಾ ಈ ಹುಡುಗನ ಮನಸ್ಸಿನಲ್ಲಿ 'ನಾನು ಉತ್ಸಾಹದಿಂದಲೂ ಸಂತೋಷದಿಂದಲೂ ಶಾಲೆಗೆ ಹೋಗುತ್ತಿದ್ದರೆ ಆ ಹುಡುಗ ಮಾತ್ರ ತನ್ನ ತಂದೆಯೊಂದಿಗೆ ಕುಳಿತು ಬೂಟು ಹೊಲಿಯುತ್ತಿದ್ದಾನೆ, ಅದೇಕೆ ಹೀಗೆ?'ಎನ್ನುವ ಆಲೋಚನೆ ಹುಟ್ಟುತ್ತಿತ್ತು.

ಅದೊಮ್ಮೆ ಅದೇ ಪ್ರಶ್ನೆಯನ್ನು ತನ್ನ ಶಾಲಾ ಉಪಾದ್ಯಾಯರ ಬಳಿ ಕೇಳಲಾಗಿ " ಅವರ ಬಳಿ ಹಣವಿಲ್ಲ, ಅವರು ಬಡವರು. ವಿದ್ಯಾಭ್ಯಾಸ ಪಡೆದುಕೊಳ್ಳಲಿಕ್ಕೆ ಸಾಕಷ್ಟು ಧನಬಲವಿಲ್ಲದವರು." ಎನ್ನುವ ಉತ್ತರ ದೊರಕಿತು.

ಆ ಉತ್ತರದಿಂದ ತೃಪ್ತನಾಗದ ಆ ಬಾಲಕ ಮತ್ತೊಮ್ಮೆ ಬೂಟು ಹೊಲಿಯುತ್ತಿದ್ದ ಹುಡುಗನ ತಂದೆಯನ್ನೇ ನೇರವಾಗಿ ಪ್ರಶ್ನಿಸಿದ "ನೀವೇಕೆ ನಿಮ್ಮ ಮಗನನ್ನು ಶಾಲೆಗೆ ಸೇರಿಸಿಲ್ಲ, ಬೂಟು ಹೊಲಿಯಲು ಇರಿಸಿಕೊಂಡಿದ್ದೀರಿ?" ಅದಾಗ ಒಂದು ಕ್ಷಣ ಬಾಲಕನ ಮುಖವನ್ನೇ ದೃಷ್ಟಿಸಿ ನೋಡಿದ ಹುಡುಗನ ತಂದೆ "ನಾವು ಹುಟ್ಟಿದ್ದೇ ದುಡಿಯಲಿಕ್ಕಾಗಿ, ಶಾಲೆ ಕಲಿಯಲಿಕ್ಕಲ್ಲ." ಎಂದು ಬಿಟ್ಟರು.

Human rights activist Nobel Laureate Kailash satyarthi

ಆ ಬಡ ತಂದೆ ಅಂದು ಆಡಿದ ಆ ಮಾತು ಬಾಲಕನ ಎದೆಯಲ್ಲಿ ನಾಟಿ ಕುಳಿತಿತು. ಮುಂದೆ ತಾನು ಪಡೆದ ಉನ್ನತ ತಾಂತ್ರಿಕ ಶಿಕ್ಷಣವನ್ನೂ, ಅದರಿಂದ ಲಭಿಸಬಹುದಾಗಿದ್ದ ದೊಡ್ಡ ಸಂಬಳದ ವೃತ್ತಿಯನ್ನೂ ತೊರೆದು ದೇಶದಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಹಾಗೂ ಬಡ ಮಕ್ಕಳ ಶಿಕ್ಷಣ ಹಕ್ಕಿಗಾಗಿ ಹೋರಾಟ ನಡೆಸುವುದಕ್ಕೆ ಅವನನ್ನು ಪ್ರೇರೇಪಣೆಗೊಳಿಸಿತು. ತನ್ನ ಉದ್ದೇಶ ಸಾಧನೆಗಾಗಿ "ಬಚ್ ಪನ್ ಬಚಾವೋ" ಎನ್ನುವ ಆಂದೋಲನವನ್ನೇ ಹುಟ್ಟುಹಾಕಿ ದೇಶ ವಿದೆಶಗಳಾಲ್ಲಿ ಪ್ರಚುರಪಡಿಸಿದುದಲ್ಲದೆ ಬಾಲಕಾರ್ಮಿಕರು, ಹಾಗೂ ಶಿಕ್ಷಣ ಹಕ್ಕುಗಳ ಹೋರಾಟಗಾರನಾಗಿ ಬೆಳೆದು ಬಂದ ಆ ಬಾಲಕನೇ ಇಂದು ಭಾರತಕ್ಕೆ ಎರಡನೆ ನೋಬೆಲ್ ಶಾಂತಿ ಪ್ರಶಸ್ತಿ ತಂದುಕೊಟ್ತ ಕೈಲಾಶ್ ಸತ್ಯಾರ್ಥಿ!

ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ "ಬಚಪನ್ ಬಚಾವೋ" ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಇದಕ್ಕೆಂದೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಓರ್ವರು "ವಿಪರ್ಯಾಸವೆಂದರೆ, ಇತರೆ ಭಾರತೀಯರು ತಮ್ಮ ಸಾಧನೆಯನ್ನು ಗುರುತಿಸಲು ಕೈಲಾಶ್ ನೋಬೆಲ್ ಗೆಲ್ಲಬೇಕಾಯಿತು." ಎಂದು ಹೇಳಿರುವುದು.

ಅಮೇರಿಕಾ, ಜರ್ಮನಿ, ಸ್ಪೇನ್ ನಂತಹಾ ಪಾಶ್ಚಾತ್ಯ ದೇಶಗಳು ಸತ್ಯಾರ್ಥಿಯವರ ಸಾಮಾಜಿಕ ಕಾರ್ಯಗಳಿಗೆ ಮನ್ನಣೆ ಗೌರವಗಳನ್ನು ಸಾಲು ಸಾಲಾಗಿ ನೀಡಿರುವಾಗ ನಮ್ಮ ದೇಶದ ಯಾರೊಬ್ಬರಿಗೂ ಇವರ ಬಗೆಗೆ ಕನಿಷ್ಟ ತಿಳುವಳಿಕೆಯೂ ಇಲವಾದದ್ದು ನಿಜಕ್ಕೂ ತಲೆತಗ್ಗಿಸಬೇಕಾದ ಸಂಗತಿ.

ಇರಲಿ ಬಿಡಿ ಭಾರತಕ್ಕೆ 2 ನೇ ನೋಬೆಲ್ ಶಾಂತಿ ಪ್ರಶಸ್ತಿ (ಮೊದಲನೇ ನೋಬೆಲ್ ಶಾಂತಿ ಪುರಕಾರ ಭಾರತಕ್ಕೆ ಸಂದದ್ದು 1979 ರಲ್ಲಿ ಅಂದು ಭಾರತ ಪ್ರಜೆಯಾಗಿದ್ದ ಮದರ್ ತೆರೇಸಾರವರು ಆ ಗೌರವಕ್ಕೆ ಭಾಜನರಾಗಿದ್ದರು. ಅವರು ಭಾರತೀಯ ಪೌರತ್ವವನ್ನು ಹೊಂದಿದ್ದರೂ ಅವರ ಜನ್ಮಸ್ಥಳ ಅಲ್ಬೇನಿಯಾ ದೆಶವಾಗಿತ್ತು. ಹೀಗಾಗಿ ಭಾರತದಲ್ಲೇ ಜನಿಸಿ ನೋಬೆಲ್ ಶಾಂತಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪ್ರಥಮ ವ್ಯಕ್ತಿ ಶ್ರೀ ಕೈಲಾಶ್ ಸತ್ಯಾರ್ಥಿಯವರಾಗಿದ್ದಾರೆ.) ತಂದುಕೊಟ್ಟ ಶ್ರೀ ಸತ್ಯಾರ್ಥಿಗಳ ಬಗೆಗೆ ಈಗಲಾದರೂ ಕೆಲ ವಿಚಾರಗಳನ್ನು ತಿಳಿದುಕೊಳ್ಳೋಣ.

ಕೈಲಾಶ್ ಹುಟ್ಟಿದ್ದು ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ. ಜನವರಿ 11, 1954 ರಲ್ಲಿ ಜನಿಸಿದ ಕೈಲಾಶ್ ವಿದಿಶಾದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ, ಹಾಗೂ ಹೈ ವೋಲ್ಟೇಜ್ ಇಂಜಿನಿಯರಿಂಗ್ ನಲ್ಲಿ ಪಿಜಿ ಡಿಪ್ಲೋಮಾ. ಪೂರೈಸಿದ ಸತ್ಯಾರ್ಥಿಯವರು ಕೆಲ ಸಮಯಗಳ ಕಾಲ ಭೋಪಾಲ್ ನಲ್ಲಿ ಶಿಕ್ಷಕರಾಗಿ ವೃತ್ತಿ ಮಾಡಿಕೊಂಡಿದ್ದು ನಂತರ ಮಕ್ಕಳ ಮೇಲಿನ ಮಮಕಾರದಿಂದಾಗಿ ತಮ್ಮ 26 ನೇ ವರ್ಷ ವಯಸ್ಸಿನಲ್ಲಿ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಧುಮುಕಿದರು.

Kailash satyarthi

1983 ರಲ್ಲಿ ತಮ್ಮ ಮಹತ್ವಪೂರ್ಣ ಯೋಜನೆಯಾದ "ಬಚ್ ಪನ್ ಬಚಾವೋ" ಆಂದೋಲನವನ್ನು ಹುಟ್ಟು ಹಾಕಿದ ಸತ್ಯಾರ್ಥಿಯವರು ಇದುವರೆವಿಗೂ ಸರಿ ಸುಮಾರು 80 ಸಾವಿರದಷ್ಟು ಬಾಲಕರನ್ನು ಜೀತ ವಿಮುಕ್ತಗೊಳಿಸಿದ್ದಾರೆ. ತಾವು ತಮ್ಮ ಸಹಚರರ ನೆರವಿನೊಂದಿಗೆ ದೇಶದಲ್ಲಿನ ನೂರಾರು ಕಾರ್ಖಾನೆಗಳು, ಗೋದಾಮುಗಳ ಮೇಲೆ ಧಾಳಿ ನಡೆಸಿ ಅಲ್ಲಿದ್ದ ಸಾವಿರಾರು ಬಾಲಕ/ಬಾಲಕಿಯರನ್ನು ರಕ್ಶಿಸಿದ್ದಾರೆ. ಅವರೆಲ್ಲರೂ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತೆ ಮಾಡಿದ್ದಾರೆ.

ಹೀಗೆ ತಾವು ಬಾಲಕಾರ್ಮಿಕ ಪದ್ದತಿ, ಮಕ್ಕಳ ಹಕ್ಕುಗಳ ಪರವಾಗಿ ಹೋರಾಟ ನಡೆಸುವ ಸಮಯದಲ್ಲಿ ಪ್ರಾರಂಭದ ವರ್ಷಗಳಾಲ್ಲಿ ಕೈಲಾಶ್ ಸತ್ಯಾರ್ಥಿಯವರು ಸ್ವತಃ ಕಾರ್ಖಾನೆಗಳಿಗೆ ಧಾಳಿ ನಡೆಸಿ ಅಲ್ಲಿದ್ದ ಮಕ್ಕಳನ್ನು ರಕ್ಷಿಸಿದ್ದು ಇದೆ. ಅಂತಹಾ ಸಮಯದಲಿ ಅನೇಕ ವೇಳೆ ಬೃಹತ್ ಕೈಗಾರಿಕಾ ಮಾಲೀಕರಿಂದ ಜೀವಬೆದರಿಕೆಗಳನ್ನು ಎದುರಿಸಬೇಕಾಗುತ್ತಿತ್ತು. ಅಲ್ಲದೆ ಸಾಕಷ್ಟು ಬಾರಿ ಗೂಂಡಾಗಳನ್ನು ಬಿಟ್ಟು ಹೊಡೆಸಲಾಗುತ್ತಿತ್ತು.

ಕಾರ್ಖಾನೆ ಮಾಲೀಕರು, ಪೋಲೀಸರುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತಿತ್ತು. ಅದೊಮ್ಮೆ ಸರ್ಕಸ್ ಸಂಸ್ಥೆಯೊಂದರ ವಿರುದ್ದ ಕಾರ್ಯಾಚರಣೆಗಿಳಿದ ಸಮಯದಲ್ಲಿ ಸತ್ಯಾರ್ಥಿ ಹಾಗೂ ಅವರ ಇನ್ನೋರ್ವ ಸಹಚರರಿಗೆ ಸರ್ಕಸ್ ಸಂಸ್ಥೆಯ ಮಾಲೀಕರು ತೀವ್ರವಾಗಿ ಥಳಿಸಿ ಗಾಯಗೊಳಿಸಿದ್ದರು! ಇದುವರೆವಿಗೂ "ಬಚ್ ಪನ್ ಬಚಾವೋ" ಆಂದೋಲನದ ಇಬ್ಬರು ಕಾರ್ಯಕರ್ತರು ಹತ್ಯೆ ಮಾಡಲ್ಪಟ್ಟಿದ್ದಾರೆ. ಓರವ ಕಾರ್ಯಕರ್ತರು ಗುಂಡೇಟಿನಿಂದ ಸತ್ತಿದ್ದರೆ ಇನ್ನೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾಯಿಸಲಾಗಿದೆ! ಇಷ್ಟೆಲ್ಲಾ ಆದರೂ ಕೈಲಾಶ್ ಮಾತ್ರ ತಾವು ಇಟ್ಟ ಹೆಜ್ಜೆಯನ್ನು ಹಿಂದೆಗೆಯದೆ ನಿರಂತರ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ.

English summary
Kailash Satyarthi (born on January 11, 1954) is a human rights activist from India who has been at the forefront of the global movement to end child slavery and exploitative child labor since 1980 when he gave up a lucrative career as an Electrical Engineer for initiating crusade against Child Servitude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X