ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸಂಶೋಧನಾ ವಿಭಾಗದ ಹೊಣೆ ಕನ್ನಡಿಗ ರಾಜೀವ್ ಗೌಡ ಹೆಗಲಿಗೆ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 2: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಂಶೋಧನಾ ವಿಭಾಗವನ್ನು ತೆರೆದಿದ್ದು ಇದರ ಹೊಣೆಯನ್ನು ಕರ್ನಾಟಕದ ರಾಜ್ಯಸಭಾ ಸದಸ್ಯ ಪ್ರೊಫೆಸರ್ ಎಂ.ವಿ ರಾಜೀವ್ ಗೌಡರಿಗೆ ನೀಡಲಾಗಿದೆ.

ಎಐಸಿಸಿಯಲ್ಲಿ ಈ ಹಿಂದೆ ಇದ್ದ ಸಂಶೋಧನೆ ಮತ್ತು ಸಮನ್ವಯ ವಿಭಾಗ, ರಿಸರ್ಚ್ ಆ್ಯಂಡ್ ರೆಫರೆನ್ಸ್ ವಿಭಾಗ ಹಾಗೂ ಯೋಜನೆ, ಪಾಲಿಸಿ ಮತ್ತು ಸಮನ್ವಯ ವಿಭಾಗಗಳ ಜಾಗದಲ್ಲಿ ಈ ಸಂಶೋಧನಾ ವಿಭಾಗವನ್ನು ತೆರೆದಿದೆ.

Prof. M V Rajeev Gowda from Karnataka to lead AICC’s Research Department

ಈ ವಿಭಾಗಕ್ಕೆ ರಾಜೀವ್ ಗೌಡರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನರ್ಧನ್ ದ್ವಿವೇದಿ ಸುತ್ತೋಲೆ ಹೊರಡಿಸಿದ್ದಾರೆ.

2018ರಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಹೈಕಮಾಂಡ್ ಹೆಚ್ಚಿನ ಹೊಣೆಗಳನ್ನು ಕರ್ನಾಟಕ ಮೂಲದವರಿಗೇ ನೀಡಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಹೊಣೆಯನ್ನು ಮಾಜಿ ಸಂಸದೆ ರಮ್ಯಾಗೆ ನೀಡಲಾಗಿತ್ತು. ಇದೀಗ ಸಂಶೋಧನಾ ವಿಭಾಗವೂ ಕನ್ನಡಿಗರ ಪಾಲಾಗಿದೆ.

English summary
All India Congress Committee (AICC) constituted a new wing called ‘Research Department’. Rajya Sabha member from Karnataka Prof. M V Rajeev Gowda has been appointed as its chairman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X