ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧರಾಗಿರುವ ಕಾಂಗ್ರೆಸ್ಸಿನ ಅಭ್ಯರ್ಥಿಗಳ್ಯಾರು?

|
Google Oneindia Kannada News

Recommended Video

5 States Election Results 2018: ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧರಾಗಿರುವ ಕಾಂಗ್ರೆಸ್ಸಿನ ಅಭ್ಯರ್ಥಿಗಳ್ಯಾರು

ಬೆಂಗಳೂರು, ಡಿಸೆಂಬರ್ 13: ಪಂಚ ರಾಜ್ಯಗಳ ಚುನಾವಣೆದಲ್ಲಿ ಜನಾದೇಶವು ಕಾಂಗ್ರೆಸ್ ಪರವಾಗಿ ಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ಮುಖ್ಯಮಂತ್ರಿಯಾಗಲು ಸಿದ್ಧರಾಗಿರುವ ಅಭ್ಯರ್ಥಿಗಳತ್ತ ಒಂದು ನೋಟ ಇಲ್ಲಿದೆ..

ಐದು ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಟಿಆರ್ ಎಸ್ ಹಾಗೂ ಮಿಜೋರಾಂನಲ್ಲಿ ಎಂಎನ್ಎಫ್ ಅಧಿಕಾರಕ್ಕೆ ಬಂದಿದೆ. ಮಿಕ್ಕಂತೆ ಮಧ್ಯಪ್ರದೇಶದಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ (116) ಸಿಕ್ಕಿರಲಿಲ್ಲ ಒಂದು ದಿನಗಳ ಕಾಲ ನಡೆದ ಮತ ಎಣಿಕೆಯಲ್ಲಿ ಕೊನೆಗೂ ಕಾಂಗ್ರೆಸ್ ಕೈ ಮೇಲಾಗಿದೆ., ಛತ್ತೀಸ್ ಗಡದಲ್ಲಿ ಕಾಂಗ್ರೆಸ್ , ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಮುಂದಾಗಿದೆ.

ಪಂಚರಾಜ್ಯ ಫಲಿತಾಂಶ LIVE: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುಖಭಂಗ?ಪಂಚರಾಜ್ಯ ಫಲಿತಾಂಶ LIVE: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮುಖಭಂಗ?

ಮಧ್ಯಪ್ರದೇಶ (230): ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಶೇ 75ರಷ್ಟು ಮತದಾನದ ದಾಖಲಾಯಿತು. ಬಿಜೆಪಿ 230 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು.

ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್

ಕಾಂಗ್ರೆಸ್ 229ರಲ್ಲಿ ಸ್ಪರ್ಧಿಸಿದ್ದರೆ, ತಿಕ್ಮಾಘರ್ ಜಿಲ್ಲೆಯ ಜತಾರಾ ಸೀಟನ್ನು ಶರದ್ ಯಾದವ್ ನೇತೃತ್ವದ ಲೋಕ್ ತಾಂತ್ರಿಕ್ ಜನತಾ ದಳ(ಎಲ್ ಜೆಡಿ)ಗೆ ಬಿಟ್ಟುಕೊಟ್ಟಿತ್ತು. ಮಧ್ಯಪ್ರದೇಶದಲ್ಲಿ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. ಮಧ್ಯಪ್ರದೇಶದಲ್ಲಿ 82 ಮೀಸಲು ಕ್ಷೇತ್ರಗಳಿದ್ದು, 35 ಎಸ್ ಸಿ ಹಾಗೂ 47 ಎಸ್ ಟಿ ವರ್ಗಕ್ಕೆ ಸೇರಿದ್ದಾಗಿವೆ.

ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿಗಳು : ಕಮಲ್ ನಾಥ್, ಜ್ಯೋತಿರಾದಿತ್ಯಾ ಸಿಂಧಿಯಾ,

2013ರ ಫಲಿತಾಂಶ: ಬಿಜೆಪಿ 165; ಕಾಂಗ್ರೆಸ್ 58; ಬಿಎಸ್ ಪಿ4 ಹಾಗೂ ಇತರೆ 3. 2013ರಲ್ಲಿ ಶೇಕಡಾವಾರು ಮತ ಗಳಿಕೆ : ಬಿಜೆಪಿ ಶೇ 44.68, ಕಾಂಗ್ರೆಸ್ ಶೇ 36.38

ಸಚಿನ್ ಪೈಲಟ್ ಹಿನ್ನೆಲೆ- ರಾಜಸ್ಥಾನ

ಸಚಿನ್ ಪೈಲಟ್ ಹಿನ್ನೆಲೆ- ರಾಜಸ್ಥಾನ

ವಾಯುಸೇನೆಯಲ್ಲಿದ್ದ ರಾಜೇಶ್ವರ್ ಪ್ರಸಾದ್ ಸಿಂಗ್ ಅವರು ರಾಜೇಶ್ ಪೈಲಟ್ ಆಗಿ ಕಾಂಗ್ರೆಸ್ ಮುಖಂಡರಾಗಿ ಬೆಳೆದರು. ಇವರ ಪುತ್ರ ಸಚಿನ್ ಪೈಲಟ್ ಗೆ ಈಗ 41 ವರ್ಷ ವಯಸ್ಸು. ತಂದೆಯ ಅಕಾಲಿಕ ಮರಣದ ನಂತರ ರಾಜಕೀಯಕ್ಕೆ ಎಂಟ್ರಿ. ಬಿಎ, ಎಂಬಿಎ ಮಾಡಿರುವ ಸಚಿನ್ ಅವರು 26 ವರ್ಷ ವಯಸ್ಸಿಗೆ ಮೊದಲ ಜಯ ಕಂಡರು. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾರನ್ನು ಪ್ರೀತಿಸಿ ಮದುವೆಯಾದರು. 2009ರಲ್ಲಿ ಅಜ್ಮೇರ್ ನಿಂದ ಲೋಕಸಭೆಗೆ ಆಯ್ಕೆಯಾಗಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾದರು.
2014ರಲ್ಲಿ ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷರಾದರೂ ವಿಧಾನಸಭೆಯಲ್ಲಿ ಸೋಲು, ಅಜ್ಮೇರ್ ನಲ್ಲಿ ಲೋಕಸಭೆಯಲ್ಲಿ ವೈಯಕ್ತಿಕ ಸೋಲು ಅವರನ್ನು ಕಾಡಿಸಿತು. ಆದರೆ, ಈ ಬಾರಿ ವಸುಂಧರಾ ಅವರ ಗೌರವ ಯಾತ್ರೆಗೆ ವಿರುದ್ಧವಾಗಿ ಪೈಲಟ್ ಕಾರ್ಯವ್ಯೂಹ ರಚಿಸಿದ್ದು, ಸಿಎಂ ಆಗುವ ಸನಿಹದಲ್ಲಿದ್ದಾರೆ.

ಅಶೋಕ್ ಗೆಹ್ಲೋಟ್ -ರಾಜಸ್ಥಾನ

ಅಶೋಕ್ ಗೆಹ್ಲೋಟ್ -ರಾಜಸ್ಥಾನ

ರಾಜ್ಯ ರಾಜಕೀಯಕ್ಕೆ ಮರಳಿದ ಬಳಿಕ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಲಾಯಿತು. 1998 ರಿಂದ 2003ರ ತನಕ ಹಾಗೂ 2008 ರಿಂದ 2013ರ ತನಕ ಮುಖ್ಯಮಂತ್ರಿಯಾಗಿ ಅನುಭವ ಉಳ್ಳವರು. ಜೋಧ್ ಪುರ್ ಮೂಲದ ಅಶೋಕ್ ಅವರು ಸರ್ದಾರ್ ಪುರ ಕ್ಷೇತ್ರದ ಅಭ್ಯರ್ಥಿ. ಸದ್ಯ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ತರಬೇತಿ ನೀಡುವಲ್ಲಿ ಪರಿಣಿತರಾಗಿದ್ದಾರೆ.

ಭೂಪೇಶ್ ಬಘೇಲ್- ಛತ್ತೀಸ್ ಗಡ

ಭೂಪೇಶ್ ಬಘೇಲ್- ಛತ್ತೀಸ್ ಗಡ

ಛತ್ತೀಸ್ ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇಶ್ ಬಘೇಲ್ ಅವರು ಅಕ್ಟೋಬರ್ 2014ರಿಂದ ಅಧಿಕಾರ ನಡೆಸಿದ್ದಾರೆ. ದುರ್ಗ್ ಜಿಲ್ಲೆಯ ಪಟಾನ್ ಕ್ಷೇತ್ರದ ಅಭ್ಯರ್ಥಿ. ಈ ಹಿಂದೆ ದಿಗ್ವಿಜಯ್ ಸಿಂಗ್ ಅವರ ಸರ್ಕಾರದಿಂದ ಸಚಿವರಾಗಿದ್ದರು. ಸಾರಿಗೆ ಸಚಿವರಾಗಿ ಉತ್ತಮ ಹೆಸರು ಗಳಿಸಿದರು. ಛತ್ತೀಸ್ ಗಢ ರಾಜ್ಯ ಉದಯವಾದ ಬಳಿಕ ಬಘೇಲ್ ಅವರು ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದರು.

ತಾಮರ್ಧ್ವಜ್ ಸಾಹು- ಛತ್ತೀಸ್ ಗಡ

ತಾಮರ್ಧ್ವಜ್ ಸಾಹು- ಛತ್ತೀಸ್ ಗಡ

ದುರ್ಗ್ (ಗ್ರಾಮೀಣ) ಲೋಕಸಭಾ ಕ್ಷೇತ್ರದ ಸಂಸದ, 69 ವರ್ಷ ವಯಸ್ಸಿನ ಹಿಂದುಳಿದ ವರ್ಗದ ನಾಯಕ ತಾಮರ್ ಧ್ವಜ್ ಸಾಹು ಅವರಿಗೆ ಸಾಹು ಸಮುದಾಯದ ಬೆಂಬಲವಿದೆ. ಇಂಧನ, ಶಿಕ್ಷಣ, ಜಲ ಸಂಪನ್ಮೂಲ ಖಾತೆ ನಿಭಾಯಿಸಿದ ಅನುಭವವಿದೆ. 2013ರಲ್ಲಿ ಬೆಮೆತಾರಾದಿಂದ ವಿಧಾನಸಭೆ ಸ್ಪರ್ದಿಸಿ ಬಿಜೆಪಿಯ ಅವಧೇಶ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು.

English summary
As a Congress is taking lead in BJP ruled states, discussions have started regarding chief ministerial candidates. Majority of the exit polls had predicted a Congress win in Rajasthan and Chhattisgarh and a nail-biter finish for the BJP in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X