ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯತೆ ಮೇಲಿನ ಅಪರಾಧ: ಫಡ್ನವೀಸ್ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೋವಿಡ್ ಚಿಕಿತ್ಸೆಗೆ ಮುಖ್ಯವಾದ ರೆಮ್ಡೆಸಿವಿರ್ ಔಷಧವನ್ನು ಸಂಗ್ರಹಿಸಿ ಇರಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಆರೋಪಿಸಿದ್ದಾರೆ. ಜನರು ರೆಮ್ಡೆಸಿವಿರ್ ಹೊಂದಿಸಲು ಸಾಧ್ಯವಾಗದೆ ಒದ್ದಾಡುತ್ತಿರುವಾಗ ಬಿಜೆಪಿ ನಾಯಕ ಅದನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಇದು ಮಾನವೀಯತೆ ವಿರುದ್ಧದ ಅಪರಾಧ ಎಂದು ಅವರು ಟೀಕಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರೆಮ್ಡೆಸಿವಿರ್ ಔಷಧ ವಿಚಾರವಾಗಿ ನಡೆದ ರಾಜಕೀಯ ಸಂಘರ್ಷದ ವಿಡಿಯೋವನ್ನು ಹಂಚಿಕೊಂಡಿರುವ ಪ್ರಿಯಾಂಕಾ, ಟ್ವಿಟ್ಟರ್‌ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಔಷಧ ಕಂಪೆನಿ ಅಧಿಕಾರಿ ವಿಚಾರಣೆ: ಠಾಣೆಗೆ ನುಗ್ಗಿದ ಫಡ್ನವೀಸ್ಔಷಧ ಕಂಪೆನಿ ಅಧಿಕಾರಿ ವಿಚಾರಣೆ: ಠಾಣೆಗೆ ನುಗ್ಗಿದ ಫಡ್ನವೀಸ್

ಕೋವಿಡ್-19ರ ಚಿಕಿತ್ಸೆಗೆ ಅತ್ಯಂತ ಮುಖ್ಯವಾಗಿ ಬಳಸುತ್ತಿರುವ ರೆಮ್ಡೆಸಿವಿರ್ ಲಸಿಕೆಯ ಸಾವಿರಾರು ಬಾಟಲಿಗಳನ್ನು ಬ್ರುಕ್ ಫಾರ್ಮಾ ಔಷಧ ಕಂಪೆನಿ ಸಂಗ್ರಹಿಸಿ ಇರಿಸಿಕೊಂಡಿದೆ ಎಂಬ ಮಾಹಿತಿ ಆಧಾರದಲ್ಲಿ ಮುಂಬೈನಲ್ಲಿನ ಕಂಪೆನಿ ನಿರ್ದೇಶಕರನ್ನು ಪೊಲೀಸರು ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಫಡ್ನವೀಸ್ ಹಾಗೂ ಇತರೆ ಬಿಜೆಪಿ ಮುಖಂಡರು ಠಾಣೆಗೆ ತೆರಳಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.

Priyanka Gandhi Vadra Accuses Devendra Fadnavis Of Hoarding Remdesivir

'ದೇಶದ ಪ್ರತಿ ಮೂಲೆ ಮೂಲೆಯ ಜನರು ರೆಮ್ಡೆಸಿವಿರ್ ಲಸಿಕೆಯ ಪೂರೈಕೆಗಾಗಿ ಜನರು ಮನವಿ ಮಾಡುತ್ತಿರುವ ಮತ್ತು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಒಂದು ಬಾಟಲಿ ರೆಮ್ಡೆಸಿವಿರ್ ಖರೀದಿಸಲು ಹೆಣಗಾಡುತ್ತಿರುವ ಸಮಯದಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಬಿಜೆಪಿ ನಾಯಕರೊಬ್ಬರು ರೆಮ್ಡೆಸಿವಿರ್ ಲಸಿಕೆಯನ್ನು ಸಂಗ್ರಹಿಸಿ ಇರಿಸಿಕೊಂಡಿರುವುದು ಮಾನವೀಯತೆಯ ವಿರುದ್ಧದ ಅಪರಾಧ' ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕೊರೊನಾವೈರಸ್ ಸಿಕ್ಕರೆ ಫಡ್ನವಿಸ್ ಬಾಯಿಗೆ ಹಾಕುತ್ತೇನೆ: ಶಿವಸೇನಾ ಶಾಸಕಕೊರೊನಾವೈರಸ್ ಸಿಕ್ಕರೆ ಫಡ್ನವಿಸ್ ಬಾಯಿಗೆ ಹಾಕುತ್ತೇನೆ: ಶಿವಸೇನಾ ಶಾಸಕ

ಭಾರತದಿಂದ ಹೊರದೇಶಕ್ಕೆ ರೆಮ್ಡೆಸಿವಿರ್ ಔಷಧಗಳ ರಫ್ತು ಮಾಡುವುದನ್ನು ನಿಷೇಧಿಸಲಾಗಿದ್ದರೂ ಸರಕು ವಿಮಾನದಲ್ಲಿ ರೆಮ್ಡೆಸಿವಿರ್ ಸಂಗ್ರಹವನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದರಿಂದ ಕಂಪೆನಿ ನಿರ್ದೇಶಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧವನ್ನು ಮಹಾರಾಷ್ಟ್ರಕ್ಕೆ ಪೂರೈಕೆ ಮಾಡಲು ಬಿಜೆಪಿ ಅನುಮತಿ ಪಡೆಯುವುದರಲ್ಲಿ ಯಶಸ್ವಿಯಾದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಫಡ್ನವೀಸ್ ಆರೋಪಿಸಿದ್ದರು.

ರೆಮ್ಡೆಸಿವಿರ್ ಲಸಿಕೆಯನ್ನು ಸರ್ಕಾರ ಮಾತ್ರವೇ ಮಾರಾಟ ಮಾಡಲು ಅವಕಾಶ ಇರುವಾಗ ಗುಜರಾತ್‌ನಿಂದ ಅದನ್ನು ಫಡ್ನವೀಸ್ ಅವರಂತಹ ಖಾಸಗಿ ವ್ಯಕ್ತಿ ಹೇಗೆ ಖರೀದಿ ಮಾಡಲು ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದಾರೆ.

English summary
Congress leader Priyanka Gandhi Vadra accused Devendra Fadnavis of hoarding Remdesivir drugs said, it was a crime against humanity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X