ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಯ್ಯೋ, ನಿಮ್ಮ ಮೊಣಕಾಲು ಕಾಣುತ್ತಿದೆ ನೋಡಿ': ಮೋದಿ, ಭಾಗ್ವತ್ ಫೋಟೊ ಹಾಕಿ ಪ್ರಿಯಾಂಕಾ ವ್ಯಂಗ್ಯ

|
Google Oneindia Kannada News

ನವದೆಹಲಿ, ಮಾರ್ಚ್ 19: ಹರಿದ ಜೀನ್ಸ್‌ಗಳನ್ನು ತೊಡುವ ಮಹಿಳೆಯರು ಸಮಾಜದ ಮೌಲ್ಯ ಕಳೆಯುತ್ತಿದ್ದಾರೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರ ಹೇಳಿರುವುದು ತೀವ್ರ ವಿವಾದ ಸೃಷ್ಟಿಸಿದೆ. ರಾವತ್ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮತ್ತಿತರರು ಖಾಕಿ ಚಡ್ಡಿ ಹಾಕಿಕೊಂಡ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

''ಅಯ್ಯೋ ದೇವರೇ!!! ಅವರ ಮೊಣಕಾಲುಗಳು ಕಾಣಿಸುತ್ತಿವೆ'' ಎಂದು ಬಿಜೆಪಿ ನಾಯಕರು, ಆರೆಸ್ಸೆಸ್‌ನ ಹಿಂದಿನ ಸಮವಸ್ತ್ರ ಬಿಳಿ ಅಂಗಿ ಮತ್ತು ಖಾಕಿ ಚಡ್ಡಿಯನ್ನು ಧರಿಸಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದೆಲ್ಲವೂ ಆರೆಸ್ಸೆಸ್‌ನ ಕಾರ್ಯಕ್ರಮದ ಚಿತ್ರಗಳಾಗಿವೆ.

 ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ

ಇಂದಿನ ಯುವ ಜನಾಂಗ ಮೌಲ್ಯಗಳಿಲ್ಲದ ವಿಚಿತ್ರ ಫ್ಯಾಷನ್ ಟ್ರೆಂಡ್ ಅನ್ನು ಅನುಸರಿಸುತ್ತಿದೆ. ಮೊಣಕಾಲಿನಲ್ಲಿ ಹರಿದ ಜೀನ್ಸ್ ಧರಿಸಿದ್ದಕ್ಕೆ ತಾವು ಮಹಾನ್ ವ್ಯಕ್ತಿಗಳೆಂದು ಭಾವಿಸಿಬಿಡುತ್ತಾರೆ ಎಂದು ರಾವತ್ ಟೀಕಿಸಿದ್ದರು. ಮುಂದೆ ಓದಿ.

ಯಾವ ಸಂದೇಶ ನೀಡುತ್ತಾರೆ?

ಯಾವ ಸಂದೇಶ ನೀಡುತ್ತಾರೆ?

ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆಯೊಬ್ಬರು ಸ್ವಯಂ ಸೇವಕ ಸಂಘ ನಡೆಸುತ್ತಿರುವುದನ್ನು ನೋಡಿ ನನಗೆ ಶಾಕ್ ಆಯಿತು. ಈಕೆ ಸಮಾಜಕ್ಕೆ ಯಾವ ರೀತಿಯ ಉದಾಹರಣೆಯಾಗಬಲ್ಲಳು ಎಂಬ ಆತಂಕ ಉಂಟಾಯಿತು. ಈ ರೀತಿಯ ಮಹಿಳೆಯರು ಸಮಾಜದಲ್ಲಿ ಹಲವು ಜನರನ್ನು ಭೇಟಿ ಆಗಿ, ಅವರ ಸಮಸ್ಯೆಗಳನ್ನು ಬಗೆಹರಿಸಲು ಹೋಗುತ್ತಾರೆ ಎಂದರೆ ನಮ್ಮ ಸಮಾಜಕ್ಕೆ, ನಮ್ಮ ಮಕ್ಕಳಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬ ಕುರಿತು ನಾವು ಯೋಚಿಸಬೇಕಿದೆ. ನಾವು ಏನನ್ನು ಮಾಡುತ್ತೇವೋ ಅದನ್ನೇ ನಮ್ಮ ಮಕ್ಕಳು ಅನುಸರಿಸುತ್ತಾರಲ್ಲವೇ ಎಂದು ರಾವತ್ ಹೇಳಿದ್ದು ವಿವಾದ ಸೃಷ್ಟಿಸಿತ್ತು.

ರಾವತ್ ಪತ್ನಿ ಸಮರ್ಥನೆ

ತೀರಥ್ ಸಿಂಗ್ ರಾವತ್ ಅವರ ಹೇಳಿಕೆಯನ್ನು ಅವರ ಪತ್ನಿ ರಶ್ಮಿ ತ್ಯಾಗಿ ಸಮರ್ಥಿಸಿಕೊಂಡಿದ್ದಾರೆ. ಅವರು ಈ ಹೇಳಿಕೆ ನೀಡಿದ ಹಿಂದಿನ ಒಟ್ಟಾರೆ ಸನ್ನಿವೇಶವನ್ನು ಮರೆ ಮಾಚಿ ಇದನ್ನು ವಿವಾದವನ್ನಾಗಿಸಲಾಗಿದೆ ಎಂದು ರಶ್ಮಿ ಹೇಳಿದ್ದಾರೆ.

ಮಹಿಳೆಯರ ಜವಾಬ್ದಾರಿ

ಮಹಿಳೆಯರ ಜವಾಬ್ದಾರಿ

'ದೇಶ ಮತ್ತು ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾಲುದಾರಿಕೆ ಅಭೂತಪೂರ್ವವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು, ನಮ್ಮ ಅಸ್ಮಿತೆಯನ್ನು ಮತ್ತು ನಮ್ಮ ಉಡುಗೆ ತೊಡುಗೆ ರೀತಿಯನ್ನು ಕಾಪಾಡುವುದು ನಮ್ಮ ದೇಶದ ಮಹಿಳೆಯರ ಜವಾಬ್ದಾರಿ ಎಂಬ ಅರ್ಥದಲ್ಲಿ ಅವರು ಹೇಳಿದ್ದಾರೆ' ಎಂಬುದಾಗಿ ಸಮರ್ಥನೆ ನೀಡಿದ್ದಾರೆ.

Recommended Video

T 20 ಯಲ್ಲಿ ವಿಶೇಷ ದಾಖಲೆ ಮಾಡಿದ ಸ್ಟಾರ್ ಆಟಗಾರ !! | Oneindia Kannada
ಅಪರಾಧಗಳಿಗೆ ಪ್ರಚೋದನೆ

ಅಪರಾಧಗಳಿಗೆ ಪ್ರಚೋದನೆ

'ಉನ್ನತ ಹುದ್ದೆಯಲ್ಲಿ ಇರುವವರು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ ಯೋಚನೆ ಮಾಡಬೇಕು. ಇಂದಿನ ಕಾಲಮಾನದಲ್ಲಿ ಜನರು ಧರಿಸುವ ಉಡುಪಿನ ಆಧಾರದಲ್ಲಿ ಯಾರು ಸುಸಂಸ್ಕೃತರು, ಯಾರು ಅಲ್ಲ ಎಂದು ನೀವು ತೀರ್ಮಾನಿಸುತ್ತೀರಾ? ಇದು ಕೀಳು ಮನಸ್ಥಿತಿ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಪ್ರಚೋದನೆ ನೀಡುವಂತಿದೆ' ಎಂದು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಟೀಕಿಸಿದ್ದಾರೆ.

English summary
Congress leader Priyanka Gandhi Vadra shared photos of PM Modi, Nitin Gadkari in Khaki shorts to hit out at Ripped jeans comment by Uttarakhand CM Rawat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X