ರಾಯ್ ಬರೇಲಿ ಸಭೆಯಲ್ಲಿ ಪ್ರಧಾನಿ ಮೋದಿಯನ್ನು ಪ್ರಿಯಾಂಕ ಕೆಣಕಿದ್ದು ಹೀಗೆ!

Written By:
Subscribe to Oneindia Kannada

ರಾಯ್ ಬರೇಲಿ, ಫೆ 17: ಎರಡು ಹಂತದ ಚುನಾವಣೆಯ ನಂತರ ಮೂರನೇ ಹಂತದ ಚುನಾವಣೆಗೆ (ಫೆ 19) ಉತ್ತರಪ್ರದೇಶ ಸಜ್ಜಾಗಿದೆ. ಈ ಮಧ್ಯೆ, ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕ ಗಾಂಧಿ ವಾಧ್ರಾ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

ತವರು ಮನೆಯ ರಾಜಕೀಯ ಕರ್ಮಭೂಮಿ ರಾಯ್ ಬರೇಲಿಯಲ್ಲಿನ ಸಾರ್ವಜನಿಕ ಸಭೆಯಲ್ಲಿ ನಿರೀಕ್ಷೆಯಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಪ್ರಿಯಾಂಕ ಕಿಡಿಕಾರಿದ್ದಾರೆ. ಈ ಸಭೆಯಲ್ಲಿ ಸಹೋದರ ರಾಹುಲ್ ಗಾಂಧಿ ಕೂಡಾ ಭಾಗವಹಿಸಿದ್ದರು.

ಉತ್ತರಪ್ರದೇಶಕ್ಕೆ ' ದತ್ತುಪುತ್ರ' ನರೇಂದ್ರ ಮೋದಿಯ ಅವಶ್ಯಕತೆ ಏನಿದೆ ಎಂದು ಕೆಣಕಿದ ಪ್ರಿಯಾಂಕ, ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಲ್ಲಿನವರಲ್ಲವೇ, ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ ನೀಡಿ ಎಂದು ಪ್ರಿಯಾಂಕ ಆಗ್ರಹಿಸಿದ್ದಾರೆ.

ನಾನು ಉತ್ತರಪ್ರದೇಶದ ಬೇಟಾ, ರಾಜ್ಯವನ್ನು ಅಭಿವೃದ್ದಿ ಮಾಡುತ್ತೇನೆಂದು ಮೋದಿ ಹೇಳುತ್ತಿದ್ದಾರೆ. ಇಲ್ಲಿನ ಜನರಿಗೆ ದತ್ತುಪುತ್ರ ಮೋದಿಯ ಅವಶ್ಯಕತೆ ಏನಿದೆ? ಇಲ್ಲಿ ಯಾರೂ ಯವಕರಿಲ್ಲವೇ, ರಾಹುಲ್ ಮತ್ತು ಅಖಿಲೇಶ್ ಇವರ ಕಣ್ಣಿಗೆ ಪರಕೀಯರಂತೆ ಕಾಣುತ್ತಾರೆಯೇ ಎಂದು ಪ್ರಿಯಾಂಕ ಗಾಂಧಿ, ಮೋದಿಯನ್ನು ಲೇವಡಿ ಮಾಡಿದ್ದಾರೆ.

ರಾಹುಲ್ ಮತ್ತು ಅಖಿಲೇಶ್ ಅವರ ಉಸಿರಲ್ಲಿ ಉತ್ತರಪ್ರದೇಶದ ಭವಿಷ್ಯವಿದೆ, ರಾಜ್ಯಕ್ಕಾಗಿ ಪ್ರಾಣತ್ಯಾಗ ಮಾಡಲು ಅವರು ಸಿದ್ದರಿದ್ದಾರೆ. ಇಲ್ಲಿನ ಒಬ್ಬೊಬ್ಬ ಯುವಕರೂ ಉತ್ತರಪ್ರದೇಶವನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಮೋದಿ ಒಬ್ಬ ಗಬ್ಬರ್ ಸಿಂಗ್, ನರೇಂದ್ರ ಮೋದಿಯವನ್ನು ಉತ್ತರಪ್ರದೇಶದ ದತ್ತುಪುತ್ರ ಎಂದು ಸಂಭೋದಿಸಿದ್ದಕ್ಕೆ, ಟ್ವಿಟ್ಟಿಗರು ಪ್ರಿಯಾಂಕ ಗಾಂಧಿಯನ್ನು ಲೇವಡಿ ಮಾಡಿದ್ದು ಹೀಗೆ..

ರಾಯ್ ಬರೇಲಿಯಲ್ಲಿ ಪ್ರಿಯಾಂಕ

ರಾಯ್ ಬರೇಲಿಯಲ್ಲಿ ಪ್ರಿಯಾಂಕ

ವೇದಿಕೆಯನ್ನು ಮೋದಿ ವಿರುದ್ದ ವಾಗ್ದಾಳಿ ನಡೆಸಲು ಬಳಸಿಕೊಂಡ ಪ್ರಿಯಾಂಕ, ವಾರಣಾಸಿಯ ಜನಪ್ರತಿನಿಧಿಯಾದ ನೀವು ಅಲ್ಲಿ ಏನು ಅಭಿವೃದ್ದಿ ಮಾಡಿದ್ದೀರಿ, ಅಲ್ಲಿನ ಜನತೆಯನ್ನು ಕೇಳಿದರೆ ವಸ್ತುಸ್ಥಿತಿಯ ಅನಾವರಣವಾಗುತ್ತದೆ. ನಿಮ್ಮ ರಂಗು ರಂಗಿನ ಮಾತಿನಿಂದ ಜನ ಮರಳಾಗುವುದಿಲ್ಲ - ಪ್ರಿಯಾಂಕ (ಚಿತ್ರ: ಯುಟ್ಯೂಬ್)

ರಾಹುಲ್ ಗಾಂಧಿಯ ಭಾಷಣ

ರಾಹುಲ್ ಗಾಂಧಿಯ ಭಾಷಣ

ಉತ್ತರಪ್ರದೇಶ ಹಲವು ಹಳೆಯ ನಗರಗಳನ್ನು ಹೊಂದಿರುವ ರಾಜ್ಯ. ಉತ್ತರಪ್ರದೇಶದಲ್ಲಿ ಮಾವಿನ ಹಣ್ಣಿನ ವಿಶ್ವದರ್ಜೆಯ ಕಾರ್ಖಾನೆ ನಿರ್ಮಿಸಬೇಕಿದೆ. ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೇ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಶಾರೂಖ್ ಖಾನ್ ಹೇಗೆ ಶೋಲೆಯ ಗಬ್ಬರ್ ಸಿಂಗ್ ಆಗ್ತಾರೋ, ಹಾಗೇ ನಮ್ಮ ಪ್ರಧಾನಿ ಕೂಡಾ - ರಾಹುಲ್ ಗಾಂಧಿ (ಚಿತ್ರ: ಎನ್ಡಿಟಿವಿ)

ಅಮೇಠಿ, ರಾಯ್ ಬರೇಲಿಗೆ ಹೊರಗಿನವರು ಇರಲಿ

ಅಮೇಠಿ, ರಾಯ್ ಬರೇಲಿಯಲ್ಲಿ ಹಿಂದುಳಿದ ವರ್ಗ, ಹಿಂದುಳಿದಿರುವುದರಿಂದ ಉತ್ತರಪ್ರದೇಶಕ್ಕೆ ಹೊರಗಿನವರ ಅವಶ್ಯಕತೆಯಿದೆ.

ಯುಪಿಯವರು ಲೂಟಿ ಮಾಡಿದ್ದೇ ಜಾಸ್ತಿ

ಉತ್ತಪ್ರದೇಶದವರು ರಾಜ್ಯವನ್ನು ಲೂಟಿ ಮಾಡಿದ್ದೇ ಜಾಸ್ತಿಯಾಗಿರುವುದರಿಂದ ರಾಜ್ಯದ ಅಭಿವೃದ್ದಿಗೆ ಹೊರಗಿನವರೇ ಉತ್ತಮ.

ಗಾಂಧಿ ಕುಟುಂಬ ಆರು ದಶಕ ದೇಶವನ್ನು ಆಳಲಿಲ್ಲವೇ?

ಗಾಂಧಿ ಕುಟುಂಬ ದೇಶವನ್ನು ಆರು ದಶಕಗಳ ಕಾಲ ಆಳಿದೆ, ಹಾಗಿದ್ದರೂ ದೇಶ ಹಿಂದುಳಿದಿದೆ ಎಂದು ಟೀಕಿಸುತ್ತಿರುವುದು ತಾವು ಇಷ್ಟು ದಿನ ರಾಜ್ಯಭಾರ ನಡೆಸಿದ್ದನ್ನು ಮರೆತಂತಿದೆ.

ಪ್ರಿಯಾಂಕ ಗಾಂಧಿ ಕೂಡಾ ಈಗ ಹೊರಗಿನವರ ಲೆಕ್ಕ

ಪ್ರಿಯಾಂಕ ಹೇಳುವ ಪ್ರಕಾರ ಉತ್ತರಪ್ರದೇಶಕ್ಕೆ ಹೊರಗಿನವರ ಅವಶ್ಯಕತೆಯಿಲ್ಲ. ಆದರೆ, ಪ್ರಿಯಾಂಕ ಕೂಡಾ ಈಗ ಹೊರಗಿವರು ತಾನೇ?

ಪ್ರಿಯಾಂಕ ಗಾಂಧಿ ಕೂಡಾ ಈಗ ಹೊರಗಿನವರ ಲೆಕ್ಕ

ಪ್ರಿಯಾಂಕ ಹೇಳುವ ಪ್ರಕಾರ ಉತ್ತರಪ್ರದೇಶಕ್ಕೆ ಹೊರಗಿನವರ ಅವಶ್ಯಕತೆಯಿಲ್ಲ. ಆದರೆ, ಪ್ರಿಯಾಂಕ ಕೂಡಾ ಈಗ ಹೊರಗಿವರು ತಾನೇ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Priyanka Gandhi Vadra in her first campaign speech on Friday (Feb 17) for the ongoing Uttar Pradesh polls attacked Prime Minister Narendra Modi for his “adopted son” remark, saying the state has its own sons.
Please Wait while comments are loading...