ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಗೆ ಸ್ಪರ್ಧೆ : ಮೌನ ಮುರಿದ ಪ್ರಿಯಾಂಕಾ ಗಾಂಧಿ

|
Google Oneindia Kannada News

ನವದೆಹಲಿ, ಮಾರ್ಚ್ 27 : ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲಿದ್ದಾರೆಯೇ?. ಉತ್ತರ ಪ್ರದೇಶದ ಪೂರ್ವ ವಲಯದ ಉಸ್ತುವಾರಿಯಾಗಿ ಅವರು ನೇಮಕವಾದ ದಿನದಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬುಧವಾರ ಈ ಕುರಿತು ಪ್ರಿಯಾಂಕಾ ಗಾಂಧಿ ಅವರು ಈ ಕುರಿತು ಮಾತನಾಡಿದರು. 'ನಾನು ಈ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಪಕ್ಷದೊಂದಿಗೆ ಕೆಲಸ ಮಾಡಬೇಕು ಎಂಬುದು ನನ್ನ ಆಸೆಯಾಗಿದೆ' ಎಂದು ಹೇಳಿದರು.

ಜನರು ಮೂರ್ಖರೆಂದು ಭಾವಿಸಬೇಡಿ: ಮೋದಿಗೆ ಪ್ರಿಯಾಂಕಾ ತಿರುಗೇಟುಜನರು ಮೂರ್ಖರೆಂದು ಭಾವಿಸಬೇಡಿ: ಮೋದಿಗೆ ಪ್ರಿಯಾಂಕಾ ತಿರುಗೇಟು

Priyanka Gandhi breaks silence on contest for Lok sabha election

'ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಪಕ್ಷ ಸ್ಪರ್ಧೆ ಮಾಡುವಂತೆ ಸೂಚಿಸಿದರೆ ಖಂಡಿತ ಕಣಕ್ಕಿಳಿಯುತ್ತೇನೆ' ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದರು.

ಇಟಲಿ ಅಜ್ಜಿಯನ್ನು ನೋಡಿ ವರ್ಷಗಳೇ ಆದವು : ಬಿಜೆಪಿಗೆ ಪ್ರಿಯಾಂಕಾ ಮಾತಿನೇಟುಇಟಲಿ ಅಜ್ಜಿಯನ್ನು ನೋಡಿ ವರ್ಷಗಳೇ ಆದವು : ಬಿಜೆಪಿಗೆ ಪ್ರಿಯಾಂಕಾ ಮಾತಿನೇಟು

ಪ್ರಿಯಾಂಕಾ ಗಾಂಧಿ ಅವರು ಸಕ್ರಿಯ ರಾಜಕಾರಣಕ್ಕೆ ಬಂದಿದ್ದು ಉತ್ತರ ಪ್ರದೇಶದ ಪೂರ್ವ ವಲಯದ ಉಸ್ತುವಾರಿಯಾಗಿ ಅವರನ್ನು ನೇಮಕ ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಚಾರ ಕಾರ್ಯದ ಉಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ.

ಅಜ್ಜಿ ಥರ ಮೂಗಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲೋಕಾಗಲ್ಲ! ಪ್ರಿಯಾಂಕಾಗೆ ಟಾಂಗ್ಅಜ್ಜಿ ಥರ ಮೂಗಿದ್ದ ಮಾತ್ರಕ್ಕೆ ಚುನಾವಣೆ ಗೆಲ್ಲೋಕಾಗಲ್ಲ! ಪ್ರಿಯಾಂಕಾಗೆ ಟಾಂಗ್

ಉತ್ತರ ಪ್ರದೇಶದಲ್ಲಿ ಪ್ರಯಾಗಾ ರಾಜ್‌ನಿಂದ ವಾರಣಾಸಿಗೆ ಗಂಗಾ ಯಾತ್ರೆ ಮಾಡುವ ಮೂಲಕ ಅವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಅವರು ಸ್ಪರ್ಧೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆ ಪದೇ-ಪದೇ ಕೇಳಿಬರುತ್ತಿದೆ.

English summary
I have not decided yet to contest for election. If my party asks me to contest I will definitely contest said Congress general secretary Priyanka Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X