ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಓಡಿಸಲು ಖಾಸಗಿ ಕಂಪನಿಗೆ ಅವಕಾಶ ಕೊಡಲಿದೆಯೇ ರೈಲ್ವೆ ಇಲಾಖೆ?

|
Google Oneindia Kannada News

ಬೆಂಗಳೂರು, ಜೂನ್ 20: ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗೆ ಅವಕಾಶ ಮಾಡಿಕೊಡಲು ರೈಲ್ವೆ ಇಲಾಖೆ ಮುಂದಾಗಿದೆ.

ಈ ಬಗ್ಗೆ 100 ದಿನಗಳಲ್ಲಿ ಟೆಂಡರ್ ಆಹ್ವಾನಕ್ಕೆ ಸಿದ್ಧತೆ ಆರಂಭಿಸಿದೆ. ಆರಂಭಿಕ ಹಂತವಾಗಿ ಎರಡು ರೈಲುಗಳನ್ನು ತನ್ನ ಟಿಕೆಟ್ ಬುಕಿಂಗ್ ಹಾಗೂ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಗೆ ರೈಲ್ವೆ ಹಸ್ತಾಂತರ ಮಾಡಲಿದೆ.

ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು

ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಹಾಗೂ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗದಲ್ಲಿ ರೈಲುಗಳನ್ನು ಓಡಿಸುವ ಅವಕಾಶ ಖಾಸಗಿಯವರಿಗೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

Private player in railway track soon

ಟಿಕೆಟ್ ವಿತರಣೆ, ರೈಲಿನೊಳಗಿನ ಸೇವೆ ಎಲ್ಲವನ್ನೂ ಐಆರ್‌ಸಿಟಿಸಿ ನೋಡಿಕೊಳ್ಳಲಿದ್ದು, ರೈಲ್ವೆ ಇಲಾಖೆಗೆ ಇಂತಿಷ್ಟು ಹಣ ಎಂದು ಪಾವತಿ ಮಾಡಲಿದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಹಾಗೂ ಮಹತ್ವದ ಪ್ರವಾಸಿ ಸ್ಥಳಗಳನ್ನು ಹೊಂದಿರುವ ನಗರಗಳಲ್ಲಿ ಈ ರೈಲುಗಳು ಸಂಚರಿಸಲಿವೆ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು

ಈ ಕ್ರಮ ಖಾಸಗೀಕರಣದ ಯತ್ನ ಎಂಬ ಭಾವನೆ ನೌಕರರಲ್ಲಿದೆ. ಹೀಗಾಗಿ ಈ ನಿರ್ಧಾರವನ್ನು ಜಾರಿಗೆ ತರುವ ಮುನ್ನ ಕಾರ್ಮಿಕರ ಸಂಘಟನೆಗಳನ್ನು ಸಂಪರ್ಕಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ರೈಲ್ವೆ ಇಲಾಖೆ ಸಬ್ಸಿಡಿಯನ್ನು ಸ್ವಯಂ ತ್ಯಜಿಸುವಂತೆ ಪ್ರಯಾಣಿಕರ ಮನವೊಲಿಸಲು ರೈಲ್ವೆ ಇಲಾಖೆ ಬೃಹತ್ ಆಂದೋಲನವನ್ನು ಹಮ್ಮಿಕೊಂಡಿದೆ.

English summary
Union Government decided to invite private player for Railway soon. Tender process has been started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X