ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಗೆ 1.29 ಕೋಟಿ ಲಸಿಕೆ ದೊರೆತರೂ 22 ಲಕ್ಷ ಮಾತ್ರ ಬಳಕೆ!

|
Google Oneindia Kannada News

ನವದೆಹಲಿ, ಜೂ.12: ದೇಶಾದ್ಯಂತ ಲಸಿಕೆ ಕೊರತೆ ವರದಿಯಾಗುತ್ತಿರುವ ಸಮಯದಲ್ಲಿ, ಕಳೆದ ತಿಂಗಳು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಶೇ. 17 ರಷ್ಟು ಡೋಸ್‌ ಮಾತ್ರ ಬಳಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮೇ ತಿಂಗಳಿನಲ್ಲಿ 1.29 ಕೋಟಿ ಲಸಿಕೆ ಡೋಸ್‌ ಲಭ್ಯವಾಗಿದ್ದು ಈ ಪೈಕಿ ಕೇವಲ 22 ಲಕ್ಷ ಮಾತ್ರ ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಪ್ರಕಾರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಬಳಕೆಯಾಗದ ಲಸಿಕೆ ದಾಸ್ತಾನು ಹಾಗೆಯೇ ಇದೆ ಎಂಬುದು ಸ್ಪಷ್ಟವಾಗಿದೆ.

ಆರೋಗ್ಯ ಸಚಿವಾಲಯವು ಜೂನ್ 4 ರಂದು ಪತ್ರಿಕಾ ಪ್ರಕಟಣೆ ನೀಡಿದ್ದು, ಈ ಪ್ರಕಟಣೆಯ ಪ್ರಕಾರ ಮೇ ತಿಂಗಳಲ್ಲಿ ದೇಶಾದ್ಯಂತ ಒಟ್ಟು 7.4 ಕೋಟಿ ಡೋಸ್‌ಗಳು ಲಭ್ಯವಾಗಿದ್ದು ಈ ಪೈಕಿ 1.85 ಕೋಟಿ ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡಲಾಗಿದೆ. ಭಾರತದಾದ್ಯಂತ ಖಾಸಗಿ ಆಸ್ಪತ್ರೆಗಳು ಲಭ್ಯವಿರುವ 1.85 ಕೋಟಿ ಡೋಸ್‌ಗಳ ಪೈಕಿ 1.29 ಕೋಟಿ ಲಸಿಕೆ ಡೋಸ್‌ಗಳನ್ನು ಸಂಗ್ರಹ ಮಾಡಿಕೊಂಡಿದೆ. ಇನ್ನು ಇದೇ ಪ್ರಕಟಣೆಯಲ್ಲಿ ಕೇವಲ 22 ಲಕ್ಷ ಪ್ರಮಾಣವನ್ನು ಮಾತ್ರ ಖಾಸಗಿ ಆಸ್ಪತ್ರೆಗಳು ಬಳಸಿದೆ ಎಂದು ತಿಳಿಸಲಾಗಿದೆ.

9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್‌ ಲಸಿಕೆ - ಹುಟ್ಟಿದೆ ಅಸಮಾನತೆ ಪ್ರಶ್ನೆ 9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್‌ ಲಸಿಕೆ - ಹುಟ್ಟಿದೆ ಅಸಮಾನತೆ ಪ್ರಶ್ನೆ

ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಲೆ ಹಾಗೂ ಲಸಿಕೆಯ ಬಗ್ಗೆ ಹೊಂದಿರುವ ಆತಂಕವು ಜನರು ಲಸಿಕೆ ಪಡೆಯದಿರಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಪರ್ಯಾಸವೆಂದರೆ, ಶೇಕಡಾ 7.5 ರಷ್ಟು ಡೋಸ್‌ಗಳನ್ನು ಮಾತ್ರ ಬಳಸಲಾಗುತ್ತಿದೆ ಎಂಬ ಮಾಧ್ಯಮದ ವರದಿಯನ್ನು ಈ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಖಂಡಿಸಲಾಗಿದೆ.

Private Hospitals Got 1.29 Crore Covid Vaccine Doses but Only 22 Lakh Used

"ಕೆಲವು ಮಾಧ್ಯಮ ವರದಿಗಳು ಖಾಸಗಿ ಆಸ್ಪತ್ರೆಗಳಿಗೆ ಶೇ. 25 ಡೋಸ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಿದೆ, ಆದರೆ ಅವು ಒಟ್ಟು ಡೋಸ್‌ಗಳಲ್ಲಿ ಶೇ. 7.5 ಮಾತ್ರ ಖಾಸಗಿ ಆಸ್ಪತ್ರೆ ಹೊಂದಿದೆ. ಈ ವರದಿಗಳು ನಿಖರವಾಗಿಲ್ಲ ಮತ್ತು ಲಭ್ಯವಿರುವ ಮಾಹಿತಿಯೊಂದಿಗೆ ಹೊಂದಿಕೆಯಾಗುವುದಿಲ್ಲ" ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಲಾಭದಾಯಕ ಆರೋಪದ ಮಧ್ಯೆ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಗಳಿಗೆ ವಿಧಿಸಬಹುದಾದ ಗರಿಷ್ಠ ಬೆಲೆಯನ್ನು ಈ ತಿಂಗಳ ಆರಂಭದಲ್ಲಿ ಸರ್ಕಾರ ನಿಗದಿಪಡಿಸಿತು. ಈ ನಡುವೆ ಖಾಸಗಿ ಆಸ್ಪತ್ರೆಗೆ ಲಸಿಕೆ ವಿತರಣೆಯಲ್ಲೂ ಅಸಮಾನತೆಯಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಮೀಸಲಾದ ಲಸಿಕೆಗಳಲ್ಲಿ 9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್‌ ಲಸಿಕೆ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಕೋವಿಶೀಲ್ಡ್ ಡೋಸ್‌ಗೆ 780 ರೂ. , ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಡೋಸ್‌ಗೆ 1,145 ಮತ್ತು ಕೊವಾಕ್ಸಿನ್‌ಗೆ ಡೋಸ್‌ಗೆ 1,410 ನಿಗದಿಪಡಿಸಲಾಗಿದೆ. ಇದರಲ್ಲಿ ತೆರಿಗೆಗಳು ಮತ್ತು ಆಸ್ಪತ್ರೆಗಳ ಸೇವಾ ಶುಲ್ಕ 150 ರೂಪಾಯಿ ಸೇರಿದೆ.

ಇನ್ನು ಜೂನ್‌ 21 ರಿಂದ ಉಚಿತ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Recommended Video

Rohini Sindhuri ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೂಗು | Oneindia Kannada

English summary
Private Hospitals Got 1.29 Crore Covid Vaccine Doses but Only 22 Lakh Covid Vaccine Used.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X