ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ನೇರವಾಗಿ ಲಸಿಕೆ ಖರೀದಿಸುವಂತಿಲ್ಲ

|
Google Oneindia Kannada News

ನವದೆಹಲಿ, ಜೂನ್ 30: ಖಾಸಗಿ ಆಸ್ಪತ್ರೆಗಳು ನೇರವಾಗಿ ಕೊರೊನಾ ಲಸಿಕೆಗಳನ್ನು ಸರ್ಕಾರದಿಂದ ಖರೀದಿಸುವಂತಿಲ್ಲ, ಕೋವಿಡ್ ಅಪ್ಲಿಕೇಷನ್ ಮೂಲಕವೇ ಆರ್ಡರ್ ಬುಕ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಸಲಾಗುತ್ತದೆ. ಹೀಗಾಗಲೇ ಮೊದಲೇ ಕೋವಿಡ್ ಅಪ್ಲಿಕೇಷನ್‌ ಅಲ್ಲಿ ಎಷ್ಟು ಲಸಿಕೆ ಬೇಕೆಂಬುದನ್ನು ಸ್ಪಷ್ಟಪಡಿಸಿದರೆ ಆ ಸಂಖ್ಯೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಆಲ್ಫಾ, ಡೆಲ್ಟಾ ರೂಪಾಂತರವನ್ನು ತಟಸ್ಥಗೊಳಿಸುತ್ತದೆ ಕೋವ್ಯಾಕ್ಸಿನ್; NIHಆಲ್ಫಾ, ಡೆಲ್ಟಾ ರೂಪಾಂತರವನ್ನು ತಟಸ್ಥಗೊಳಿಸುತ್ತದೆ ಕೋವ್ಯಾಕ್ಸಿನ್; NIH

ಎನ್‌ಎಚ್‌ಎ ಪೋರ್ಟಲ್ ಮೂಲಕ ವಿದ್ಯುನ್ಮಾನವಾಗಿ ಹಣ ಪಾವತಿಸಿದ ನಂತರ ಈ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲು ಕೇಂದ್ರ ಆರೋಗ್ಯ ಸಚಿವಾಲಯ ಅನುಕೂಲ ಮಾಡುತ್ತದೆ. ಈ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಲಸಿಕೆಗಳ ಖರೀದಿ ಮತ್ತು ಪೂರೈಕೆಗಾಗಿ ಆಸ್ಪತ್ರೆಗಳು ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಈ ಕೆಳಗಿನ ಪರಿಷ್ಕರಣೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ.

Private Hospitals Cant Directly Procure Covid Vaccine

ಜುಲೈ 1 ರಿಂದ ದೇಶದ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್-19 ಲಸಿಕೆಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆಗಾಗಿ ಆರ್ಡರ್ ಮಾಡಿ ಲಸಿಕೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದೆ.

ಲಸಿಕೆಗಾಗಿ ಸರ್ಕಾರದಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿರುವ ಆರೋಗ್ಯ ಸಚಿವಾಲಯ ಸರ್ಕಾರಿ ಪೋರ್ಟಲ್‌ನಲ್ಲಿ ಖರೀದಿ ಆದೇಶಗಳನ್ನು ಯಶಸ್ವಿಯಾಗಿ ಸಲ್ಲಿಸಿದರೆ ಸಾಕು ಎಂದು ಸ್ಪಷ್ಟನೆ ನೀಡಿದೆ.

ಆರ್ಡರ್ ಬುಕ್ ಮಾಡಿದ ಮೂರು ದಿನಗಳಲ್ಲಿ ಪಾವತಿ ಮಾಡಬೇಕು, ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮೋಡ್ ಮೂಲಕ ಮಾತ್ರ ಪಾವತಿ ಸ್ವೀಕರಿಸಲಾಗುತ್ತದೆ, ಎಸ್‌ಒಪಿ ನಿರ್ದಿಷ್ಟಪಡಿಸುತ್ತದೆ. ಪಿಸಿವಿಸಿಗಳು ಕೋವಿಶೀಲ್ಡ್ ಅಥವಾ ಕೊವಾಕ್ಸಿನ್‌ಗೆ ನಾಲ್ಕು ಕಂತುಗಳವರೆಗೆ ಆರ್ಡರ್ ಬುಕ್ ಮಾಡಬಹುದು.

English summary
Starting July 1, private hospitals in the country will no longer be allowed to directly procure Covid vaccines from manufacturers and have to place orders on the Centre's CoWIN portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X