ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಮೇ 27: ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಪಾಲಿಥಿನ್‌ಗಳನ್ನು ಬಳಕೆ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಮನವಿ ಮಾಡಿದರು.

ಇವು ಪರಿಸರ, ವನ್ಯಜೀವಿ ಮತ್ತು ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಮೋದಿ ಭಾನುವಾರ ಆಕಾಶವಾಣಿಯ 'ಮನ್ ಕಿ ಬಾತ್‌' ಭಾಷಣದಲ್ಲಿ ಕಿವಿಮಾತು ಹೇಳಿದರು.

ವಿಶ್ವ ಪರಿಸರ ದಿನವನ್ನು ಗುರಿಯಾಗಿರಿಸಿಕೊಂಡು ಮಾತನಾಡಿದ ಅವರು, ಪರಿಸರ ರಕ್ಷಣೆಯ ಪ್ರಯತ್ನಗಳ ಕುರಿತು ಸಲಹೆಗಳನ್ನು ನೀಡಿದರು. ಮೋದಿ ಅವರ ಭಾಷಣದ ಕೆಲವು ಅಂಶಗಳು ಇಲ್ಲಿವೆ.

ದೇಶದ ಪ್ರಥಮ 14 ಪಥಗಳ ಹೆದ್ದಾರಿ ಮೊದಲ ಹಂತ ಲೋಕಾರ್ಪಣೆದೇಶದ ಪ್ರಥಮ 14 ಪಥಗಳ ಹೆದ್ದಾರಿ ಮೊದಲ ಹಂತ ಲೋಕಾರ್ಪಣೆ

ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಮಹತ್ವಾಕಾಂಕ್ಷೆಯಿಂದ ಆವರಿಸಬೇಕು. ಇದು ಗಿಡಗಳನ್ನು ನೆಡಲು ಆದ್ಯತೆ ನೀಡಬೇಕಾದ ಗಳಿಗೆ.

Prime minister narendra modi urges people to shun plastics

ಕೇವಲ ಗಿಡಗಳನ್ನು ನಡೆವುದರಿಂದ ಪ್ರಯೋಜನವಿಲ್ಲ. ಅದು ಬೆಳೆದು ಮರವಾಗುವವರೆಗೂ ಅದರ ಬಗ್ಗೆ ಕಾಳಜಿ ವಹಿಸಿಕೊಳ್ಳಲು ಜನರು ಮುಂದಾಗಬೇಕು.

ಪರಿಸರದ ರಕ್ಷಣೆ ಮತ್ತು ಪ್ರಕೃತಿಯೆಡೆಗಿನ ಸಂವೇದನೆ ಸಹಜವಾಗಿಯೇ ಬರಬೇಕು. ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆ ಅಕಾಲಿಕ. ಜೀವ ಮತ್ತು ಆಸ್ತಿ ಪಾಸ್ತಿ ಹಾನಿಗೆ ಪ್ರತಿಕೂಲ ವಾತಾವರಣ ಕಾರಣವಾಗಿದೆ. ಹವಾಮಾನ ಸನ್ನಿವೇಶದ ಬದಲಾವಣೆಯ ಫಲಿತಾಂಶವಿದು.

4 ವರ್ಷದಲ್ಲಿ ನರೇಂದ್ರ ಮೋದಿಯವರ 9 ಪ್ರಮುಖ ನಿರ್ಧಾರ4 ವರ್ಷದಲ್ಲಿ ನರೇಂದ್ರ ಮೋದಿಯವರ 9 ಪ್ರಮುಖ ನಿರ್ಧಾರ

ಸುಡುಬಿಸಿಲಿನ ಬೇಸಿಗೆ, ಪ್ರವಾಹ, ಬಿಟ್ಟುಬಿಡದೆ ಸುರಿಯುವ ಮಳೆ ಅಥವಾ ಸಹಿಸಲಾಧ್ಯ ಚಳಿಯನ್ನು ಎದುರಿಸಿದಾಗಲೆಲ್ಲ, ಪ್ರತಿಯೊಬ್ಬರೂ ಹಮಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದ ಬಗ್ಗೆ ವಿಶ್ಲೇಷಣೆ ಮಾಡುವ ಪರಿಣತರಾಗುತ್ತಾರೆ.

ಆದರೆ, ಕೇವಲ ಮಾತು ಯಾವುದಾದರೂ ಪರಿಹಾರ ನೀಡಬಲ್ಲದೇ? ನಿಸರ್ಗದೆಡೆಗೆ ಸಂವೇದನಾಶೀಲತೆ, ಪ್ರಕೃತಿ ರಕ್ಷಣೆ ನಮ್ಮ ಸ್ವಭಾವದಲ್ಲಿ ಸಹಜವಾಗಿ ಬರಬೇಕು. ಇವು ನಮ್ಮ ಸಂಸ್ಕೃತಿಯೊಳಗೆ ಮಿಳಿತವಾಗಬೇಕು.

ಈ ವರ್ಷ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯ ವಹಿಸಲು ಭಾರತ ಹೆಮ್ಮೆ ಪಡುತ್ತಿದೆ. ಇದು ದೇಶದ ಮಹತ್ವದ ಸಾಧನೆ. ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸುವಲ್ಲಿ ಭಾರತದ ಪ್ರಯತ್ನವನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಪ್ರಸಕ್ತ ವರ್ಷದ ಧ್ಯೇಯ ವಾಕ್ಯ 'ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ' ಎಂದು. ಈ ಧ್ಯೇಯವಾಕ್ಯದ ಮಹತ್ವವನ್ನು ಅರ್ಥಮಾಡಿಕೊಂಡು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಪಾಲಿಥಿನ್‌ಅನ್ನು ಬಳಕೆ ಮಾಡದಂತೆ ಮನವಿ ಮಾಡುತ್ತೇನೆ.

ಈ ಪರಿಸರ ದಿನಾಚರಣೆಯ ದಿನದಂದು ನಮ್ಮ ಗ್ರಹವನ್ನು ಸ್ವಚ್ಛ ಮತ್ತು ಹಸಿರುಮಯಗೊಳಿಸಲು ಏನು ಮಾಡಬಹುದು ಎಂಬ ಬಗ್ಗೆ ಯೋಚನೆ ಮಾಡೋಣ. ಯಾವ ಹೊಸ ಪ್ರಯತ್ನಗಳನ್ನು ನಾವು ಮಾಡಬಹುದು ಎಂದು ಆಲೋಚಿಸಿ.

ಯೋಗದ ಅಭ್ಯಾಸವು ಧೈರ್ಯದ ವೃದ್ಧಿಗೆ ನೆರವಾಗುತ್ತದೆ. ಅದು ತಂದೆಯಂತೆ ನಮ್ಮನ್ನು ಯಾವಾಗಲೂ ಕಾಪಾಡುತ್ತದೆ. ತಾಯಿ ಮಗುವಿನೆಡೆಗೆ ತೋರುವ ಕ್ಷಮಾಗುಣ ನಮಗೆ ಯೋಗಾಭ್ಯಾಸದಿಂದ ಬರುತ್ತದೆ. ಮಾನಸಿಕ ನೆಮ್ಮದಿಯೆಂಬುದು ನಮ್ಮ ಕಾಯಂ ಸ್ನೇಹಿತನಾಗುತ್ತಾನೆ.

ಯೋಗದ ಮಹತ್ವವನ್ನು ಅಳವಡಿಸಿಕೊಂಡು, ಆರೋಗ್ಯಕರ, ಸಂತೋಷಕರ ಮತ್ತು ಸೌಹಾರ್ದಯುತ ದೇಶವನ್ನು ಸೃಷ್ಟಿಸಿ.

English summary
mann ki baat: Prime Minister Narendra Modi urged people to shun low-grade plastic and polythene to save environment, wildlife and health of the people in his mann ki baat speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X