ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿವೇಶನದ ನಡುವೆಯೇ ನರೇಂದ್ರ ಮೋದಿ ವಿದೇಶ ಪ್ರವಾಸ ಶುರು

|
Google Oneindia Kannada News

ನವದೆಹಲಿ, ಜುಲೈ 20: ಮುಂಗಾರು ಅಧಿವೇಶನ ಪ್ರಾರಂಭವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದೇಶಗಳ ಪ್ರವಾಸ ನಡೆಯಲಿದೆ.

ರ್ವಾಂಡಾ, ಉಗಾಂಡ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಮೋದಿ ಅವರು ಜುಲೈ 23-27 ರ ಅವಧಿಯಲ್ಲಿ ಐದು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.

ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಖರ್ಚು ವೆಚ್ಚ ಲೆಕ್ಕ ಬಹಿರಂಗಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಖರ್ಚು ವೆಚ್ಚ ಲೆಕ್ಕ ಬಹಿರಂಗ

ಪ್ರವಾಸದ ಆರಂಭದಲ್ಲಿ ಅವರು ಮೊದಲು ರ್ವಾಂಡಾಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಭಾರತೀಯ ಸಮುದಾಯದ ಜನರೊಂದಿಗೆ ಕೆಲ ಕಾಲ ಸಂವಾದ ನಡೆಸಲಿದ್ದಾರೆ.

prime minister narendra modi to visit rwanda, uganda south africa

ರ್ವಾಂಡಾಕ್ಕೆ ಭಾರತವು 200 ಹಸುಗಳನ್ನು ನೀಡಲಿದೆ. ಅಲ್ಲದೆ, ಆ ದೇಶಕ್ಕೆ ವಿಶೇಷ ಮಹತ್ವ ನೀಡಲಿದೆ. ಪ್ರಧಾನಿ ಮೋದಿ ಅವರ ಭೇಟಿಯ ವೇಳೆ ರ್ವಾಂಡಾಕ್ಕೆ ನೆರವು ಒದಗಿಸುವ ಘೋಷಣೆ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಟಿ.ಎಸ್. ತ್ರಿಮೂರ್ತಿ ತಿಳಿಸಿದ್ದಾರೆ.

ಬಳಿಕ ಅವರು ಉಗಾಂಡಕ್ಕೆ ಭೇಟಿ ನೀಡಲಿದ್ದು, ಉಗಾಂಡ ಅಧ್ಯಕ್ಷ ಯೊವೇರಿ ಮುಸೆವೇನಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.

ಅಲ್ಲದೆ, ಮೋದಿ ಅವರು ಉಗಾಂಡ ಸಂಸತ್ತು ಹಾಗೂ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕ

ನಂತರ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಳಗೊಳ್ಳುವ ಅಭಿವೃದ್ಧಿ, ಆರೋಗ್ಯ ಹಾಗೂ ಔಷಧಗಳು, ಶಾಂತಿ ಕಾಪಾಡುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಬ್ರಿಕ್ಸ್ ಸಮ್ಮೇಳನದ ಚರ್ಚೆಯ ಪ್ರಮುಖ ವಿಷಯಗಳಾಗಿರಲಿವೆ.

ಬ್ರಿಕ್ಸ್ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಹಲವು ದೇಶಗಳ ಮುಖಂಡರ ದ್ವಿಪಕ್ಷೀಯ ಮಾತುಕತೆಗಳು ಸಹ ನಡೆಯಲಿವೆ.

ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ..? ರಾಹುಲ್ ಮಾತಿಗೆ ನಕ್ಕರು ಮೋದಿ!ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ..? ರಾಹುಲ್ ಮಾತಿಗೆ ನಕ್ಕರು ಮೋದಿ!

ಈ ವೇಳೆ ಮೋದಿ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೊಸಾ ಅವರು ಸಭೆ ನಡೆಸಿ ಚರ್ಚಿಸಲಿದ್ದಾರೆ ಎಂದು ಅವರು ಹೇಳಿದರು.

ಮುಂಗಾರು ಅಧಿವೇಶನವು ಆಗಸ್ಟ್ 10ರವರೆಗೆ ನಡೆಯಲಿದ್ದು, ವಿದೇಶ ಪ್ರವಾಸದ ಬಳಿಕ ಮೋದಿ ಅವರು ಮತ್ತೆ ಕಲಾಪಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Prime Minister Narendra Modi to visit Rwanda, Unganda and South Africa from July 23-27. He will attend the BRICS Summit in South Africa during his visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X