ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 11ರಂದು ಮೋದಿ-ಬೈಡನ್ ವರ್ಚುವಲ್ ಮೀಟ್

|
Google Oneindia Kannada News

ನವದೆಹಲಿ, ಏಪ್ರಿಲ್ 10: ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ (ಏಪ್ರಿಲ್ 11) ವರ್ಚುವಲ್ ಆಗಿ ಭೇಟಿಯಾಗಲಿದ್ದಾರೆ. ಇದು ಬೈಡೆನ್ ಆಡಳಿತದ ಅಡಿಯಲ್ಲಿ ಮೊದಲ ಭಾರತ-ಯುಎಸ್ 2 + 2 ಸಂವಾದ ಎಂದು ಶ್ವೇತಭವನ ಭಾನುವಾರ ತಿಳಿಸಿದೆ.

"ನಮ್ಮ ಸರ್ಕಾರಗಳು, ಆರ್ಥಿಕತೆಗಳು ಮತ್ತು ನಮ್ಮ ಜನರ ನಡುವಿನ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಲು ಅಧ್ಯಕ್ಷ ಜೋ ಬೈಡೆನ್, ಸೋಮವಾರ, ಏಪ್ರಿಲ್ 11 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ," ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಘೋಷಿಸಿದರು.

ಬೈಡನ್ ಎಚ್ಚರಿಕೆ ಬಳಿಕ ಭಾರತ-ಯುಎಸ್ ಸಂಬಂಧವನ್ನು ಹದಗೆಡುವ ಅಪಾಯಬೈಡನ್ ಎಚ್ಚರಿಕೆ ಬಳಿಕ ಭಾರತ-ಯುಎಸ್ ಸಂಬಂಧವನ್ನು ಹದಗೆಡುವ ಅಪಾಯ

ವರ್ಚುವಲ್ ಸಭೆಯಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋವಿಡ್ ಸಾಂಕ್ರಾಮಿಕ ರೋಗ, ಹವಾಮಾನ ಬಿಕ್ಕಟ್ಟನ್ನು ಎದುರಿಸುವುದು, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಭದ್ರತೆಯನ್ನು ಹೆಚ್ಚಿಸುವುದು ಮೊದಲಾದ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ.

Prime Minister Narendra Modi to virtually meet US President Joe Biden on April 11

ಉಭಯ ನಾಯಕರ ಬಗ್ಗೆ ಯಾವೆಲ್ಲಾ ವಿಚಾರದ ಬಗ್ಗೆ ಚರ್ಚೆ?

ಅಂತರರಾಷ್ಟ್ರೀಯ ಆದೇಶವನ್ನು ಎತ್ತಿಹಿಡಿಯುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಸಹಕಾರವನ್ನು ಚರ್ಚಿಸಲಿದ್ದಾರೆ. ಹಾಗೆಯೇ ಪ್ರಜಾಪ್ರಭುತ್ವ ಮತ್ತು ಇಂಡೋ-ಪೆಸಿಫಿಕ್‌ ವಿಚಾರದಲ್ಲಿಯೂ ಉಭಯ ನಾಯಕರುಗಳು ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ತಿಳಿಸಿದ್ದಾರೆ.

ಉಭಯ ನಾಯಕರು ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಅಭಿವೃದ್ಧಿ ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ಮುನ್ನಡೆಸಲಿದ್ದಾರೆ ಎಂದು ಪ್ಸಾಕಿ ಹೇಳಿದರು.

ಉಕ್ರೇನ್‌-ರಷ್ಯಾ ಯುದ್ಧದ ಬಗ್ಗೆ ಭಾರತದ ಪ್ರತಿಕ್ರಿಯೆ ಅಸ್ಥಿರ: ಜೋ ಬೈಡೆನ್‌ಉಕ್ರೇನ್‌-ರಷ್ಯಾ ಯುದ್ಧದ ಬಗ್ಗೆ ಭಾರತದ ಪ್ರತಿಕ್ರಿಯೆ ಅಸ್ಥಿರ: ಜೋ ಬೈಡೆನ್‌

ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆಯೂ ಪ್ರಸ್ತಾಪ

"ಉಕ್ರೇನ್ ವಿರುದ್ಧ ರಷ್ಯಾದ ಕ್ರೂರ ಯುದ್ಧದ ಪರಿಣಾಮಗಳ ಬಗ್ಗೆಯೂ ಮಾತುಕತೆ ನಡೆಯಲಿದೆ. ಜಾಗತಿಕ ಆಹಾರ ಪೂರೈಕೆ ಮತ್ತು ಸರಕು ಮಾರುಕಟ್ಟೆಗಳ ಮೇಲೆ ಅದರ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಮೋದಿ, ಬೈಡೆನ್ ಸಮಾಲೋಚನೆ ನಡೆಸಲಿದ್ದಾರೆ," ಎಂದು ತಿಳಿಸಿದರು.

Recommended Video

ಅಸಲಿಗೆ Pontingಗೆ ಅಷ್ಟೊಂದು ಕೋಪ ಬಂದಿದ್ದೇಕೆ ? | Oneindia Kannada

ಬೈಡೆನ್ ಮಾರ್ಚ್‌ನಲ್ಲಿ ಇತರ ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೋದಿಯವರ ಜೊತೆ ಕೊನೆಯದಾಗಿ ಮಾತನಾಡಿದರು. ಇನ್ನು ಈ ಸಭೆಯು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವಿನ ಯುಎಸ್-ಭಾರತ 2+2 ಮಂತ್ರಿಮಂಡಲದ ಮೊದಲು ನಡೆಯಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

English summary
Prime Minister Narendra Modi to virtually meet US President Joe Biden on Monday, April 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X