ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಮಾ. 11: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಹಿಂದು ಮಹಾಸಾಗರದಲ್ಲಿನ ರಾಷ್ಟ್ರ ಸೀಶೆಲ್‌ಗೆ ಭೇಟಿ ನೀಡಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಭಾರತದ ಭದ್ರತೆ ಮತ್ತು ಸಾಗರೋತ್ತರ ವ್ಯವಹಾರಗಳ ಪ್ರಗತಿಯ ದೃಷ್ಟಿಯಿಂದ ನಾಲ್ಕು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಜಲ ಮಾರ್ಗ ಸಮೀಕ್ಷೆ, ನವೀಕರಿಸಬಹುದಾದ ಇಂಧನ ಶಕ್ತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಮುದ್ರಯಾನದ ವಿಚಾರಕ್ಕೆ ಸಂಬಂಧಿಸಿ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.[ಸಂಸತ್ ಕಲಾಪದಲ್ಲಿ ಮೋದಿ ಹೇಳಿದ್ದೇನು]

modi

ಮೋದಿ ಸೀಶೆಲ್ಸ್‌ ಅಧ್ಯಕ್ಷ ಜೇಮ್ಸ್ ಮೈಕಲ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಾಗರದ ಕಣ್ಗಾವಲಿಗಾಗಿ ರಾಡಾರ್‌ ವ್ಯವಸ್ಥೆ ಕೈಗೊಳ್ಳಲು ಸಹಕಾರ ನೀಡುವುದು ಸೇರಿದಂತೆ ಭದ್ರತಾ ವಿಚಾರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಇದೇ ವೇಳೆ ಸಿಶೇಲ್ಸ್‌ ನಾಗರಿಕರಿಗೆ 3 ತಿಂಗಳ ಕಾಲ ಭಾರತದ ವೀಸಾವನ್ನು ಉಚಿತವಾಗಿ ನೀಡಲಾಗಿವುದು. ಭದ್ರತೆಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳು ಒಂದಾಗಿ ಶ್ರಮಿಸಲಿವೆ ಎಂದು ಮೋದಿ ತಿಳಿಸಿದ್ದಾರೆ.[ಲೋಕಸಭೆ ಕ್ಯಾಂಟೀನ್ ಊಟ ಮಾಡಿದ ಮೋದಿ]

ಸೀಶೆಲ್‌ ಭೇಟಿಯ ಬಳಿಕ ಪ್ರಧಾನಿ ಮಾರಿಷಸ್‌ಗೆ ತೆರಳಲಿದ್ದಾರೆ. ನಂತರ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದು ವಿದೇಶಿ ಬಾಂಧವ್ಯಗಳ ಕುರಿತ ಚರ್ಚೆ ನಡೆಯಲಿದೆ.

English summary
Prime Minister Narendra Modi arrived in Victoria (capital of Seychelles) on Wednesday night on the first leg of his three-nation tour that will also take him to Mauritius and Sri Lanka, observing that strong relations with Indian Ocean island countries were "vital" for India's security and progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X