ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀತಿ ಸಂಹಿತೆ ಉಲ್ಲಂಘನೆ: ಮೋದಿಗೆ ಕ್ಲೀನ್‌ಚಿಟ್ ನೀಡಿದ ಆಯೋಗ

|
Google Oneindia Kannada News

ನವದೆಹಲಿ, ಮಾರ್ಚ್ 29: ಮಿಶನ್ ಶಕ್ತಿಯ ಯಶಸ್ಸಿನ ಬಗ್ಗೆ ಅನುಮತಿ ಪಡೆಯದೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮೋದಿ ಅವರ ಭಾಷಣ ಅದನ್ನು ಉಲ್ಲಂಘನೆ ಮಾಡಿದೆಯೇ ಎಂಬ ಬಗ್ಗೆ ಆಯೋಗದ ಸಮಿತಿ ಪರಿಶೀಲನೆ ನಡೆಸಿತ್ತು. ಶುಕ್ರವಾರ ಸಭೆ ನಡೆಸಿದ ಸಮಿತಿ, ಮೋದಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದೆ.

ಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗ ಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗ

ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ ನೇತೃತ್ವದ ಸಮಿತಿಯು ಪ್ರತಿಪಕ್ಷಗಳ ದೂರಿನ ಅನ್ವಯ ದೂರದರ್ಶನ ಮತ್ತು ಆಕಾಶವಾಣಿಗಳಿಂದ ಭಾಷಣದ ಮಾಹಿತಿ ಪಡೆದುಕೊಂಡು ಪರಿಶೀಲನೆಗೆ ಒಳಪಡಿಸಿತ್ತು.

prime minister narendra modi model code of conduct mission shakti election commission clean chit

'ಮೋದಿ ಅವರು ಬಿಜೆಪಿಯ ಹೆಸರನ್ನು ಭಾಷಣದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಅಲ್ಲದೆ, ಅವರು ಮತಕ್ಕಾಗಿ ಯಾಚಿಸಿಲ್ಲ' ಎಂದು ಸಕ್ಸೇನಾ ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಮೋದಿ? ಇಲ್ಲಿದೆ ಉತ್ತರಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಮೋದಿ? ಇಲ್ಲಿದೆ ಉತ್ತರ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಭಟನೆ ಬಳಿಕ ಚುನಾವಣಾ ಆಯೋಗ ಸಮಿತಿಯನ್ನು ರಚಿಸಿತ್ತು. ವಿಜ್ಞಾನಿಗಳ ಸಾಧನೆಯನ್ನು ನಾಟಕೀಯವಾಗಿ ರಾಜಕೀಯ ಉದ್ದೇಶಕ್ಕೆ ಪ್ರಧಾನಿ ಬಳಸಿಕೊಂಡಿದ್ದಾರೆ. ಅವರು ಸರ್ಕಾರದ ಸಾಧನೆಯನ್ನಾಗಿ ಬಿಂಬಿಸಿಕೊಂಡಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿಲ್ಲ ಎಂದು ಅವರು ಆರೋಪಿಸಿದ್ದರು.

'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಕ್ಸೇನಾ ಅವರು, ಪ್ರಧಾನಿಯವರ ಭಾಷಣವನ್ನು ಪ್ರಸಾರ ಮಾಡಲು ಪ್ರಧಾನ ಮಂತ್ರಿ ಕಾರ್ಯಾಲಯವು ತಮಗೆ ಮಾಹಿತಿ ನೀಡಿರಲಿಲ್ಲ, ಅದಕ್ಕೆ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ತಿಳಿಸಿದ್ದರು.

ಚುನಾವಣಾ ಆಯೋಗದ ಸಮಿತಿಯು ದೂರದರ್ಶನ ಮತ್ತು ಆಕಾಶವಾಣಿಗಳಿಗೆ ಪತ್ರ ಬರೆದು ಭಾಷಣ ಪ್ರಸಾರ ಮೂಲದ ಬಗ್ಗೆ ಪ್ರಶ್ನಿಸಿತ್ತು. ಸರ್ಕಾರಿ ಸ್ವಾಮ್ಯದ ಪ್ರಸಾರಕರು ಖಾಸಗಿ ಅಂತರ್ಜಾಲ ವಿಡಿಯೋ ಪೋರ್ಟಲ್ ಯೂಟ್ಯೂಬ್‌ ಮೂಲಕ ನೇರಪ್ರಸಾರವನ್ನು ಪಡೆದುಕೊಂಡಿದ್ದಾಗಿ ಮಾಹಿತಿ ನೀಡಿದ್ದರು.

English summary
A Committee of Election Commission said that, Prime Minister Narendra Modi did not violate the Model Code of Conduct in his Mission Shakti speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X