ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು 'ಚೌಕಿದಾರ'ರೊಂದಿಗೆ ಪ್ರಧಾನಿ ಮೋದಿ ಸಂವಾದ

|
Google Oneindia Kannada News

Recommended Video

lok sabha election 2019: 'ಚೌಕಿದಾರ'ರೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ, ಮಾರ್ಚ್ 20: 'ಮೇಂ ಭೀ ಚೌಕಿದಾರ್' ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಇರುವ 'ಚೌಕಿದಾರ'ರೊಂದಿಗೆ ಬುಧವಾರ ಸಂವಾದ ನಡೆಸಲಿದ್ದಾರೆ.

#MeinBhichowkidar ಅಭಿಯಾನದ ವಿರುದ್ಧ ಕಾಂಗ್ರೆಸ್ ಆಕ್ರೋಶ #MeinBhichowkidar ಅಭಿಯಾನದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಆಡಿಯೋ ಬ್ರಿಡ್ಜ್ ತಂತ್ರಜ್ಞಾನದ ಮೂಲಕ ಈ ಸಂವಾದ ನಡೆಯಲಿದೆ. 'ಮೇಂ ಭೀ ಚೌಕಿದಾರ್' ಆಂದೋಲನಕ್ಕೆ ಬೆಂಬಲ ನೀಡಿರುವ ಜನರನ್ನು ಉದ್ದೇಶಿಸಿ ಮೋದಿ ಅವರು ಮಾರ್ಚ್ 31ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮತ್ತೊಮ್ಮೆ ಮಾತನಾಡಲಿದ್ದಾರೆ.

ಪ್ರಧಾನಿ ಮಾಡಿ ನಿಮ್ಮ ಕಾವಲುಗಾರನಾಗ್ತೇನೆ ಎಂದು, ಆಗಿದ್ದು ಅಂಬಾನಿ, ಅದಾನಿ ಚೌಕೀದಾರ: ರಾಹುಲ್ ಪ್ರಧಾನಿ ಮಾಡಿ ನಿಮ್ಮ ಕಾವಲುಗಾರನಾಗ್ತೇನೆ ಎಂದು, ಆಗಿದ್ದು ಅಂಬಾನಿ, ಅದಾನಿ ಚೌಕೀದಾರ: ರಾಹುಲ್

ಸಾಮಾನ್ಯವಾಗಿ ಆರಂಭಿಸಿದ ಆಂದೋಲನ ಬೃಹತ್ ಚಳವಳಿಯಾಗಿ ಬದಲಾಗಿದೆ ಎಂದು ಪ್ರಧಾನಿ ಮೋದಿ ಅವರ ಎರಡು ಕಾರ್ಯಕ್ರಮಗಳ ಬಗ್ಗೆ ಪ್ರಕಟಣೆ ನೀಡಿರುವ ಬಿಜೆಪಿ ಮಾಧ್ಯಮ ಘಟಕದ ಸಂಚಾಲಕ ಅನಿಲ್ ಬಲೂನಿ ತಿಳಿಸಿದ್ದಾರೆ.

Prime Minister Narendra Modi interaction with chowkidars

ಟ್ವಿಟ್ಟರ್‌ನಲ್ಲಿ ಕನಿಷ್ಠ 20 ಲಕ್ಷ ಜನರು ಬೆಂಬಲಕ್ಕೆ ಬಂದಿದ್ದಾರೆ ಮತ್ತು 'ಮೇಂ ಭೀ ಚೌಕಿದಾರ್' ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ! ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ!

'ಹಿನ್ನೆಲೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡುವ, ದೇಶದ ಅಗೋಚರ ಸ್ಥಂಬಗಳಾದ ಸಾಮಾನ್ಯ ಜನರನ್ನು ಗುರಿಯಾಗಿರಿಸಿಕೊಂಡಿದ್ದ ಈ ಕಾರ್ಯಕ್ರಮ ಈಗಾಗಲೇ ಬೃಹತ್ ಚಳವಳಿಯಾಗಿ ಮಾರ್ಪಟ್ಟಿದೆ. ಮಾರ್ಚ್ 20ರಂದು ನಡೆಸುವ ಚೌಕಿದಾರರೊಂದಿಗಿನ ಸಂವಾದ 'ಅಂತ್ಯೋದಯ' ಮತ್ತು 'ಸಬ್‌ ಕಾ ಸಾತ್ ಸಬ್‌ಕಾ ವಿಕಾಸ್' ವಿಷಯಗಳತ್ತ ಪ್ರಮುಖವಾಗಿ ಬೆಳಕು ಚೆಲ್ಲಲಿವೆ' ಎಂದಿದ್ದಾರೆ.

English summary
Prime Minister Narendra Modi on Wednesday would interact with people, mainly Chowkidars across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X