ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ 30ರಂದು ಕೇಂದ್ರ ಸಂಪುಟ ಪುನಾರಚನೆ: ರಾಜ್ಯದ 1 ವಿಕೆಟ್ ಡೌನ್?

By Balaraj
|
Google Oneindia Kannada News

ನವದೆಹಲಿ, ಜೂನ್ 29 : ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದ ಒಂದು ತಿಂಗಳ ನಂತರ, ಕೇಂದ್ರದ ನರೇಂದ್ರ ಮೋದಿ ಸರಕಾರ ಸಂಪುಟ ಪುನಾರಚನೆಗೆ ಮುಂದಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಹೊರಬೀಳುತ್ತಿದೆ.

ಪ್ರಮುಖವಾಗಿ, ಬರುವ ವರ್ಷದ ಆದಿಯಲ್ಲಿ ನಡೆಯಲಿರುವ ಉತ್ತರಪ್ರದೇಶ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಗುರುವಾರ (ಜೂ 30) ಕೆಲವೊಂದು ಹಾಲಿ ಸಂಸದರಿಗೆ ಕೊಕ್ ನೀಡಿ, ಹೊಸಬರನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರಕ್ಕೆ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. (ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಕೊಡುಗೆ)

ಜುಲೈ 5ರಂದು ಆಫ್ರಿಕಾ ಪ್ರವಾಸಕ್ಕೆ ಪ್ರಧಾನಿ ಮೋದಿ ಹೊರಡಲಿರುವುದರಿಂದ, ಅದಕ್ಕೆ ಮುನ್ನ ಮಧ್ಯಂತರ ಸಂಪುಟ ಪುನಾರಚನೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಸಿಎನ್ಎನ್ - ಐಬಿಎನ್ ವರದಿ ಮಾಡಿದೆ. ಸಂಪುಟದಿಂದ ಕೈಬಿಡಲಿರುವವರ ಪಟ್ಟಿಯಲ್ಲಿ ಕರ್ನಾಟಕದ ನಾಯಕರೊಬ್ಬರ ಹೆಸರೂ ಕೇಳಿಬರುತ್ತಿದೆ.

ಉತ್ತರಪ್ರದೇಶ ಮೂಲದ ನಾಲ್ವರು ಮುಖಂಡರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಸಂಪುಟ ಪುನಾರಚನೆಯ ನಿಟ್ಟಿನಲ್ಲಿ ಅಮಿತ್ ಶಾ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಇಬ್ಬರೂ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. (ಟೈಮ್ಸ್ ನೌ ಸಂದರ್ಶನದಲ್ಲಿ ಮೋದಿ)

ರಾಷ್ಟಪತಿ ಭವನದ ಅಶೋಕ ಹಾಲ್ ನಲ್ಲಿ ನೂತನ ಸಚಿವರ ಪದಗ್ರಹಣಕ್ಕೆ ಸಿದ್ದತೆ ನಡೆಯುತ್ತಿದ್ದು, ಗುರುವಾರ ಸಂಪುಟ ಪುನರಾರಚನೆ ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ.

ಜಾತಿ ಸಮೀಕರಣ

ಜಾತಿ ಸಮೀಕರಣ

ಉತ್ತರಪ್ರದೇಶ ಚುನಾವಣೆ ಎದುರಾಗುತ್ತಿರುವುದರಿಂದ ಪಿಎಂ ಮೋದಿ ಜಾತಿ ಸಮೀಕರಣದ ಲೆಕ್ಕಾಚಾರಕ್ಕೆ ಹೋಗುವ ಸಾಧ್ಯತೆಯಿದೆ. ಆದರೆ, ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆಗೆ ಮೋದಿ ಮುಂದಾಗುವ ಸಾಧ್ಯತೆ ಕಮ್ಮಿ.

ನಜ್ಮಾ ಹೆಫ್ತುಲ್ಲಾ ಕೊಕ್ ಸಾಧ್ಯತೆ

ನಜ್ಮಾ ಹೆಫ್ತುಲ್ಲಾ ಕೊಕ್ ಸಾಧ್ಯತೆ

ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ಇವರ ಜೊತೆಗೆ ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಅವರನ್ನೂ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ.

ಸದಾನಂದ ಗೌಡ

ಸದಾನಂದ ಗೌಡ

ಸಾಫ್ಟ್ ಟಾರ್ಗೆಟ್ ಆಗಿರುವ ಕೇಂದ್ರ ಕಾನೂನು ಸಚಿವ ಡಿ ವಿ ಸದಾನಂದ ಗೌಡ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ. ಹಿಂದೆ ಡಿವಿಎಸ್ ಅವರನ್ನು ಕೇಂದ್ರ ರೈಲ್ವೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

ಸಚಿವ ಸ್ಥಾನ ಭಾಗ್ಯ ಯಾರಿಗೆ?

ಸಚಿವ ಸ್ಥಾನ ಭಾಗ್ಯ ಯಾರಿಗೆ?

ರಾಜಸ್ಥಾನದ ಹಿರಿಯ ಮುಖಂಡ ಅರ್ಜುನ್ ಮೇಗ್ವಾಲ್
ಮಧ್ಯಪ್ರದೇಶದ ಸಂಸದ ರಾಕೇಶ್ ಸಿಂಗ್
ಅಸ್ಸಾಂನ ಮಂಗೋಲ್ದಾಯಿ ಸಂಸದ ರಮನ್ ದೇಖಾ
(ಚಿತ್ರದಲ್ಲಿ ಅರ್ಜುನ್ ಮೇಗ್ವಾಲ್)

ಸಚಿವ ಸ್ಥಾನ ಭಾಗ್ಯ, ಕೊಕ್ ಯಾರಿಗೆ?

ಸಚಿವ ಸ್ಥಾನ ಭಾಗ್ಯ, ಕೊಕ್ ಯಾರಿಗೆ?

ಓಬಿಸಿ ಸಮುದಾಯದ, ಅಪ್ನಾ ದಳದ ಅನುಪ್ರಿಯಾ ಪಟೇಲ್
ಕೃಷಿ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರಿಗೆ ಭಡ್ತಿ ಸಾಧ್ಯತೆ
ರಾಜ್ಯ ಸಚಿವ ವಿಜಯ್ ಸಂಪ್ಲಾ - ಕೊಕ್
ಯೋಗಿ ಆದಿತ್ಯನಾಥ್ ಅವರು ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ
(ಚಿತ್ರದಲ್ಲಿ ಯೋಗಿ ಆದಿತ್ಯನಾಥ್)

ಫಸ್ಟ್ ಪೋಸ್ಟ್ ವರದಿ

ಫಸ್ಟ್ ಪೋಸ್ಟ್ ವರದಿ

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಉತ್ತರಪ್ರದೇಶದ ಮುಖಂಡ ಮಹೇಶ್ ಶರ್ಮಾ ಹಾಗೂ ರಾಘವ್ ಲಖನ್ ಪಾಲ್, ಅಸ್ಸಾಂನ ರಾಮೇಶ್ವರ ತೇಲಿ, ಉತ್ತರಾಖಾಂಡ್ ರಾಜ್ಯದ ಭಗತ್ ಸಿಂಗ್ ಕೋಶಿಯಾರಿ ಮತ್ತು ಅಜಯ್ ತಂಟಾ ಅವರ ಹೆಸರೂ ಸಂಪುಟ ಸೇರುವವರ ಪಟ್ಟಿಯಲ್ಲಿರುವ ಸಾಧ್ಯತೆಯಿದೆ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ.(ಚಿತ್ರದಲ್ಲಿ: ನವಜೋತ್ ಸಿದ್ದು)

English summary
Going by the arrangements planned at Rashtrapati Bhavan, PM Narendra Modi is preparing to rejig his Council of Ministers on Thursday (June 30). Union Law Minister DV Sadananda Gowda is likely to be on his way out, as per First Post report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X