ಬುಲೆಟ್‌ ಟ್ರೈನ್ ಯೋಜನೆಗೆ ಇಂದು ಮೋದಿ - ಅಬೆ ಅಡಿಗಲ್ಲು

Subscribe to Oneindia Kannada
   Bullet train : Today Mumbai To Ahmadabad Bullet Train PM Modi And Shinzo Abe Foundation Stone

   ನವದೆಹಲಿ, ಸೆಪ್ಟೆಂಬರ್ 13: ಬಹುನಿರೀಕ್ಷಿತ ಅಹಮದಾಬಾದ್‌ ಮತ್ತು ಮುಂಬೈ ನಡುವಿನ ಬುಲೆಟ್‌ ಟ್ರೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಹಮದಾಬಾದ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

   ಶೆಲ್ ಕಂಪನಿಗಳೇ ಮೋದಿ ಸರ್ಕಾರದ ಮುಂದಿನ ಟಾರ್ಗೆಟ್

   2014ರ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಬುಲೆಟ್ ರೈಲು ಯೋಜನೆಯ ಭರವಸೆ ನೀಡಿದ್ದರು. ಇದೀಗ ತಾವು ನೀಡಿದ್ದ ಭರವಸೆ ಇಡೇರಿಸುವಲ್ಲಿ ಒಂದು ಹೆಜ್ಜೆ ಮುಂದಕ್ಕೆ ಸಾಗಲಿದ್ದಾರೆ.

   Prime Minister Narendra Modi and Japan PM to kick start bullet train project on Thursday

   ರೂಪಾಯಿ1.10 ಲಕ್ಷ ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಜಪಾನ್ ಸರಕಾರ ಈ ಯೋಜನೆಗೆ ಬಂಡವಾಳ ಹೂಡಲಿದೆ. ಈಗಾಗಲೇ ಯೋಜನೆಗೆ ಪೂರ್ವಭಾವಿಯಾಗಿ ಮಣ್ಣಿನ ಪರೀಕ್ಷೆ ಮುಗಿದಿದೆ. ಡಿಸೆಂಬರ್‌ 2023ರ ಒಳಗೆ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

   ಶಾಂಘೈ, ಬೀಜಿಂಗ್ ನಡುವೆ ಶೀಘ್ರವೇ ವಿಶ್ವದ ಅತಿ ವೇಗದ ರೈಲು ಸೇವೆ

   750 ಪ್ರಯಾಣಿಕರು ಪ್ರಯಾಣಿಸಬಹುದಾದ ಸಾಮರ್ಥ್ಯದ ಬುಲೆಟ್‌ ರೈಲು ಇದಾಗಿರಲಿದೆ. ಈ ಬುಲೆಟ್ ರೈಲು ಚಾಲ್ತಿಗೆ ಬಂದರೆ ಅಹಮದಾಬಾದ್ ಮತ್ತು ಮುಂಬೈ ನಡುವಿನ ಹಾಲಿ ಪ್ರಯಾಣ ಅವಧಿ 8 ಗಂಟೆಯಿಂದ ಮೂರುವರೆ ಗಂಟೆಗೆ ಇಳಿಯಲಿದೆ.

   ಇದೇ ಭಾನುವಾರ ಪ್ರಧಾನಿ ನರೇಂದ್ರ ಮೋದಿ ತಮ್ಮ 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಇದಕ್ಕೆ ಜಪಾನ್ ಪ್ರಧಾನಿಯೂ ಸಾಕ್ಷಿಯಾಗಲಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Indian Prime Minister Narendra Modi and Japan PM Shinzo Abe will break ground on India's first bullet train project on Thursday in Ahmedabad.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ