ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ಹೈಲೆಟ್ಸ್

|
Google Oneindia Kannada News

ನವದೆಹಲಿ, ಆಗಸ್ಟ್ 15: ದೇಶದ 69ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿ ದೇಶವನ್ನು ಉದ್ದೇಶಿಸಿ ಪ್ರಸಾರ ಭಾಷಣ ಮಾಡಿದ್ದಾರೆ.

ಇದಕ್ಕೂ ಮುನ್ನ ರಾಜಘಾಟ್ ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ, ಮತ್ತೆ ವೇದಿಕೆಯಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಕವಚ ಬಳಸದೇ ಭಾಷಣ ಮಾಡಿದ್ದು ವಿಶೇಷ.

PM Narendra Modi address nation eve of Independence Day, 2015

ಪ್ರಧಾನಿ ಸ್ವಾತಂತ್ರೋತ್ಸವ ಭಾಷಣದ ಪ್ರಮುಖಾಂಶಗಳು:

> ಭಾರತೀಯರು ಆಡಳಿತದಲ್ಲಿ ಪಾರದರ್ಶಕತೆಯನ್ನು ಬಯಸುತ್ತಿದ್ದಾರೆ. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಲು ನಮ್ಮ ಸರಕಾರ ಕಟಿಬದ್ದವಾಗಿದೆ.
> ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣತೆತ್ತಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತ ವೀರರಿಗೆ ನನ್ನ ಸಲ್ಯೂಟ್.
> ಮಿಲಿಟರಿಯಲ್ಲಿ ಒನ್ ರ್ಯಾಂಕ್, ಒನ್ ಪೆನ್ಸನ್ ಸ್ಕೀಂ (OROP) ಜಾರಿಗೆ ತರುವ ಕೆಲಸ ಅಂತಿಮ ಹಂತದಲ್ಲಿದೆ. ಇಪ್ಪತ್ತು ವರ್ಷದ ಹಿಂದಿನ ಈ ಬೇಡಿಕೆಯನ್ನು ನಮ್ಮ ಸರಕಾರ ಜಾರಿಗೆ ತರಲಿದೆ.
> ಇದುವರೆಗೆ ಇಪ್ಪತು ಲಕ್ಷ ಜನ ಬಡವರಿಗಾಗಿ ತಮ್ಮ ಸಬ್ಸಿಡಿಯನ್ನು ತ್ಯಾಗ ಮಾಡಿದ್ದಾರೆ.
> ನಾವು ಅಧಿಕಾರಕ್ಕೆ ಬಂದು ಹದಿನೈದು ತಿಂಗಳಾದವು, ಭ್ರಷ್ಟಾಚಾರಕ್ಕೆ ಎಲ್ಲೂ ನಾವು ಆಸ್ಪದ ನೀಡಲಿಲ್ಲ.
> ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಬೇಕಾಗಿದೆ. ಹಾಗಾಗಿ, ನೀರು, ಇಂಧನ ಮುಂತಾದ ಬಳಕೆಯಲ್ಲಿ ಮಿತವ್ಯಯಕ್ಕೆ ಮುಂದಾಗಬೇಕಿದೆ.
> ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಯೂರಿಯಾ ತಲುಪಿಸಲು ಯೋಜನೆ ರೂಪಿಸಲಾಗುತ್ತಿದೆ.
> ದೇಶ ಸದೃಢವಾಗಲು ಪೂರ್ವ ಭಾರತದ ರಾಜ್ಯಗಳೂ ಅಭಿವೃದ್ದಿ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಆ ಭಾಗದಲ್ಲಿ ಗ್ಯಾಸ್ ಪೈಪ್ ಲೈನ್ ಮತ್ತು ರೈಲ್ವೇ ಜಾಲವನ್ನು ವಿಸ್ತರಿಸಲಿದ್ದೇವೆ.
> ಭವಿಷ್ಯನಿಧಿ (ಪಿಎಫ್) ಯೋಜನೆಯಲ್ಲಿ ಒಂದೇ ನಂಬರ್ ನೀಡುವ ವ್ಯವಸ್ಥೆ ಮಾಡಿದ್ದೇವೆ. ಹಾಗಾಗಿ, ಉದ್ಯೋಗ ಬದಲಾದರೂ ನಂಬರ್ ಒಂದೇ ಉಳಿಯುತ್ತದೆ. ಇದರಿಂದ ಕಾರ್ಮಿಕ ವರ್ಗದವರಿಗೆ ಅನುಕೂಲವಾಗಲಿದೆ.
> ಜವಾನ್ ಮತ್ತು ಕಿಸಾನ್ ದೇಶದ ಎರಡು ಕಣ್ಣುಗಳಿದ್ದಂತೆ. ಮುಂದಿನ ಒಂದು ಸಾವಿರ ದಿನದೊಳಗೆ 18500 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
> ದೇಶದ ಎಲ್ಲಾ ಬ್ಯಾಂಕುಗಳು ದಲಿತರು, ಬುಡುಕಟ್ಟು ಜನಾಂಗದವರಿಗೂ ಸೇರಿ ಸಾಲದ ವ್ಯವಸ್ಥೆಯನ್ನು ನೀಡಲು ಆದೇಶ ನೀಡಲಾಗಿದೆ.
> ಮಾತು ಕೊಟ್ಟಂತೆ, ಪ್ರಧಾನಮಂತ್ರಿ ಭೀಮಾ ಯೋಜನಾ, ಅಟಲ್ ಪೆನ್ಸನ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
>ಜನಧನ ಯೋಜನೆಯಡಿಯಲ್ಲಿ ಇದುವರೆಗೆ ಹದಿನೇಳು ಕೋಟಿ ಜನ ಬ್ಯಾಂಕ್ ಅಕೌಂಟ್ ತೆರೆದಿದ್ದಾರೆ.
>ಬಡವರು ಮುಖ್ಯವಾಹಿನಿಗೆ ಬರಬೇಕಾಗಿದೆ. ಹಾಗಾಗಿ, ನಮ್ಮ ಸರಕಾರದ ಎಲ್ಲಾ ಕಾರ್ಯಕ್ರಮಗಳು ಬಡವರ ಕಲ್ಯಾಣಕ್ಕಾಗಿ.
> ಟೀಂ ಇಂಡಿಯಾ ಮಾದರಿಯಲ್ಲಿ ನಮ್ಮಲ್ಲಿ ವ್ಯವಸ್ಥೆ ಇದೆ. ನಮ್ಮದು 125 ಕೋಟಿ ಭಾರತೀಯರ ದೊಡ್ದ ಟೀಮ್.
> 6 ದಶಕಗಳಿಂದ 40 ಕೋಟಿ ಜನರ ಬಳಿ ಬ್ಯಾಂಕ್ ಖಾತೆ ಇರಲಿಲ್ಲ. ದೇಶದ ಆರ್ಥಿಕ ವಿಚಾರಕ್ಕೆ ಬಂದಾಗ ಜನಧನ ಯೋಜನೆ ದೊಡ್ಡ ಬದಲಾವಣೆ ತಂದಿದೆ.
> ಅತ್ಯಂತ ಪ್ರಮುಖವಾದ ಶೌಚಾಲಯ ನಿರ್ಮಾಣ ವಿಚಾರದಲ್ಲೂ ನಾವು ಸಫಲರಾಗಿದ್ದೇವೆ. ಸರಕಾರೀ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಗಳ ನಿರ್ಮಾಣದಿಂದಾಗಿ ಶಾಲೆಗೆ ಬರುವ ಬಾಲಕಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
> ಭಾರತದಲ್ಲಿ ಜಾತೀಯತೆ, ಕೋಮುವಾದಕ್ಕೆ ಎಂದಿಗೂ ಜಾಗವಿಲ್ಲ.
> ದೇಶದ ಕೆಲವು ಭಾಗಗಳಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಿದ್ದೇವೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಮೂರು ಲಕ್ಷ ಕೋಟಿ ಲಾಭವಾಗಿದೆ.
> ಅನಿಲ ಸಬ್ಸಿಡಿಯ ಹೆಸರಿನಲ್ಲಿ ಬೇಕಾಬಿಟ್ಟಿ ಹಣ ಸೋರಿಕೆಯಾಗುತ್ತಿತ್ತು. ವರ್ಷಕ್ಕೆ ಹನ್ನೆರಡು ಸಾವಿರ ಕೋಟಿಗೂ ಅಧಿಕ ಹಣ ಪೋಲಾಗುತ್ತಿತ್ತು. ಬಡವರಿಗೆಂದು ಗ್ಯಾಸ್ ಸಬ್ಸಿಡಿ ಯೋಜನೆ ರೂಪಿಸಲಾಗಿತ್ತು, ಜೊತೆಗೆ ಶ್ರೀಮಂತಿರಿಗೂ ಸಬ್ಸಿಡಿ ನೀಡಲಾಗುತ್ತಿತ್ತು. ಇದನ್ನು ನಮ್ಮ ಸರಕಾರ ತಪ್ಪಿಸಿದೆ.
> ಸರಕಾರದ ಕೆಲವು ದಿಟ್ಟ ನಿರ್ಧಾರದಿಂದ ಹಣದುಬ್ಬರ ನಿಯಂತ್ರಣದಲ್ಲಿದೆ. ಎರಡಂಕಿಯಿದ್ದ ಹಣದುಬ್ಬರ ಇಂದು ಒಂದಂಕಿಗೆ ಇಳಿದಿದೆ.
> ಸಣ್ಣ ಉದ್ದಿಮೆದಾರರಿಗೆ ನೆರವು ನೀಡಿದರೆ ಉದ್ದಿಮೆ ಬೆಳೆಯುತ್ತದೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುತ್ತದೆ.
> ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು, ದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿತ್ತಿದೆ. ದೇಶದ ಯುವಜನತೆಯನ್ನು ಪ್ರೋತ್ಸಾಹಿಸಲು ನಮ್ಮ ಸರಕಾರ ಮುಂದಾಗಿದೆ.

English summary
Prime Minister Narendra Modi address nation, eve of Independence Day, 2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X