• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿನ್‌ ಜಾಗತಿಕ ಸಮಾವೇಶ: ಇಂದು ಪಿಎಂ ಮೋದಿ ಭಾಷಣ

|
Google Oneindia Kannada News

ನವದೆಹಲಿ, ಜು.05: ಕೋವಿಡ್‌ ವಿರುದ್ದ ರಾಷ್ಟ್ರದಾದ್ಯಂತ ಲಸಿಕೆ ನೀಡಲು ಆರಂಭಿಸಲಾದ ಕೋವಿನ್‌ ಕಾರ್ಯಕ್ರಮವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಡೆಯಲಿರುವ ಕೋವಿನ್ ಗ್ಲೋಬಲ್ ಕಾನ್ಕ್ಲೇವ್‌ನಲ್ಲಿ ಜಾಗತಿಕವಾಗಿ ಕೋವಿನ್‌ ಅನ್ನು ಪರಿಚಯಿಸಲಿದ್ದಾರೆ.

''ಕೆನಡಾ, ಮೆಕ್ಸಿಕೊ, ನೈಜೀರಿಯಾ, ಪನಾಮ ಮತ್ತು ಉಗಾಂಡಾ ಸೇರಿದಂತೆ ಸುಮಾರು 50 ದೇಶಗಳು ತಮ್ಮ ಲಸಿಕೆ ಅಭಿಯಾನ ನಡೆಸಲು ಕೋವಿನ್ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ,'' ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಸಿಇಒ ಡಾ.ಆರ್.ಎಸ್. ಶರ್ಮಾ ಇತ್ತೀಚೆಗೆ ಹೇಳಿದ್ದು, ಈ ಕೋವಿನ್‌ ಜಾಗತಿಕ ಸಮಾವೇಶದಲ್ಲಿ ಈ ರಾಷ್ಟ್ರಗಳು ಭಾಗಿಯಾಗಲಿದೆ.

'ಪೊಗೊನೋಟ್ರೋಫಿ': ಹೊಸ ಪದ ಕಲಿತು ಮೋದಿ ಕಾಲೆಳೆದ ಶಶಿ ತರೂರ್‌'ಪೊಗೊನೋಟ್ರೋಫಿ': ಹೊಸ ಪದ ಕಲಿತು ಮೋದಿ ಕಾಲೆಳೆದ ಶಶಿ ತರೂರ್‌

ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಸಮಿತಿಯ ಸಹಯೋಗದಲ್ಲಿ ಜು.5ರಂದು (ಇಂದು) ಸಂಜೆ 3 ಗಂಟೆಗೆ ಕೋವಿನ್‌ ಜಾಗತಿಕ ಸಮಾವೇಶ ನಡೆಯಲಿದೆ.

''ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋವಿನ್ ಗ್ಲೋಬಲ್ ಕಾನ್ಕ್ಲೇವ್‌ ಕುರಿತು ವಿಶೇಷವಾದ ಸಂದೇಶವನ್ನು ಹಂಚಿಕೊಳ್ಳಲಿದ್ದಾರೆ,'' ಎಂದು ರಾಷ್ಟ್ರೀಯ ಆರೋಗ್ಯ ಸಮಿತಿ (ಎನ್‌ಎಚ್‌ಎ) ತಿಳಿಸಿದೆ.

ವರ್ಚುವಲ್ ಕಾನ್ಕ್ಲೇವ್ ಅನ್ನು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ಡಾ.ಶರ್ಮಾ ಕೂಡಾ ಮಾತನಾಡಲಿದ್ದಾರೆ.

ಅಮೆರಿಕದ 245ನೇ ಸ್ವಾತಂತ್ರ್ಯ ‌ದಿನಾಚರಣೆಗೆ ಶುಭಕೋರಿದ ಮೋದಿಅಮೆರಿಕದ 245ನೇ ಸ್ವಾತಂತ್ರ್ಯ ‌ದಿನಾಚರಣೆಗೆ ಶುಭಕೋರಿದ ಮೋದಿ

ಕೊರೊನಾ ಲಸಿಕೆ ಅಭಿಯಾನದ ನಿರ್ವಹಣೆಗೆ ಭಾರತದಲ್ಲಿ ಕೋ-ವಿನ್ ಡಿಜಿಟಲ್‌ ಆವೃತ್ತಿಯನ್ನು ಅಭಿವೃದ್ದಿಪಡಿಸಲಾಗಿದೆ. ಇತ್ತೀಚೆಗೆ, ಅನೇಕ ದೇಶಗಳು ವೇದಿಕೆಯನ್ನು ಬಳಸಲು ಆಸಕ್ತಿ ತೋರಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Prime Minister Narendra Modi would be sharing his thoughts at the CoWIN Global Conclave to be held on Monday as India will offer the CoWIN platform as a digital public good to other countries to run their own COVID-19 inoculation drives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X