ರಾಷ್ಟ್ರಪತಿ ಚುನಾವಣೆ: ಮತದಾನ ಮಾಡಿದ ಮೋದಿ, ಸೋನಿಯಾ

Posted By:
Subscribe to Oneindia Kannada

ದೇಶಾದ್ಯಂತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ವಿವಿಧ ರಾಜ್ಯಗಳ ವಿಧಾನಸೌಧಗಳಲ್ಲಿ ಆಯಾ ರಾಜ್ಯಗಳ ಸಂಸದರು, ಶಾಸಕರು ತಮ್ಮ ಆಯ್ಕೆಯ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುತ್ತಿದ್ದಾರೆ.

ಇದೇ ವೇಳೆಯಲ್ಲೇ, ಸಂಸತ್ತಿನ ಅಧಿವೇಶನವೂ ಸೋಮವಾರ ಆರಂಭವಾಗಿದೆ. ಆದರೆ, ಮೊದಲ ದಿನ ಯಾವುದೇ ಕಲಾಪ ನಡೆಯಲಿಲ್ಲ.

ರಾಷ್ಟ್ರಪತಿ ಚುನಾವಣೆ: ಟ್ವಿಟ್ಟಿಗರು ಏನಂತಾರೆ?

ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಅಸುನೀಗಿದ ಅಮರನಾಥ್ ಯಾತ್ರಿಗಳಿಗೆ ಒಂದು ನಿಮಿಷದ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆನಂತರ, ಸದನವನ್ನು ಮಂಗಳವಾರಕ್ಕೆ (ಜುಲೈ 18) ಮುಂದೂಡಲಾಯಿತು.

ಆನಂತರ, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಲು ಸಂಸದರು ತೆರಳಿದರು.

ಕ್ರಿಮಿನಲ್ ಹಿನ್ನೆಲೆಯುಳ್ಳ 1,581 ಎಂಪಿಗಳಿಂದ ಮತದಾನ

ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮಧ್ಯಾಹ್ನದೊಳಗೆ ಮತ ಚಲಾಯಿಸಿದ ಪ್ರಮುಖ ಫೋಟೋಗಳು ಇಲ್ಲಿ ನಿಮಗಾಗಿ.

ಪ್ರಧಾನಿ ಹಕ್ಕು ಚಲಾವಣೆ

ಪ್ರಧಾನಿ ಹಕ್ಕು ಚಲಾವಣೆ

ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ ಚಲಾಯಿಸಿದ್ದು ಹೀಗೆ. ಈ ಚುನಾವಣೆಯಲ್ಲಿ 776 ಸಂಸತ್ ಸದಸ್ಯರು ಮತ ಚಲಾಯಿಸಲಿದ್ದಾರೆ.

ಒಡಿಶಾ ಸಿಎಂ ಮತ

ಒಡಿಶಾ ಸಿಎಂ ಮತ

ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು, ಅಲ್ಲಿನ ವಿಧಾನಸಭೆಯಲ್ಲಿ ಮತ ಚಲಾಯಿಸಿದರು.

ಸರ್ಬಾನಂದ ಮತದಾನ

ಸರ್ಬಾನಂದ ಮತದಾನ

ಗುವಾಹಟಿಯಲ್ಲಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ತಮ್ಮ ಆಯ್ಕೆ ಅಭ್ಯರ್ಥಿಗೆ ಮತ ಚಲಾಯಿಸಿದರು.

ಕಾಂಗ್ರೆಸ್ ಉಪಾಧ್ಯಕ್ಷರ ಮತದಾನ

ಕಾಂಗ್ರೆಸ್ ಉಪಾಧ್ಯಕ್ಷರ ಮತದಾನ

ನವದೆಹಲಿಯ ಸಂಸತ್ ಭವನದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮತ ಚಲಾಯಿಸಿದರು.

Ram Nath Kovind, the next President of India | Oneindia Kannada
ಕಾಂಗ್ರೆಸ್ ಅಧಿನಾಯಕಿ ಮತದಾನ

ಕಾಂಗ್ರೆಸ್ ಅಧಿನಾಯಕಿ ಮತದಾನ

ಸಂಸತ್ ಅಧಿವೇಶನಕ್ಕಾಗಿ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi and BJP chief Amit Shah were among the first to cast their votes to elect the 14th President of India.
Please Wait while comments are loading...